Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆಲ್ದಿ & ಕಲರ್‌ಫುಲ್! ಸ್ಲಿಮ್ ಆಗೋಕೆ ಬೀಟ್ರೂಟ್ ಚಪಾತಿ ಸೂಪರ್.. ಮಾಡೋದು ಹೇಗೆ?
ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಚಪಾತಿಗಳನ್ನು ತಿಂದು ಮಕ್ಕಳು ಬೇಸರಗೊಂಡಿದ್ದರೆ, ಈ ಬಿಟ್ರೂಟ್ ಚಪಾತಿಯನ್ನು (Beetroot Chapati) ಒಮ್ಮೆ ಟ್ರೈ ಮಾಡಿ. ಇದರ ಬಣ್ಣ ಮಕ್ಕಳನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ಈ ಬೀಟ್ರೂಟ್ ಚಪಾತಿ ಉತ್ತಮ. ಬೀಟ್ರೂಟ್ ಚಪಾತಿಯು ರುಚಿಕರ ಮಾತ್ರವಲ್ಲ, ಇದು ಪೌಷ್ಟಿಕಾಂಶದಿಂದಲೂ ಸಮೃದ್ಧವಾಗಿದೆ. ಮುಖ್ಯವಾಗಿ ಬೀಟ್ರೂಟ್ ತಿನ್ನಲು ಇಷ್ಟಪಡದ ಮಕ್ಕಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಮನೆಯಲ್ಲಿ ತಯಾರಿಸಬಹುದಾದ ರುಚಿಕರವಾದ ಮತ್ತು ಆರೋಗ್ಯಕರವಾದ ಬಿಟ್ರೂಟ್ ಚಪಾತಿಯ ವಿಧಾನವನ್ನು ನಾವಿಂದು ತಿಳಿಸಲಿದ್ದೇವೆ.
ಆರೋಗ್ಯಕ್ಕೆ ಪ್ರಯೋಜನಕಾರಿಯಾದ ತರಕಾರಿಗಳಲ್ಲಿ ಬೀಟ್ರೂಟ್‌ಗೆ ಪ್ರಮುಖ ಸ್ಥಾನವಿದೆ. ಬೀಟ್ರೂಟ್‌ನಿಂದ ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ಆದರೆ, ಬೀಟ್ರೂಟ್‌ನಿಂದ ಚಪಾತಿಯನ್ನೂ ಮಾಡಬಹುದು ಎಂದು ಹಲವರಿಗೆ ತಿಳಿದಿಲ್ಲ. ಪ್ರತಿದಿನ ತಿನ್ನುವ ಚಪಾತಿ ಬೇಸರ ಎನಿಸಿದರೆ, ಈ ಬಾರಿ ಬೀಟ್ರೂಟ್ ಚಪಾತಿಯನ್ನು ಟ್ರೈ ಮಾಡಿ. ಬೀಟ್ರೂಟ್ ಚಪಾತಿ ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ಸುಲಭವಾಗಿ ತಯಾರಿಸುವ ವಿಧಾನ (Beetroot Chapati Recipe) ಇಲ್ಲಿದೆ.

ಬೀಟ್ರೂಟ್ ಚಪಾತಿ ತಯಾರಿಸಲು ಬೇಕಾಗುವ ಪದಾರ್ಥಗಳು
• ಬೀಟ್ರೂಟ್
• ಶುಂಠಿ
• ಎಣ್ಣೆ
• ಗೋಧಿ ಹಿಟ್ಟು
• ಹಸಿ ಮೆಣಸಿನಕಾಯಿ
• ಜೀರಿಗೆ
• ಕೊತ್ತಂಬರಿ ಸೊಪ್ಪು
• ರುಚಿಗೆ ತಕ್ಕಷ್ಟು ಉಪ್ಪು
• ಗರಂ ಮಸಾಲೆ

