Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯ ಬಿಸಿಲಿಗೆ ದೇಹ ತಂಪಾಗಿಸೋ ಒಗ್ಗರಣೆ ಮಜ್ಜಿಗೆ ಹುಳಿ..!
ಅವಧಿ ಮುನ್ನವೇ ಬೇಸಿಗೆ ನೆತ್ತಿ ಸುಡುತ್ತಿದೆ. ಬೆಂಗಳೂರು ಸೇರಿ ರಾಜ್ಯದ ಹಲವು ಭಾಗದಲ್ಲಿ ಬೇಸಿಗೆಯ ಬಿಸಿಲು ಈಗಾಗಲೆ ಪ್ರಖರವಾಗಿದೆ. ಹೀಗಾಗಿ ದೇಹಕ್ಕೆ ತಂಪಾದ ಆಹಾರ ಸೇವನೆ ಬಹಳ ಮುಖ್ಯ. ಏಕೆಂದರೆ ಹೆಚ್ಚು ಬಿಸಿಲಿನ ಸಮಯದಲ್ಲಿ ದೇಹಕ್ಕೆ ತಂಪು ನೀಡುವಂತಹ ಆಹಾರ ಪದಾರ್ಥ ಸೇವಿಸುವುದು ಆರೋಗ್ಯಕ್ಕೆ ಬಹಳ ಉತ್ತಮ. ಹಾಗೆ ಮಸಾಲೆ ಪದಾರ್ಥಗಳಿಗಿಂತಲು ತಂಪಿನ ಸಾರು, ತಂಪಿನ ಪದಾರ್ಥ ಸವಿಯಲು ಶಿಫಾರಸು ಮಾಡಲಾಗುತ್ತದೆ.
ಹೀಗಾಗಿ ಈ ಸಮಯದಲ್ಲಿ ಮಸಾಲೆ ಮಜ್ಜಿಗೆ ಅಥವಾ ಮಜ್ಜಿಗೆ ಹುಳಿ ಮಾಡಿ ಸವಿಯುವುದು ಉತ್ತಮ. ಏಕೆಂದರೆ ಮಜ್ಜಿಗೆಯಲ್ಲಿ ಮಾಡುವಂತಹ, ಹಾಗೆ ಮೊಸರು ಬಳಸಿ ಮಾಡುವಂತಹ ಹುಳಿ, ಖಾದ್ಯಗಳು ದೇಹಕ್ಕೆ ಬಹಳ ಉತ್ತಮ. ಹಾಗಾದ್ರೆ ನಾವಿಂದು ಮಧ್ಯಾಹ್ನದ ಊಟಕ್ಕೆ ನಿಮ್ಮ ದೇಹ ತಣ್ಣಗಾಗುವಂತಹ ನೀವೆಂದು ಮಾಡಿರದ ಮಜ್ಜಿಗೆ ಒಗ್ಗರಣೆ ಮಾಡುವ ಕುರಿತು ನಾವು ತಿಳಿದುಕೊಳ್ಳೋಣ.

ಊಟದ ಜೊತೆಗೆ ಸವಿಯಲು ಈ ಒಗ್ಗರಣೆ ಮಜ್ಜಿಗೆ ಅದ್ಭುತವಾದ ರುಚಿ ನೀಡಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ನಿಮ್ಮ ದೇಹಕ್ಕೆ ತಂಪು ನೀಡುತ್ತೆ. ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಹೆಚ್ಚು ನೀರಿನ ಅಂಶ ಬೇಕಾಗುತ್ತದೆ. ಹೀಗಾಗಿ ಮಜ್ಜಿಗೆ ಒಗ್ಗರಣೆಯ ಈ ಹುಳಿ ದೇಹಕ್ಕೆ ಬಹಳ ಉತ್ತಮ. ಬೇಸಿಗೆಯ ಸಮಯದಲ್ಲಿ ದೇಹದ ಸಮತೋಲನ ಕಾಪಾಡಲು ಇದು ಸಹಕಾರಿಯಾಗಲಿದೆ.
ಹಾಗಾದ್ರೆ ಈ ಒಗ್ಗರಣೆ ಮಜ್ಜಿಗೆ ಹುಳಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಒಗ್ಗರಣೆ ಮಜ್ಜಿಗೆ ಹುಳಿ ಮಾಡಲು ಯಾವೆಲ್ಲಾ ಪದಾರ್ಥಗಳು
- ಮೊಸರು- ಅರ್ಧ ಲೀಟರ್
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಈರುಳ್ಳಿ
- ಕರಿಬೇವು
- ಎಣ್ಣೆ
- ಸಾಸಿವೆ
- ಉಪ್ಪು
ಒಗ್ಗರಣೆ ಮಜ್ಜಿಗೆ ಹುಳಿ ಮಾಡುವ ವಿಧಾನವೇನು?
ಮೊದಲು ಮೊಸರನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ನೀರು ಹಾಗೂ ಉಪ್ಪು ಹಾಕಿ ಸ್ವಲ್ಪ ಮಿಕ್ಸ್ ಮಾಡಿಕೊಳ್ಳಿ. ಇದು ಮಜ್ಜಿಗೆಯಾಗಿ ಬದಲಾಗಬೇಕು. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಇದಕ್ಕೆ ಸಾಸಿವೆ, ಹಸಿ ಮೆಣಸು, ಕರಿಬೇವು ಹಾಕಿ ಅರ್ಧ ನಿಮಿಷ ಫ್ರೈ ಮಾಡಿಕೊಳ್ಳಿ.
ಇದಾದ ಬಳಿಕ ಒಂದು ಈರುಳ್ಳಿಯನ್ನು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಒಲೆ ಆಫ್ ಮಾಡಿಕೊಂಡು ಈ ಒಗ್ಗರಣೆಯನ್ನು ಬೌಲ್‌ನಲ್ಲಿರುವ ಮಜ್ಜಿಗೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಮೇಲೆ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಬೆರೆಸಿಕೊಳ್ಳಿ. ಇಷ್ಟಾದರೆ ಸಾಕು ಅದ್ಭುತ ಒಗ್ಗರಣೆ ಸುವಾಸನೆಯ ಮಜ್ಜಿಗೆ ಹುಳಿ ರೆಡಿಯಾಗುತ್ತದೆ.
ಊಟದ ಜೊತೆಗೆ ಬೇಸಿಗೆಯ ಸಮಯದಲ್ಲಿ ಅದರ ರುಚಿ ದುಪ್ಪಟ್ಟಾಗುತ್ತದೆ. ಹಾಗೆ ಇದರ ಜೊತೆಗೆ ಯಾವುದಾದರು ತರಕಾರಿಯ ಪಲ್ಯ, ಹಾಗೆ ಉಪ್ಪಿನಕಾಯಿ, ಹಪ್ಪಳ ಹೀಗೆ ಯಾವುದಾದರೊಂದು ಖಾದ್ಯ ಇದ್ದರಂತು ಬೇರೆ ಮಸಾಲೆಯುಕ್ತ ಸಾರಿನಲ್ಲಿ ನೀವು ಊಟ ಸವಿಯುವುದನ್ನೇ ಬಿಡುತ್ತೀರಿ. ಅಷ್ಟೊಂದು ರುಚಿಯಾಗಿರುತ್ತೆ ಈ ಒಗ್ಗರಣೆ ಮಜ್ಜಿಗೆ. ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ.



Click it and Unblock the Notifications