Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನುಗ್ಗೆಕಾಯಿ ಸಾಂಬಾರು ತಿಂದು ಬೋರಾಗಿದ್ಯಾ..? ನುಗ್ಗೆಕಾಯಿ-ಶೇಂಗಾ ಪಲ್ಯ ಒಮ್ಮೆ ಟ್ರೈ ಮಾಡಿ
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬಳಕೆಮಾಡುವ ತರಕಾರಿಗಳ ಪೈಕಿ ನುಗ್ಗೆಕಾಯಿ ಕೂಡ ಒಂದು. ಈ ನುಗ್ಗೆಕಾಯಿಯ ಸೇವನೆಯು ದೇಹಕ್ಕೆ ಸಾಕಷ್ಟು ರೀತಿಯಲ್ಲಿ ಲಾಭವನ್ನು ತಂದುಕೊಡುತ್ತದೆ.
ವಿವಿಧ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸುವಂತಹ ಕಾರ್ಯವನ್ನು ನುಗ್ಗೆಕಾಯಿ ಮಾಡುತ್ತದೆ. ನುಗ್ಗೆಕಾಯಿ ಮಾತ್ರವಲ್ಲದೇ ನುಗ್ಗೆ ಸೊಪ್ಪು, ನುಗ್ಗೆ ಗಿಡದ ತೊಗಟು ಹೀಗೆ ಪ್ರತಿಯೊಂದು ಕೂಡ ಔಷಧೀಯ ಗುಣಗಳನ್ನು ಹೊಂದಿದ್ದು ಗಿಡಮೂಲಿಕೆಯಂತೆ ಕಾರ್ಯ ನಿರ್ವಹಿಸುತ್ತದೆ.

ನುಗ್ಗೆಕಾಯಿಯ ಸೇವನೆಯು ಮಧುಮೇಹದಿಂದ ಬಳಲುತ್ತಿರುವವರಿಗೆ ವರದಾನ ಎಂದೇ ಹೇಳಬಹುದು. ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಿಸುವಲ್ಲಿ ನುಗ್ಗೆಕಾಯಿ ಪಾತ್ರ ವಹಿಸುತ್ತದೆ. ಇದು ಮಾತ್ರವಲ್ಲದೇ ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿರುವವರು ಕೂಡ ನುಗ್ಗೆಕಾಯಿ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿದೆ.
ನುಗ್ಗೆಕಾಯಿಯಲ್ಲಿ ವಿಟಮಿನ್ ಸಿ ಅಂಶ ಅಗಾಧ ಪ್ರಮಾಣದಲ್ಲಿದ್ದು ಶ್ವಾಸಕೋಶಕ್ಕೆ ಯಾವುದೇ ಹಾನಿ ಉಂಟಾಗದಂತೆ ನೋಡಿಕೊಳ್ಳುವುದರ ಜೊತೆಯಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳ ಆರೋಗ್ಯ ವೃದ್ಧಿಗೂ ನುಗ್ಗೆಕಾಯಿ ಸೇವನೆ ಮುಖ್ಯ ಎಂದು ಪರಿಗಣಿಸಲಾಗಿದೆ. ಸಂಧಿವಾತದಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೂ ನುಗ್ಗೆಕಾಯಿ ಸೇವನೆ ರಾಮಬಾಣ ಎಂದು ಹೇಳಬಹುದು.
ಆದರೆ ನುಗ್ಗೆಕಾಯಿಯನ್ನು ಹೇಗೆ ಸೇವನೆ ಮಾಡುವುದು ಎಂದು ಕೇಳಿದಾಗ ಎಲ್ಲರ ಬಾಯಲ್ಲೂ ಬರುವ ಉತ್ತರ ಅದನ್ನು ಸಾಂಬಾರು ಮಾಡಿ ಸೇವಿಸಬಹುದು ಎಂದು. ಪ್ರತಿ ಬಾರಿಯೂ ನುಗ್ಗೆಕಾಯಿಯಿಂದ ಸಾಂಬಾರು ಮಾಡಿ ತಿಂದು ತಿಂದು ನಿಮಗೆ ಬೋರಾಗಿದ್ದರೆ ಈ ಬಾರಿ ನೀವು ನುಗ್ಗೆಕಾಯಿಯಿಂದ ಹೊಸ ರೆಸಿಪಿಯನ್ನು ಪ್ರಯತ್ನಿಸಬಹುದಾಗಿದೆ. ಶೇಂಗಾ ನುಗ್ಗೆಕಾಯಿ ಪಲ್ಯ ಒಮ್ಮೆ ನೀವು ಟ್ರೈ ಮಾಡಿ ನೋಡಿದರೆ ಖಂಡಿತ ಮತ್ತೆ ಮತ್ತೆ ಇದನ್ನು ಮಾಡಿ ಸೇವಿಸುವುದು ಪಕ್ಕಾ. ಹಾಗಾದರೆ ನುಗ್ಗೆಕಾಯಿ - ಶೇಂಗಾ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ .
