Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಓಟ್ಸ್ ದೋಸೆ: ರುಚಿ ಮಾತ್ರವಲ್ಲ, ತೂಕ ಇಳಿಕೆಗೂ ಬೆಸ್ಟ್! ಮಾಡೋದು ಹೇಗೆ?
ರುಚಿ ಮತ್ತು ಆರೋಗ್ಯ ಎರಡೂ ನಿಮ್ಮದೇ.. ಹೋಟೆಲ್ ಸ್ಟೈಲ್ ಓಟ್ಸ್ ದೋಸೆ ರೆಸಿಪಿ ಇಲ್ಲಿದೆ. ದಕ್ಷಿಣ ಭಾರತದಲ್ಲಿ ದೋಸೆ (south indian dosa) ವಿಶೇಷ ಸ್ಥಾನ ಪಡೆದಿದೆ. ಬೆಳಗಿನ ಟಿಫನ್ ಆಗಲಿ, ಸಂಜೆ ತಿಂಡಿಯಾಗಲಿ ದೋಸೆ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಆದರೆ, ಗ್ಲುಟನ್ ಅಲರ್ಜಿ ಇರುವವರು ಅಥವಾ ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯ ಆಧಾರಿತ ಆಹಾರಕ್ರಮ ಅನುಸರಿಸುವವರು ಸಾಮಾನ್ಯವಾಗಿ ಅಕ್ಕಿ ಮತ್ತು ಉದ್ದಿನಬೇಳೆ ದೋಸೆಯನ್ನು ತಿನ್ನಲು ಹಿಂಜರಿಯುತ್ತಾರೆ. ಇಂತಹವರಿಗೆ ಓಟ್ಸ್ ದೋಸೆ (oats dosa) ಆರೋಗ್ಯಕರ ಪರ್ಯಾಯ. ಇದು ಗ್ಲುಟನ್ ಮುಕ್ತವಾಗಿರುತ್ತದೆ (gluten free). ಇದು ಆರೋಗ್ಯಕರ ಮಾತ್ರವಲ್ಲದೆ, ತಯಾರಿಸಲು ಸಹ ಸುಲಭ.
ಮೊದಲಿಗೆ, ಓಟ್ಸ್ ದೋಸೆಯ ಪೋಷಕಾಂಶಗಳ ಮಹತ್ವ ತಿಳಿಯಿರಿ. ಓಟ್ಸ್‌ನಲ್ಲಿ ಇರುವ ನಾರಿನಂಶ (Fiber) ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಇದರಿಂದ ತೂಕ ಇಳಿಕೆ ಅಥವಾ ನಿಯಂತ್ರಣಕ್ಕೆ ಸಹಕಾರಿ. ಅಲ್ಲದೆ, ಓಟ್ಸ್‌ನಲ್ಲಿ ಇರುವ ಬೀಟಾ ಗ್ಲೂಕಾನ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಗ್ಲುಟನ್ ಅಲರ್ಜಿ ಇರುವವರಿಗೆ ಸೇಫ್. ಉದ್ದಿನಬೇಳೆ ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ. ಮೆಂತ್ಯ ಕಾಳು ಹಸಿವು ನಿಯಂತ್ರಿಸಲು ಹಾಗೂ ರಕ್ತದಲ್ಲಿನ ಶುಗರ್ ಲೆವೆಲ್ (ಸಕ್ಕರೆ ಮಟ್ಟ) ಸಮತೋಲನದಲ್ಲಿರಿಸಲು ಸಹಕಾರಿಯಾಗಿದೆ. ಬನ್ನಿ, ಮನೆಯಲ್ಲಿಯೇ ಓಟ್ಸ್ ದೋಸೆ ತಯಾರಿಸುವ ಸುಲಭ ವಿಧಾನವನ್ನು ಈಗ ತಿಳಿಯೋಣ.

