Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
ಹಬ್ಬದ ದಿನ ಮಾತ್ರ ಅಲ್ಲ ಬೇರೆ ದಿನಗಳಲ್ಲಿ ನಾವು ಫ್ರೀ ಆಗಿದ್ದಾಗಲು ಮನೆಯಲ್ಲಿ ತಿಂಡಿ ಮಾಡುತ್ತೇವೆ. ಇನ್ನು ಹಬ್ಬದ ದಿನಗಳಲ್ಲಂತೂ ಒಂದಲ್ಲಾ ಒಂದು ತಿಂಡಿ ಮಾಡಿರುತ್ತೇವೆ. ಕೆಲವರು ಸಿಹಿ ತಿಂಡಿಗಳ ಇಷ್ಟಪಟ್ಟರೆ ಇನ್ನು ಕೆಲವರು ಖಾರ ತಿಂಡಿ ಇಷ್ಟಪಡುತ್ತಾರೆ. ಅಂತಹ ಖಾರ ತಿಂಡಿ ಇಷ್ಟಪಡುವವರು ಈ ನಿಪ್ಪಟ್ಟು ಒಷ್ಟ ಪಟ್ಟೇ ಪಡುತ್ತಾರೆ.
ಯಾಕಂದ್ರೆ ನಿಪ್ಪಟ್ಟು ಬಾಯಿಗೆ ಒಳ್ಳೆಯ ರುಚಿ ನೀಡುತ್ತದೆ. ಎಷ್ಟು ತಿಂದರೂ ತಿನ್ನಬೇಕು ಎನಿಸುವ ರುಚಿ ನಿಪ್ಪಟ್ಟಿನದ್ದು, ಹೀಗಾಗಿ ನಿಪ್ಪಟ್ಟಿಗೆ ಈಗಲೂ ಅತೀ ಹೆಚ್ಚು ಬೇಡಿಕೆ ಇದೆ. ನಿಪ್ಪಟ್ಟಿನಲ್ಲಿ ಸೇರಿಸುವ ಮಸಾಲೆ ಅಂಶಗಳು, ಪದಾರ್ಥಗಳು ಅದರ ರುಚಿ ಹೆಚ್ಚಿಸುವ ಜೊತೆಗೆ ಬಾಯಲ್ಲಿ ನೀರು ತರಿಸುತ್ತವೆ.

ಇತ್ತೀಚಿಗೆ ರೆಡಿಮೇಡ್ ನಿಪ್ಪಟ್ಟುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ನಿಪ್ಪಟ್ಟುಗಳು ನಮಗೆ ಸವಿಯಲು ಸಿಗುತ್ತವೆ. ಯಾಕಂದ್ರೆ ನಿಪ್ಪಟ್ಟನ್ನು ಬಹಳ ದಿನಗಳ ವರೆಗೆ ಕೆಡದಂತೆ ಇಡಬಹುದು. ಹೀಗಾಗಿ ಮಾರುಕಟ್ಟೆಗಳಲ್ಲಿ ಪ್ಕಾಕಿಂಗ್ ಮಾಡಿರುವ ನಿಪ್ಪಟ್ಟುಗಳನ್ನು ನಾವು ನೋಡಬಹುದು.
ಸದ್ಯ ನಾವಿಂದು ಈ ರುಚಿಕರವಾದ ನಿಪ್ಪಟ್ಟು ಮಾಡುವುದು ಹೇಗೆ? ನಿಪ್ಪಟ್ಟು ಮಾಡಲು ಬೇಕಾಗುವ ಪದಾರ್ಥಗಳೇನು? ನಿಪ್ಪಟ್ಟು ಮಾಡುವ ಪಾಕವಿಧಾನ ಏನು ಎಂಬುದನ್ನು ತಿಳಿದುಕೊಳ್ಳೋಣ. ಜೊತೆಗೆ ಮನೆಯಲ್ಲಿಯೇ ಈ ನಿಪ್ಪಟ್ಟು ಮಾಡಿ ರುಚಿ ನೋಡೋಣ.