ಬೇಕಾಗುವ ಸಾಮಗ್ರಿಗಳು :
- ಕತ್ತರಿಸಿದ ನುಗ್ಗೆಕಾಯಿ : 1ಕಪ್
- ಶೇಂಗಾ : 10 ಗ್ರಾಂ
- ಬೆಳ್ಳುಳ್ಳಿ : 8 ಎಸಳು
- ಈರುಳ್ಳಿ ಸಣ್ಣಗೆ ಕತ್ತರಿಸಿದ್ದು :1/2 ಕಪ್
- ಬೇವಿನಸೊಪ್ಪು: 1 ಎಸಳು
- ಕೊತ್ತಂಬರಿ ಸೊಪ್ಪು 1/2 ಕಪ್
- ಸಾಸಿವೆ ಸ್ವಲ್ಪ
- ಜೀರಿಗೆ 1 ಚಮಚ
- ಉಪ್ಪು ರುಚಿಗೆ ತಕ್ಕಷ್ಟು
- ನೀರು ಅಳತೆಗೆ ತಕ್ಕಷ್ಟು
- ಅಡುಗೆ ಎಣ್ಣೆ 1 ಚಮಚ
- ಅರಿಶಿಣ 1 ಚಿಟಿಕೆ
- ಕಾರದ ಪುಡಿ 1ಚಮಚ
ಮಾಡುವ ವಿಧಾನ : ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಕತ್ತರಿಸಿಟ್ಟುಕೊಂಡ ನುಗ್ಗೆಕಾಯಿಯನ್ನು ಹಾಕಿ ಉಪ್ಪು ಸೇರಿಸಿ ಬೇಯಲು ಇಡಿ. ಮತ್ತೊಂದು ಬಾಣಲೆಯಲ್ಲಿ ಶೇಂಗಾ ಬೀಜಗಳನ್ನು ಹುರಿದುಕೊಂಡು ಸಿಪ್ಪೆ ತೆಗೆದ ಬಳಿಕ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ತೆಗೆದಿಟ್ಟುಕೊಳ್ಳಿ.
ನುಗ್ಗೆಕಾಯಿ ಅರ್ಧ ಬೇಯುತ್ತಿದ್ದಂತೆಯೇ ಸ್ಟೌ ಆಫ್ ಮಾಡಿ. ಈಗ ಒಂದು ಪಾತ್ರೆಗೆ ಎಣ್ನೆಯನ್ನು ಹಾಕಿ ಇದಕ್ಕೆ ಸಾಸಿವೆ ಹಾಗೂ ಜೀರಿಗೆಯನ್ನು ಹಾಕಿ ಹುರಿದುಕೊಳ್ಳಿ, ಬೆಳ್ಳುಳ್ಳಿಯನ್ನು ಗುದ್ದಿಕೊಂಡು ಬಾಣಲೆಗೆ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.
ಈಗ ಈರುಳ್ಳಿಯನ್ನು ಹಾಕಿ ಅರಿಶಿಣವನ್ನು ಸೇರಿಸಿ ಹೊಂಬಣ್ಣಕ್ಕೆ ತಿರುಗುವವರೆಗೂ ಹುರಿದುಕೊಳ್ಳಬೇಕು. ಬೇವಿನಸೊಪ್ಪು ಹಾಗೂ ಕಾರದ ಪುಡಿಯನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಹುರಿಯಿರಿ. ಈಗ ನೀವು ಬೇಯಿಸಿಟ್ಟುಕ್ಕೊಂಡ ನುಗ್ಗೆಕಾಯಿಯನ್ನು ಈ ಮಿಶ್ರಣಕ್ಕೆ ಸೇರಿಸಿ. ಎರಡು ನಿಮಿಷಗಳ ಬಳಿಕ ರುಬ್ಬಿಕೊಂಡ ಶೇಂಗಾ ಹುಡಿಯನ್ನು ಸೇರಿಸಿ. ಉಪ್ಪು ಬೇಕಿದ್ದರೆ ಮಾತ್ರ ಉಪ್ಪನ್ನು ಸೇರಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಪಲ್ಯವನ್ನು ಅಲಂಕರಿಸಿ ಬಿಸಿ ಬಿಸಿ ಅನ್ನದೊಂದಿಗೆ ಸವಿಯಲು ನೀಡಿ.



Click it and Unblock the Notifications