ಓಟ್ಸ್ ದೋಸೆ ತಯಾರಿಸಲು ಬೇಕಾದ ಪದಾರ್ಥಗಳು
• ಓಟ್ಸ್ - 1 ಕಪ್
• ಗ್ಲುಟನ್ ಮುಕ್ತ ಅಕ್ಕಿ ಹಿಟ್ಟು - ½ ಕಪ್
• ಉದ್ದಿನಬೇಳೆ - ¼ ಕಪ್
• ಮೆಂತ್ಯ ಕಾಳು - ½ ಚಮಚ
• ಹಸಿ ಮೆಣಸಿನಕಾಯಿ - 2
• ಶುಂಠಿ - 1 ಇಂಚು
• ಕರಿಬೇವಿನ ಸೊಪ್ಪು - ಸ್ವಲ್ಪ
• ಉಪ್ಪು - ರುಚಿಗೆ ತಕ್ಕಷ್ಟು
• ನೀರು - ಅಗತ್ಯವಿರುವಷ್ಟು
• ಎಣ್ಣೆ - ದೋಸೆ ಮಾಡಲು
ಓಟ್ಸ್ ದೋಸೆ ತಯಾರಿಸುವ ಸುಲಭ ವಿಧಾನ
ಹಂತ 1: ಮೊದಲಿಗೆ ಓಟ್ಸ್, ಅಕ್ಕಿ ಹಿಟ್ಟು, ಉದ್ದಿನಬೇಳೆ ಮತ್ತು ಮೆಂತ್ಯ ಕಾಳುಗಳನ್ನು ಹಾಕಿ. ಅಗತ್ಯವಿರುವಷ್ಟು ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ.
ಹಂತ 2: ತಯಾರಿಸಿದ ಈ ಹಿಟ್ಟನ್ನು 4 ರಿಂದ 6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಹುದುಗಲು ಬಿಡಿ. ಹುದುಗಿದ ಹಿಟ್ಟಿನಿಂದ ದೋಸೆ ಇನ್ನಷ್ಟು ಮೃದುವಾಗುತ್ತದೆ.
ಹಂತ 3: ಈಗ ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವು ಮತ್ತು ಉಪ್ಪು ಹಾಕಿ. ಹದಕ್ಕೆ ತಕ್ಕಂತೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ.

ಹಂತ 4: ಬಾಣಲೆಯನ್ನು ಬಿಸಿ ಮಾಡಿ, ಒಂದು ಸೌಟು ಹಿಟ್ಟನ್ನು ಸುರಿದು ತೆಳುವಾಗಿ ಹರಡಿ. ಎರಡೂ ಬದಿ ಅಥವಾ ಕಡೆಗಳಲ್ಲಿ ಬಣ್ಣ ಬದಲಾಯುವವರೆಗೆ ಚೆನ್ನಾಗಿ ಬೇಯಿಸಿ.
ಹಂತ 5: ಇಷ್ಟು ಮಾಡಿದರೆ ಬಿಸಿ ಬಿಸಿ ಓಟ್ಸ್ ದೋಸೆ ಸಿದ್ಧವಾಗುತ್ತದೆ. ಇದನ್ನು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆಗೆ ಸವಿಯಬಹುದು.
ಈ ದೋಸೆ ಆರೋಗ್ಯಕರ ಪರ್ಯಾಯ ಎನ್ನಬಹುದು. ಓಟ್ಸ್ ದೋಸೆ ಸಾಮಾನ್ಯ ದೋಸೆಯಂತೆ ಟೇಸ್ಟ್ ಆಗಿದ್ದರೂ, ಇದು ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಗ್ಲುಟನ್ ಮುಕ್ತವಾಗಿದೆ. ತೂಕ ಇಳಿಸಲು ಬಯಸುವವರಿಗೆ, ಮಧುಮೇಹಿಗಳಿಗೂ (ಡಯಾಬಿಟಿಸ್) ಇದು ಉತ್ತಮ ಆಯ್ಕೆ. ಮಕ್ಕಳು, ಯುವಕರು, ವಯೋವೃದ್ಧರು ಸೇರಿದಂತೆ ಎಲ್ಲರಿಗೂ ಆರೋಗ್ಯಕರ ತಿಂಡಿ. ಹೀಗಾಗಿ, ನಿಮ್ಮ ಮನೆಯಲ್ಲಿ ಹೊಸತೊಂದು ಆರೋಗ್ಯಕರ ಓಟ್ಸ್ ದೋಸೆಯನ್ನು ಇಂದೇ ಟ್ರೈ ಮಾಡಿ.



Click it and Unblock the Notifications