Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉತ್ತರ ಕರ್ನಾಟಕದ ರುಚಿ ರುಚಿಯ ಕರ್ಜಿಕಾಯಿ ತಿಂಡಿ! ಬಾಯಿ ರುಚಿ ಹೆಚ್ಚಿಸುವ ಸ್ವೀಟ್!
ಹಬ್ಬದಲ್ಲಿ ಸಿಹಿ(Diwali Sweet) ಮಾಡುವುದು ಸಾಮಾನ್ಯ. ಎಲ್ಲರ ಮನೆಯಲ್ಲೂ ಒಂದಲ್ಲಾ ಒಂದು ತಿಂಡಿ ಮಾಡುತ್ತಾರೆ. ಅದ್ರಲ್ಲೂ ಹೆಚ್ಚಾಗಿ ಹೋಳಿಗೆ, ಕಜ್ಜಾಯ, ಕರ್ಜಿಕಾಯಿ ಮಾಡುವುದು ಸಾಮಾನ್ಯ. ಕರ್ಜಿಕಾಯಿ ಅಂದ್ರೆ ಹಲವರ ಬಾಯಲ್ಲಿ ನೀರು ಬರುತ್ತೆ. ಎಲ್ಲರಿಗೂ ಬಹಳ ಇಷ್ಟವಾಗುವಂತಹ ಸಿಹಿ ತಿಂಡಿ ಎನ್ನಬಹುದು.
ನಾವಿಂದು ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವಂತಹ ರುಚಿ ರುಚಿಯ ಕರ್ಜಿಕಾಯಿ (Krajikai Sweet) ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವಂತಹ ತಿಂಡಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ ಒಂದೊಂದು ತಿಂಡಿಯೂ ಒಂದೊಂದು ರೀತಿ ರುಚಿ ನೀಡುತ್ತವೆ, ಆದ್ರೆ ನಾವಿಂದು ಕರ್ಜಿಕಾಯಿ ಮಾಡುವ ಕುರಿತು ತಿಳಿದುಕೊಳ್ಳೋಣ.

ದೀಪಾವಳಿಯ ಸಮಯದಲ್ಲಿ ಈ ಕರ್ಜಿಕಾಯಿ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಎಲ್ಲರು ಬಹಳ ಇಷ್ಟಪಟ್ಟು ಸವಿಯುತ್ತಾರೆ. ನಾವಿಂದು ಸುಲಭವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವ ರೀತಿ ದೀಪಾವಳಿಗೆ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಕರ್ಜಿಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಜಿ ಕಾಯಿ ಮಾಡಲು ಬೇಕಾಗುವ ವಸ್ತುಗಳು
- ಮೈದಾ ಹಿಟ್ಟು
- ಚಿರೋಟಿ ರವೆ
- ಉಪ್ಪು
- ತುಪ್ಪ
- ಎಣ್ಣೆ
- ಕೊಬ್ಬರಿ ತುರಿ
- ಏಲಕ್ಕಿ
ಕರ್ಜಿ ಕಾಯಿ ಮಾಡುವ ಸುಲಭದ ವಿಧಾನವೇನು?
ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಒಂದು ಕಪ್ ಚಿರೋಟಿ ರವೆ ಹಾಗೆ 1 ಕಪ್ ಮೈದಾ ಹಿಟ್ಟು ಹಾಕಿಕೊಂಡು, ಉಪ್ಪು, ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಚಪಾತಿ ಹಿಟ್ಟಿನಂತೆ ಹದ ಬಂದ ಬಳಿಕ ಮುಚ್ಚಳ ಮುಚ್ಚಿ 5 ನಿಮಿಷ ಹಾಗೆಯೇ ಬಿಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕಾಲು ಕಪ್ ಚಿರೋಟಿ ರವೆ, 2 ಸ್ಪೂನ್ ತುಪ್ಪ ಹಾಕಿ ಹುರಿದುಕೊಳ್ಳಿ. 3 ನಿಮಿಷ ಹುರಿದ ಬಳಿಕ ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಬಾಣಲೆಗೆ ಬಿಳಿ ಎಳ್ಳು ಹಾಕಿ ಹುರಿದು ತೆಗೆದು ರವೆಯೊಂದಿಗೆ ಹಾಕಿಡಿ. ಈಗ ಒಂದೂವರೆ ಕಪ್ ಕೊಬ್ಬರಿ ತುರಿ, ಹಾಗೆ ಮುಕ್ಕಾಲು ಕಪ್ ಸಕ್ಕರೆ ಮಿಕ್ಸಿ ಜಾರ್‌ಗೆ ಹಾಕಿ ಏಲಕ್ಕಿ ಹಾಕಿ ಪುಡಿ ಮಾಡಿಕೊಂಡು ಅದನ್ನು ಕೂಡ ರವೆಯೊಂದಿಗೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಈಗ ಹಿಟ್ಟನ್ನು ಮತ್ತೆ ಹದ ಮಾಡಿಕೊಳ್ಳಿ, ಈಗ ಸ್ವಲ್ಪ ಹಿಟ್ಟು ತೆಗೆದುಕೊಂಡು ಉಂಡೆ ಮಾಡ ಪೂರಿ ಲಟ್ಟಿಸಿದಂತೆ ಲಟ್ಟಿಸಿಕೊಳ್ಳಿ. ಮೈದಾ ಹಿಟ್ಟು ಹಾಕಿ ಲಟ್ಟಿಸಿಕೊಳ್ಳಿ. ಈಗ ಕರ್ಜಿಕಾಯಿಯ ಅಚ್ಚು ತೆಗೆದುಕೊಂಡು ಅದರ ನಡುವೆ ಇಟ್ಟು ಮಧ್ಯದಲ್ಲಿ ಹೂರ್ಣ ಇಟ್ಟು ಒತ್ತಿಕೊಳ್ಳಿ. ಹಾಗೆ ಬಾಣಲೆಯಲ್ಲಿ ಎಣ್ಣೆ ಇಟ್ಟು ಅದರಲ್ಲಿ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಕರ್ಜಿಕಾಯಿ ಸಿದ್ದವಾಗುತ್ತೆ, ನೀವು ಕೂಡ ಹಬ್ಬಕ್ಕೆ ಈ ಕರ್ಜಿಕಾಯಿ ಮಾಡಿ ನೋಡಿ. ಇದನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು.
ದೀಪಾವಳಿಗೆಂದು ಮಾಡಿದ್ರೆ 15 ಅಥವಾ 20 ದಿನಗಳ ಕಾಲ ಇಟ್ಟು ಸವಿಯಬಹುದು. ಅಂಗಡಿಯಿಂದ ತಂದು ಸವಿಯುವ ಬದಲು ಮನೆಯಲ್ಲೇ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications