Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಸುರಿಯುವ ಮಳೆಯಲ್ಲಿ ಟೀ ಜೊತೆ ಸವಿಯಲು ನಿಪ್ಪಟ್ಟು ... ಆಹಾ!
Recipes
oi-Reena TK
Posted By: Reena TK
ಮಳೆಗಾಲ ಅಲ್ವಾ, ಸಂಜೆ ಟೀ ಜೊತೆಗೆ ಏನಾದರೂ ಕರಂ ಕುರಂ ಸವಿಯಬೇಕೆಂದು ಅನಿಸುತ್ತದೆ ಅಲ್ವಾ? ಟೀ ಜೊತೆ ತಿನ್ನಲು ನಿಪ್ಪಟ್ಟು ಸೂಪರ್, ಇದನ್ನು ಮಾಡಿಟ್ಟರೆ ನಿಮಗೆ ಬೇಕೆನಿಸಿದಾಗ ತಿನ್ನಬಹುದು, ಅಲ್ಲದೆ ಮನೆಗೆ ಗೆಸ್ಟ್ ಬಂದಾಗ ಸ್ನ್ಯಾಕ್ಸ್ ಇದನ್ನೇ ನೀಡಬಹುದು.
ಈ ನಿಪ್ಪಟ್ಟು ಮಾಡುವುದೇನು ಅಷ್ಟೇನು ಕಷ್ಟಕರವಲ್ಲ, ಸ್ವಲ್ಪ ಮಾಡುವುದಾದರೆ 30 ನಿಮಿಷದಲ್ಲಿ ಮಾಡಬಹುದು, ನೀವು ಒಂದು ತಿಂಗಳಿಗೆ ಸಾಕಾಗುವಷ್ಟು ಮಾಡುತ್ತೇನೆ ಎಂದರು ಒಂದು ಗಂಟೆಯ ಶ್ರಮವಷ್ಟೇ... ಬನ್ನಿ ಈ ನಿಪ್ಪಟ್ಟು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿಹಿಟ್ಟು
3-4 ಚಮಚ ನೆಲಗಡಲೆ
4 ಚಮಚ ಹುರಿಗಡಲೆ
ಸ್ವಲ್ಪ ಕೊಬ್ಬರಿ
1 ಚಮಚ ಬಿಳಿ ಎಳ್ಳು
ಸ್ವಲ್ಪ ಖಾರದ ಪುಡಿ (1/4 ಚಮಚ ಸಾಕು, ನೀವು ಖಾರ ಇಷ್ಟ ಪಡುವವರಾದರೆ ಇನ್ನೂ
ಸ್ವಲ್ಪ ಸೇರಿಸಬಹುದು
1/2 ಚಮಚ ಉಪ್ಪುಸ
ಸ್ವಲ್ಪ ಕರಿಬೇವಿನ ಎಲೆ(ಚಿಕ್ಕದಾಗಿ ಕತ್ತರಿಸಿದ್ದು)
1 ಚಮಚ ಕಾಯಿಸಿದ ಎಣ್ಣೆ
1/4 ಕಪ್ ಬಿಸಿ ನೀರು
1 ಚಮಚಚ ಚಿರೋಟಿ ರವೆ
ಮಾಡುವ ವಿಧಾನ
- ನೀವು ನೆಲಗಡಲೆ ರೋಸ್ಟ್ ಮಾಡಿ ಸಿಪ್ಪೆ ತೆಗೆಯಿರಿ, ರೋಸ್ಟ್ ಮಾಡಿದ ಮೇಲೆ ಕೈಯಿಂದಲೇ ಉಜ್ಜಿದರೆ ಸಾಕು ಸಿಪ್ಪೆ ಹೋಗುತ್ತೆ. ಹುರಿಗಡಲೆ ರೋಸ್ಟ್ ಮಾಡಿ. ಕೊಬ್ಬರಿ ಕೂಡ ರೋಸ್ಟ್ ಮಾಡಿ, ನಂತರ ತರಿ ತರಿಯಾಗಿ ಪುಡಿ ಮಾಡಿ.
- ಈಗ ದೊಡ್ಡ ಬೌಲ್‌ಗೆ ಅಕ್ಕಿ ಹಿಟ್ಟು, ಪುಡಿ ಮಾಡಿದ ಹಿಟ್ಟು, ಎಳ್ಳು, ಚಿಕ್ಕದಾಗಿ ಕತ್ತರಿಸಿದ ಕರಿಬೇವಿನ ಎಲೆ, ಕಾರದ ಪುಡಿ, ಉಪ್ಪು, ಚಿರೋಟಿ ರವೆ ಹಾಕಿ, 1 ಚಮಚ ಬಿಸಿ ಎಣ್ಣೆ ಹಾಕ ಮಿಕ್ಸ್ ಮಾಡಿ, ನಂತರ ಬಿಸಿ ನೀರು ಹಾಕಿ ಮಿಕ್ಸ್ ಮಾಡಿ, ಹಿಟ್ಟು ಗಟ್ಟಿಯಾಗಿರಬೇಕು.
- ನಂತರ ಅದರಿಮದ ಚಿಕ್ಕ ಚಿಕ್ಕ ಉಂಡೆ ಮಾಡಿ
- ಈಗ ಬಾಣಲೆಯಲ್ಲಿ ಫ್ರೈ ಮಾಡಲು 1 ಕಪ್ ಎಣ್ಣೆ ಹಾಕಿ ಕಾಯಿಸಿ, ಬಳಿಕ ಚಿಕ್ಕ ಉಂಡೆಯನ್ನು ಕೈಯಿಂದಲೇ ತಟ್ಟಿ ಎಣ್ಣೆಗೆ ಹಾಕಿ ಫ್ರೈ ಮಾಡಿ, ಚೆನ್ನಾಗಿ ರೋಸ್ಟ್ ಆದಾಗ ತೆಗೆಯಿರಿ.
- ನೀವು ಒಂದೊಂದೇ ನಿಪ್ಪಟ್ಟು ಎಣ್ಣೆಗೆ ಬಿಡಬಹುದು ಅಥವಾ 3-4 ಜೊತೆಗೆ ಕೂಡ ಬಿಡಬಹುದು.
- ಈಗ ರೆಡಿಯಾದ ನಿಪ್ಪಟ್ಟು ಅನ್ನು ಆರಿದ ಮೇಲೆ ಗಾಳಿಯಾಡದಂತೆ ಹಾಕಿಟ್ಟು ಟೀ ಜೊತೆ ಸವಿಯಿರಿ.
- ಇದನ್ನು ತಿಂಗಳಗಟ್ಟಲೆ ಇಡಬಹುದು.
Comments
[ of 5 - Users]
Story first published: Sunday, July 21, 2024, 16:24 [IST]
Other articles published on Jul 21, 2024



Click it and Unblock the Notifications