Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟ, ತಿಂಡಿ ರುಚಿ ಹೆಚ್ಚಿಸುವ ತಿಂಗಳ ಕಾಲ ಇಡಬಹುದಾದ ನುಗ್ಗೆ ಸೊಪ್ಪಿನ ಚಟ್ನಿ ಪುಡಿ!
ಊಟ, ತಿಂಡಿಯೊಂದಿಗೆ ಪಲ್ಯ, ಚಟ್ನಿ ಇದ್ದರೆ ಆ ಹೊತ್ತಿನ ಖಾದ್ಯ ಬಹಳ ರುಚಿಕರವಾಗರಲಿದೆ. ಹಾಗೆ ರುಚಿ ಕೂಡ ದುಪ್ಪಟ್ಟಾಗಲಿದೆ. ಎಲ್ಲಾ ಸಮಯದಲ್ಲು ಊಟದೊಂದಿಗೆ ಅಥವಾ ತಿಂಡಿಯೊಂದಿಗೆ ಚಟ್ನಿ, ಪಲ್ಯ ಮಾಡಲು ಸಮಯ ಇರುವುದಿಲ್ಲ. ಇಂತಹ ಸಮಯದಲ್ಲಿ ನಾವು ಹೆಚ್ಚಾಗಿ ಒಮ್ಮೆ ಚಟ್ನಿ ಮಾಡಿ ಇಟ್ಟು ಬಹಳ ಸಮಯದವರೆಗೂ ಸವಿಯಲು ಇಷ್ಟಪಡುತ್ತೇವೆ.
ಅದ್ರಲ್ಲು ಕೆಲವೊಂದು ಚಟ್ನಿ ಪುಡಿಗಳನ್ನು ನಾವು ಹಲವು ತಿಂಗಳ ಕಾಲ ಇಟ್ಟು ಸವಿಯಬಹುದು, ಹಾಗೆ ಈ ರೀತಿ ಪುಡಿಗಳು ಅದರಲ್ಲೂ ನಮ್ಮ ಆರೋಗ್ಯವನ್ನು ವೃದ್ಧಿಸುವಂತಹ ಚಟ್ನಿ ಪುಡಿಗಳ ಮಾಡಿ ಸವಿಯುವುದು ಸಾಮಾನ್ಯ. ಅದ್ರಲ್ಲೂ ನುಗ್ಗೆ ಸೊಪ್ಪಿನ ಚಟ್ನಿ ಪುಡಿ ನೀವು ಮಾಡಿ ಸವಿದಿದ್ದೀರಾ?

ನುಗ್ಗೆ ಸೊಪ್ಪಿನ ಪಲ್ಯ, ಗ್ರೇವಿ, ಸಾರು, ಚಟ್ನಿ ಮಾಡಿ ಸವಿದಿರಬಹುದು, ಆದ್ರೆ ನಾವಿಂದು ಈ ನುಗ್ಗೆ ಸೊಪ್ಪಿನ ಚಟ್ನಿ ಪುಡಿ ಕುರಿತಾಗಿ ತಿಳಿದುಕೊಳ್ಳೋಣ. ಈ ಚಟ್ನಿ ಪುಡಿ ಊಟ ತಿಂಡಿಯೊಂದಿಗೆ ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ಇದು ಆರೋಗ್ಯಕ್ಕೂ ಬಹಳ ಉತ್ತಮ. ನುಗ್ಗೆಯಲ್ಲಿರುವ ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಫೈಬರ್ ಅಂಶ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಇನ್ನು ಈ ನುಗ್ಗೆ ಸೊಪ್ಪಿನ ಚಟ್ನಿ ಪುಡಿ ಬಹಳ ದಿನ ಇಟ್ಟು ಕೂಡ ಸವಿಯಬಹುದು.
ಹಾಗಾದ್ರೆ ಈ ನುಗ್ಗೆ ಸೊಪ್ಪಿನ ಚಟ್ನಿ ಪುಡಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪಿನ ಚಟ್ನಿ ಪುಡಿ ಮಾಡಲು ಬೇಕಾಗುವ ಪದಾರ್ಥಗಳು ಬೇಕು?