ಬೀಟ್ರೂಟ್ ಚಪಾತಿ ತಯಾರಿಸುವ ವಿಧಾನ
ಮೊದಲಿಗೆ ಒಂದು ಬೀಟ್ರೂಟ್ ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಈ ತುಂಡುಗಳನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ, ಅದಕ್ಕೆ 4 ಸಣ್ಣ ಶುಂಠಿ ತುಂಡುಗಳು ಮತ್ತು 4 ಹಸಿರು ಮೆಣಸಿನಕಾಯಿ ತುಂಡುಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಒಂದು ದೊಡ್ಡ ಪಾತ್ರೆ ತೆಗೆದುಕೊಂಡು ಅದರಲ್ಲಿ 2 ಕಪ್ ಗೋಧಿ ಹಿಟ್ಟು, ಸ್ವಲ್ಪ ಉಪ್ಪು, 2 ಚಮಚ ಎಣ್ಣೆ ಮತ್ತು ರುಬ್ಬಿದ ಬೀಟ್ರೂಟ್ ಪೇಸ್ಟ್ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ನೆನಪಿಡಿ, ಇದಕ್ಕೆ ನೀರು ಹಾಕಬೇಡಿ.
ಮೆತ್ತಗೆ ಕಲಸಿದ ಹಿಟ್ಟಿನ ಮೇಲೆ ಮುಚ್ಚಳ ಮುಚ್ಚಿ ಕಾಲು ಗಂಟೆಗಳ ಕಾಲ ಪಕ್ಕಕ್ಕೆ ಇಡಿ. ನಂತರ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಒಣ ಹಿಟ್ಟಿನಲ್ಲಿ ಅದ್ದಿ ಚಪಾತಿ ಹಲಗೆಯಿಂದ ದುಂಡಗೆ ಒತ್ತಿಕೊಳ್ಳಿ (ಲಟ್ಟಿಸಿ). ಬಳಿಕ ಒಲೆ ಮೇಲೆ ತವಾ ಇಟ್ಟು ಬಿಸಿ ಮಾಡಿ. ಈಗ ಅದರ ಮೇಲೆ ಒತ್ತಿಕೊಂಡ ಚಪಾತಿ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ಚಪಾತಿ ಮೇಲೆ ಸ್ವಲ್ಪ ಎಣ್ಣೆ ಹಾಕಿ ಕೂಡ ಬೇಯಿಸಬಹುದು. ಇಷ್ಟು ಮಾಡಿದರೆ, ರುಚಿಕರವಾದ ಬೀಟ್ರೂಟ್ ಚಪಾತಿ ಸಿದ್ಧ. ಈ ಚಪಾತಿಯನ್ನು ಮೊಸರು, ಚಟ್ನಿ ಅಥವಾ ಯಾವುದೇ ರೀತಿಯ ತರಕಾರಿ ಸಾಂಬರ್ ಜೊತೆಗೆ ಸವಿಯಬಹುದು.
ಬೀಟ್ರೂಟ್ ಚಪಾತಿಯ ಪ್ರಯೋಜನಗಳು
ಬೀಟ್ರೂಟ್ ಚಪಾತಿ ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಬೀಟ್ರೂಟ್‌ನಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇದು ಬಹಳ ಒಳ್ಳೆಯದು. ಬೀಟ್ರೂಟ್‌ನಲ್ಲಿ ನೈಸರ್ಗಿಕ ಸಕ್ಕರೆಗಳು ಮತ್ತು ನೈಟ್ರೇಟ್‌ಗಳು ಇವೆ. ಇದು ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ. ಹೆಚ್ಚು ದೈಹಿಕ ಶ್ರಮ ಮಾಡುವವರಿಗೆ ಇದು ತುಂಬಾ ಉಪಯುಕ್ತವಾಗಿದೆ. ಬೀಟ್ರೂಟ್‌ನಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತವೆ ಮತ್ತು ಫೈಬರ್ ಅಧಿಕವಾಗಿರುತ್ತದೆ. ಫೈಬರ್ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ನೀಡುತ್ತದೆ, ಇದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆ
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಬೀಟ್ರೂಟ್ ಚಪಾತಿ ಉತ್ತಮ ಆಯ್ಕೆಯಾಗಿದೆ. ಇದು ಯಕೃತ್ತಿನಲ್ಲಿ ಸಂಗ್ರಹವಾದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಿ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬೀಟ್ರೂಟ್ ಸ್ತನ ಕ್ಯಾನ್ಸರ್‌ನಂತಹ ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ. ಒಟ್ಟಾರೆ, ಬೀಟ್ರೂಟ್ ಚಪಾತಿಯು ರುಚಿಕರ ಮತ್ತು ಆರೋಗ್ಯಕರ ಮಾತ್ರವಲ್ಲದೆ, ಅನೇಕ ಪ್ರಯೋಜನಗಳನ್ನು ಹೊಂದಿದೆ.



Click it and Unblock the Notifications