ರುಚಿ ರುಚಿಯ ಒಬ್ಬಟ್ಟು ಸಾರು ಮಾಡೋದು ಹೇಗೆ? ಇಲ್ಲಿದೆ ಸುಲಭದ ರೆಸಿಪಿ

Posted By:

ಬೇಳೆ ಸಾರು, ಕಟ್ಟಿನ ಸಾರು, ಮೆಣಸಿನ ಸಾರು, ಕೂಟು, ಈರುಳ್ಳಿ ಸಾಂಬಾರು, ಸೊಪ್ಪಿನ ಸಾರು ಮುಂತಾದ ವಿವಿಧ ಬಗೆಯ ಸಾರು, ಸಾಂಬಾರು ಮಾಡಿ ನಿಮಗೆ ತಿಳಿದಿರುತ್ತದೆ. ಅನ್ನದ ಜೊತೆಗೆ ನೀವು ಈ ರೀತಿಯ ಬಗೆ ಬಗೆಯ ಸಾರು ಮಾಡಿ ಸವಿದಿರುತ್ತೀರಿ. ಆದ್ರೆ ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಎಂದಾದ್ರು ಮಾಡಿ ಅದರ ಸವಿ ನೋಡಿದ್ದೀರಾ.?

ಈ ಸಾರು ಮಾಡಿದರೆ ಅನ್ನಕ್ಕೆ ಬಹಳ ರುಚಿ ನೀಡಲಿದೆ. ಹಾಗೆ ಚಪಾತಿ, ಮುದ್ದೆಗೂ ಇದು ಬಹಳ ರುಚಿಕರ ಸಾರು. ಹಾಗಾದ್ರೆ ನಾವಿಂದು ಈ ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

How To Make Obbattu Saaru Recipe At Home In Kannada

ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ. ಮಾಡುವಾಗ ಯಾವೆಲ್ಲಾ ಸೂಚನೆ ಪಾಲಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಮಾಡಲು ಬೇಕಾಗುವ ಪದಾರ್ಥಗಳು

  • ಬೇಳೆ ಬೇಯಿಸಿ ಬಸಿದ ನೀರು
  • ಜೀರಿಗೆ
  • ಮೆಂತ್ಯ
  • ಕಾಳುಮೆಣಸು
  • ಬೆಳ್ಳುಳ್ಳಿ
  • ಒಣಮೆಣಸಿನಕಾಯಿ
  • ಕರಿಬೇವಿನ ಸೊಪ್ಪು
  • ಕೊತ್ತಂಬರಿ ಸೊಪ್ಪು
  • ತೆಂಗಿನಕಾಯಿ ತುರಿ
  • ಬೇಳೆ ಹೂರಣ
  • ಹುಣಸೆ ಹಣ್ಣು
  • ಸಾಸಿವೆ
  • ಇಂಗು
  • ಅರಿಶಿನದ ಪುಡಿ
  • ಎಣ್ಣೆ
  • ಉಪ್ಪು

ಒಬ್ಬಟ್ಟು ಸಾರು ಅಥವಾ ಹೋಳಿಗೆ ಸಾರು ಮಾಡುವ ವಿಧಾನ ಇಲ್ಲಿದೆ

ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಜೀರಿಗೆ, ಕಾಳು ಮೆಣಸು, ಮೆಂತ್ಯ ಕಾಳು ಸಹ ಸ್ವಲ್ಪ ಹುರಿದುಕೊಳ್ಳಬೇಕು. 2 ನಿಮಿಷ ಹುರಿದುಕೊಂಡರೆ ಸಾಕು. ಈಗ ಈ ಪದಾರ್ಥಗಳನ್ನು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಪಾತ್ರೆ ಇಟ್ಟು ಇದಕ್ಕೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು, ಬೆಳ್ಳುಳ್ಳಿ, ಒಣ ಮೆಣಸು, ಕರಿಬೇವಿನ ಸೊಪ್ಪು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.

ಈಗ ಬೇಳೆ ನೀರನ್ನು ತೆಗೆದುಕೊಳ್ಳಿ. ( ಮೊದಲೇ ಕುಕ್ಕರ್‌ನಲ್ಲಿ ಬೇಳೆ ಹಾಕಿಕೊಂಡು ಅದನ್ನು ಬೇಯಿಸಿದ ಬಳಿಕ ಉಳಿಯುವ ನೀರು) ಈ ನೀರನ್ನು ಒಲೆ ಮೇಲೆ ಇಟ್ಟಿರುವ ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಹುಣಸೆ ಹುಳಿಯನ್ನು ಹಾಕಿ, ಅರಶಿನ ಪುಡಿ, ಒಬ್ಬಟ್ಟಿನ ಹೂರ್ಣ, ತೆಂಗಿನ ತುರಿ, ಹುರಿದು ಪುಡಿ ಮಾಡಿಕೊಂಡಿದ್ದ ಮಸಾಲೆ ಹಾಕಿ ಕಲಸಿಕೊಳ್ಳಿ.

ನಂತರ ಉಪ್ಪು, ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ ಮಾಡಿಕೊಳ್ಳಿ. ನಂತರ 10 ನಿಮಿಷಗಳ ಕಾಲ ಕುದಿಯಲು ಬಿಡಿ. ಚೆನ್ನಾಗಿ ಕುದಿಯುತ್ತಿರುವ ನಡುವೆ ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಈ ಒಬ್ಬಟ್ಟಿನ ಸಾರು ರೆಡಿಯಾಗುತ್ತದೆ. ನೀವು ಹೋಳಿಗೆ ಮಾಡುವಾಗ ಈ ಸಾರು ಮಾಡುವುದು ಸುಲಭ ಏಕೆಂದರೆ ಹೂರ್ಣ ಮಾಡಿಕೊಂಡಿರುವುದು ಸಿಗುತ್ತದೆ. ಇದಕ್ಕೆಂದು ಬೇಕಾದರೆ ನೀವು ಸ್ವಲ್ಪವೇ ಸ್ವಲ್ಪ ಬೇಳೆ, ಬೆಲ್ಲದ ಹೂರ್ಣ ಮಾಡಿಕೊಳ್ಳಬಹುದು.

ನೀವು ಸಹ ಒಮ್ಮೆ ಮನೆಯಲ್ಲ ಇದನ್ನು ಟ್ರೈ ಮಾಡಿ ನೋಡಿ. ಇದರ ರುಚಿಗೆ ಎಲ್ಲಾ ಖಾದ್ಯ ಸವಿಯಬಹುದು.

[ of 5 - Users]
Story first published: Friday, October 11, 2024, 7:01 [IST]
X
Desktop Bottom Promotion