- ನುಗ್ಗೆ ಸೊಪ್ಪು
- ಕಡಲೆ ಬೇಳೆ
- ಉದ್ದಿನ ಬೇಳೆ
- ಎಣ್ಣೆ
- ದನಿಯಾ ಕಾಳು
- ಜೀರಿಗೆ
- ಒಣ ಕೊಬ್ಬರಿ
- ಒಣ ಮೆಣಸು
- ಬೆಳ್ಳುಳ್ಳಿ
- ಅರಶಿಣ
- ಹುಣಸೆ ಹುಳಿ
- ಇಂಗು
- ಉಪ್ಪು
ನುಗ್ಗೆ ಸೊಪ್ಪಿನ ಚಟ್ನಿ ಪುಡಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಕಾವಲಿ ಇಟ್ಟು ಅದು ಬಿಸಿಯಾದಾಗ ಅದಕ್ಕೆ ಕಡಲೆಬೇಳೆ, ಉದ್ದಿನ ಬೇಳೆ ಹಾಕಿಕೊಂಡು ಡ್ರೈ ಆಗಿ ಹುರಿದುಕೊಳ್ಳಿ. 2 ಚಮಚ ಹಾಕಿಕೊಂಡರೆ ಸಾಕಾಗುತ್ತದೆ. ಹುರಿದ ಈ ಎರಡು ವಸ್ತುವನ್ನು ತೆಗೆದು ಇಟ್ಟುಕೊಳ್ಳಿ. ನಂತರ ಧನಿಯಾ ಕಾಳು, ಜೀರಿಗೆ ಕೂಡ ಹಾಕಿ ಮತ್ತೆ ಫ್ರೈ ಮಾಡಿ ತೆಗೆದು ಇಟ್ಟುಕೊಳ್ಳಿ.
ಒಂದು ಬೆಳ್ಳುಳ್ಳಿ, ಒಣ ಮೆಣಸು, ಒಣ ಕೊಬ್ಬರಿ ಕೂಡ ಹಾಕಿಕೊಂಡು ಅರ್ಧ ಚಮಚ ಎಣ್ಣೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. ನಂತರ ಇದನ್ನು ಕೂಡ ತೆಗೆದಿಟ್ಟು ತಣ್ಣಗಾಗಲು ಬಿಡಿ. ಈಗ ನುಗ್ಗೆ ಸೊಪ್ಪನ್ನು ಬಿಡಿಕೊಂಡು ತೊಳೆದು ಸ್ವಲ್ಪ ಒಣಗಿಸಬೇಕು ನಂತರ ಈ ಸೊಪ್ಪನ್ನು ಬಾಣಲೆಗೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. ಇದು ಸೊಪ್ಪುಗಳು ಗರಿ ಗರಿಯಾಗಿ ಬರುವಂತೆ ಹುರಿದುಕೊಳ್ಳಬೇಕು. ಕೈಯಿಂದ ಒತ್ತಿದರೆ ಪುಡಿ ಪುಡಿ ಆಗಬೇಕು.
ಈಗ ಹುರಿದುಕೊಂಡ ವಸ್ತುಗಳ ತಣ್ಣಗಾಗಲು ಬಿಟ್ಟು ಒಂದು ಮಿಕ್ಸಿ ಜಾರ್‌ಗೆ ಬೆಳೆಗಳ ಹಾಕಿಕೊಂಡು ಅದಕ್ಕೆ ಅರಶಿಣ, ಹುಣಸೆ ಹುಳಿ, ಇಂಗು, ಉಪ್ಪು ಸಹ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಒಂದೆರಡು ಸುತ್ತು ಹೊಡೆಸಿದ ಬಳಿಕ ನುಗ್ಗೆ ಸೊಪ್ಪಿನ್ನು ಸಹ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಇಷ್ಟಾದರೆ ನುಗ್ಗೆ ಸೊಪ್ಪಿನ ಈ ಚಟ್ನಿ ಪುಡಿ ಸಿದ್ದವಾಗಲಿದೆ. ಇದನ್ನು ಒಂದು ಡಬ್ಬಿಯಲ್ಲಿ ಹಾಕಿ ಇಟ್ಟರೆ ತಿಂಗಳು ಕಳೆದರು ಹಾಳಾಗುವುದಿಲ್ಲ. ಊಟ, ತಿಂಡಿಯೊಂದಿಗೆ ಸವಿಯಲು ಬಹಳ ರುಚಿಯಾಗಿರಲಿದೆ.



Click it and Unblock the Notifications