ರುಚಿ ರುಚಿಯ ನಿಪ್ಪಟ್ಟು ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು- 1 ಕಪ್ (300 ಗ್ರಾಮ್)
- ಕಡಲೆ ಹಿಟ್ಟು- ಕಾಲು ಕಪ್
- ಹುರಿಗಡಲೆ- ಕಾಲು ಕಪ್
- ಕೆಡಲೇ ಬೀಜ (ರೋಸ್ಟ್ ಮಾಡಿರುವುದು)
- ಕರಿಬೇವು
- ಕೊತ್ತಂಬರಿ ಸೊಪ್ಪು
- ತುಪ್ಪ
- ಜೀರಿಗೆ
- ಖಾರದ ಪುಡಿ
- ಉಪ್ಪು
- ಎಣ್ಣೆ
ನಿಪ್ಪಟ್ಟು ಮಾಡುವ ವಿಧಾನ
ಮೊದಲು ಕಡಲೆ ಬೀಜ ಹಾಗೂ ಹುರಿಗಡಲೆಯನ್ನು ಒಂದು ಸಣ್ಣ ಮಿಕ್ಸರ್ ಜಾರ್‌ಗೆ ಜಾಕಿ 5 ಸೆಕೆಂಡ್ ರುಬ್ಬಿಕೊಳ್ಳಿ. ಇದು ತರಿತರಿಯಾಗಿ ಇರಬೇಕು, ಹೀಗಾಗಿ 5 ಸೆಕೆಂಡ್ ರುಬ್ಬಿದರೆ ಸಾಕು. ಇದನ್ನು ಒಂದು ಕಡೆ ಎತ್ತಿಟ್ಟುಕೊಂಡು ಒಂದು ಪಾತ್ರೆಗೆ ಅಕ್ಕಿ ಹಿಟ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇದೇ ಪಾತ್ರೆಗೆ ಕರಿಬೇವು, ಜೀರಿಗೆ, ಖಾರದ ಪುಡಿ, ಕೊತ್ತಂಬರಿ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಎರಡು ಟಿ ಸ್ಪೂನ್ ತುಪ್ಪ ಹಾಕಬಹುದು. ತುಲ್ಲ ಇಲ್ಲದಿದ್ದರೆ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾಗಿರಬೇಕು, ನೀರಾಗಿರಬಾರದು. ಹಿಟ್ಟಿಗೆ ಉಪ್ಪು ಹಾಕುವಾಗ ಎಚ್ಚರವಿರಲಿ.
ಬಳಿಕ ಒಂದು ಪ್ಲಾಸ್ಟಿಕ್‌ಗೆ ಎಣ್ಣೆ ಹಚ್ಚಿಕೊಂಡು ಒಂದು ದೊಡ್ಡ ಗೋಲಿ ಆಕಾರದಲ್ಲಿ ಹಿಟ್ಟು ತೆಗೆದುಕೊಂಡು ಚೆನ್ನಾಗಿ ಒತ್ತಿಕೊಂಡು ನಿಪ್ಪಟ್ಟು ಮಾಡಿಕೊಳ್ಳಿ.
ಇನ್ನೊಂದೆಡೆ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಮಧ್ಯಮ ಉರಿಯಲ್ಲಿ ಎಣ್ಣೆ ಕಾಯಿಸಿ. ಎಣ್ಣೆ ಕಾದ ಬಳಿಕ ಅದಕ್ಕೆ ನಿಪ್ಪಟ್ಟು ಹಾಕಿ ಬೇಯಲು ಬಿಡಿ. 5 ನಿಮಿಷದ ವರೆಗೂ ಚೆನ್ನಾಗಿ ಕಾಯಿಸಿ ಬಳಕ ಮತ್ತೊಂದು ಬದಿ ಕಾಯಿಸಲು ತಿರುಗಿಸಿ ಹಾಕಿ. ಉರಿಯನ್ನು ಮಧ್ಯಮವಾಗಿಯೇ ಇಟ್ಟುಕೊಳ್ಳಿ ಇಲ್ಲದಿದ್ದರೆ ನಿಪ್ಪಟ್ಟಿನ ಮೇಲಿನ ಪದರ ಮಾತ್ರ ಬೇಗ ಕರಿದಂತಾಗುತ್ತದೆ. ಆದರೆ ಒಳಗೆ ಹಸಿ ಉಳಿದುಬಿಡುತ್ತದೆ. ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಾಯಿಸಿಕೊಳ್ಳಿ. ನಿಪ್ಪಟ್ಟಿನ ಬಣ್ಣ ಸ್ವಲ್ಪ ಬದಲಾದರೆ ಸಾಕು ಬಳಿಕ ಎಣ್ಣೆಯಿಂದ ತೆಗೆದು ಬೇರೊಂದು ಪಾತ್ರೆಗೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ನಿಪ್ಪಟ್ಟು ಸವಿಯಲು ಸಿದ್ದ.



Click it and Unblock the Notifications