Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟದೊಂದಿಗೆ ಅದ್ಭುತ ರುಚಿಯ ಉತ್ತರ ಕರ್ನಾಟಕ ಸ್ಪೆಷಲ್ ಹೆಸರು ಕಾಳು ಪಲ್ಯ!
ಊಟದೊಂದಿಗೆ ಯಾವುದಾದರು ರುಚಿಕರ ಪಲ್ಯ ಇದ್ದರೆ ಅದರ ರುಚಿಗೆ ನೀವು ಮರುಳಾಗುತ್ತೀರಿ. ಅದ್ರಲ್ಲೂ ವಿಶೇಷ ರುಚಿ ನೀಡುವಂತಹ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಆರೋಗ್ಯಕ್ಕೂ ಈ ಪಲ್ಯ ಪುಷ್ಠಿದಾಯಕ ಆಗಿದ್ದರೆ ಎಲ್ಲರೂ ಸಹ ಅದನ್ನು ಸವಿಯೋಕೆ ಮುಂದಾಗಬಹುದು. ಇನ್ನು ಈ ವರ್ಷ ಆರೋಗ್ಯಕರ ಆಹಾರವನ್ನು ಅಭ್ಯಾಸ ಮಾಡುವುದು ನಿಮ್ಮ ಒಲವಾಗಿದ್ದರೆ ಈ ರೀತಿಯ ಕಾಳು ಪಲ್ಯ ಒಮ್ಮೆಯಾದರು ಪ್ರಯತ್ನಿಸಿ.
ಕಾಳು ಪಲ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಹಾಗೆ ಕಾಳುಗಳಲ್ಲಿ ಇರುವಷ್ಟು ಆರೋಗ್ಯಕರ ಅಂಶಗಳು ನಿಮಗೆ ಬೇರೆ ಯಾವುದೇ ಖಾದ್ಯಗಳಲ್ಲೂ ಸಿಗೋದು ಕಷ್ಟವಾಗುತ್ತೆ. ಬೇಳೆ ಕಾಳುಗಳು ಪೌಷ್ಟಿಕಾಂಶಗಳ ಭರಿತ ಆಹಾರ ಸರಪಳಿಗೆ ಕಾರಣವಾಗುತ್ತವೆ. ಹೀಗಾಗಿ ನಾವಿಂದು ರುಚಿ ರುಚಿಯಾದ ಹೆಸರುಕಾಳಿನ ಪಲ್ಯ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಕಾಳು ಪಲ್ಯಗಳು ಅಂದ್ರೆ ಉತ್ತರ ಕರ್ನಾಟಕ ಭಾಗದ ಅಡುಗೆಗಳು ನಿಮಗೆ ನೆನಪಾಗಬಹುದು. ಏಕೆಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಳುಗಳಿಂದ ಮಾಡುವ ರೆಸಿಪಿಗಳನ್ನು ಹೆಚ್ಚಾಗಿ ಸವಿಯುತ್ತಾರೆ. ಹೀಗಾಗಿ ನಾವಿಂದು ಹೆಸರು ಕಾಳಿನ ಪಲ್ಯ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಊಟದ ರುಚಿ ಹೆಚ್ಚಿಸುವಂತೆ ನಾರ್ಥ್ ಕರ್ನಾಟಕದಲ್ಲಿ ಮಾಡಿ ಸವಿಯುವ ಪಲ್ಯವನ್ನು ಮಾಡುವುದು ನೋಡೋಣ.
ಹೆಸರು ಕಾಳಿನ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಉತ್ತರ ಕರ್ನಾಟಕ ಶೈಲಿಯ ಹೆಸರು ಕಾಳಿನ ಪಲ್ಯ ಮಾಡಲು ಬೇಕಾಗುವ
ವಸ್ತುಗಳು
- ಹೆಸರು ಕಾಳು
- ಜೀರಿಗೆ
- ಬೆಳ್ಳುಳ್ಳಿ - 1
- ಜೀರಿಗೆ ಮೆಣಸಿನಕಾಯಿ - 5
- ಸಾಸಿವೆ
- ಈರುಳ್ಳಿ
- ಕರಿಬೇವು
- ಅರಿಶಿನ ಪುಡಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಉತ್ತರ ಕರ್ನಾಟಕ ಶೈಲಿಯ ಹೆಸರು ಕಾಳಿನ ಪಲ್ಯ ಮಾಡುವುದು ಹೇಗೆ?
ಮೊದಲು ಹೆಸರು ಕಾಳನ್ನು ತೊಳೆದು ಹಿಂದಿನ ದಿನವೇ ನೆನೆಸಿಡಬೇಕು. ಈಗ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ನೆನೆಸಿಟ್ಟ ಹೆಸರು ಕಾಳು ಹಾಕಿಕೊಂಡು ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಸಬ್ಬಸ್ಸಿಗೆ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ 15 ನಿಮಿಷ ಬೇಯಿಸಿಕೊಳ್ಳಿ.
ಕುಕ್ಕರ್‌ನಲ್ಲಾದರೆ ಒಂದು ಸೀಟಿ ಹೊಡೆಸಿಕೊಳ್ಳಿ. ಈಗ ಸಣ್ಣ ಮಿಕ್ಸಿ ಜಾರ್‌ಗೆ ಜೀರಿಗೆ ಉಪ್ಪು ಸೇರಿಸಿ ಪುಡಿ ಮಾಡಿಕೊಳ್ಳಿ. ಪುಡಿಯಾದಾಗ ಇದಕ್ಕೆ ಹಸಿ ಮೆಣಸು, ಬೆಳ್ಳುಳ್ಳಿ, ಸಹ ಹಾಕಿ ಮತ್ತೆ ಪುಡಿ ಮಾಡಿಕೊಳ್ಳಿ. ಕುಟಾಣಿಯಲ್ಲೂ ಇದನ್ನು ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳಬಹುದು.
ಈಗ ಒಲೆ ಮೇಲಿರುವ ಹೆಸರುಕಾಳು ಬೆಂದಿದ್ದರೆ ಅದನ್ನು ನೀರಿನಿಂದ ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ ಹೆಚ್ಚಿಕೊಂಡ ಈರುಳ್ಳಿ, ಕರಿಬೇವು ಹಾಗೆ ರುಬ್ಬಿದ್ದ ಬೆಳ್ಳುಳ್ಳಿ ಹಸಿ ಮೆಣಸು ಪುಡಿ, ಅರಶಿಣ ಹಾಕಿ ಫ್ರೈ ಮಾಡಿಕೊಳ್ಳಬೇಕು. 1 ನಿಮಿಷದ ಬಳಿಕ ಈಗ ಬೇಯಿಸಿಕೊಂಡಿದ್ದ ಹೆಸರುಕಾಳು ಸಬ್ಬಸ್ಸಿಗೆ ಸೊಪ್ಪನ್ನು ಇದಕ್ಕೆ ಹಾಕಿಕೊಳ್ಳಿ.
ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ನಿಮಗೆ ಬೇಕಿದ್ದರೆ ತೆಂಗಿನಕಾಯಿ ತುರಿ ಸಹ ಹಾಕಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಶ್ರಣ ಮಾಡಿ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಹೆಸರುಕಾಳಿನ ಪಲ್ಯ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications