Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಕಿ ನೆನೆಸದೆ ನೀರ್ ದೋಸೆ ಮಾಡಿ..! 5 ನಿಮಿಷದಲ್ಲಿ ರೆಡಿ ಮಾಡಿ ನೋಡಿ..!
ಬ್ರೇಕ್ ಫಾಸ್ಟ್‌ಗೆ ನೀರ್ ದೋಸೆ ತುಂಬಾನೆ ಫೇಮಸ್ ಖಾದ್ಯ, ಹಲವು ಹೋಟೆಲ್‌ಗಳಲ್ಲೂ ಈಗ ನೀರ್ ದೋಸೆಯೇ ಫೇಮಸ್, ಮಲೆನಾಡು, ಕರಾವಳಿ ಭಾಗದಲ್ಲಿ ಬಹುತೇಕ ಈ ನೀರ್ ದೋಸೆ ಸ್ಪೆಷಲ್ ಡಿಷ್ ಆಗಿರಲಿದೆ. ಸವಿಯಲು ಬಹಳ ರುಚಿಕರ ಆಗಿರುವ ತಿಂಡಿ ಇದು. ಮಕ್ಕಳಿಗೆ ನೀರ್ ದೋಸೆ ತುಂಬಾನೆ ಇಷ್ಟವಾಗುತ್ತೆ. ನೀರ್ ದೋಸೆಗೆ ವಿಶಿಷ್ಟ ಚಟ್ನಿ, ಸಾಂಬಾರ್ ಇರಬೇಕು ಎಂಬ ನಿಯಮವೂ ಇಲ್ಲ, ಯಾವುದೇ ಸೈಡ್ ಡಿಶ್, ಚಟ್ನಿ ಕೂಡ ಇದರ ರುಚಿ ಹೆಚ್ಚಿಸುತ್ತೆ.
ಆದ್ರೆ ನೀರ್ ದೋಸೆ ಮಾಡಲು ಹಿಂದಿದನ ದಿನವೇ ಅಕ್ಕಿ ನೆನೆಸಿಟ್ಟು, ಮಿಕ್ಸಿಯಲ್ಲಿ ರುಬ್ಬಿಕೊಂಡು ಒಂದು ದಿನ ಬಿಟ್ಟು ಮಾರನೆ ದಿನ ಬೆಳಗ್ಗೆ ಈ ದೋಸೆ ಮಾಡಲಾಗುತ್ತದೆ. ಅಂದ್ರೆ ನೀರ್ ದೋಸೆ ಮಾಡಲು ಹೆಚ್ಚಿನ ತಯಾರಿಯ ಅಗತ್ಯವಂತೂ ಇದೆ. ನಾವಿಂದು ಇದ್ಯಾವುದೂ ತಯಾರಿಯೇ ಇಲ್ಲದೆ ಅತ್ಯಂತ ಸುಲಭ ಮಾರ್ಗದಲ್ಲಿ ನೀರ್ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ.

ನೀರ್ ದೋಸೆ ಮಾಡಲು ಇಷ್ಟೆಲ್ಲಾ ತಯಾರಿ ಬೇಕು ಎಂದು ನೀವಂದುಕೊಂಡಿರಬಹುದು. ಆದ್ರೆ ನಾವಿಂದು 10 ನಿಮಿಷದ ತಯಾರಿಯೊಂದಿಗೆ ರುಚಿ ರುಚಿಯ ನೀರ್ ದೋಸೆ ಮಾಡುವ ಕುರಿತು ತಿಳಿಯೋಣ. ಇದರಲ್ಲಿ ಅಕ್ಕಿ ನೆನೆಸುವುದು ಬೇಡ ಕೇವಲ ತೆಂಗಿನ ತುರಿ, ಅಕ್ಕಿ ಹಿಟ್ಟು ಬಳಸಿ ನಿಮಿಷದಲ್ಲಿ ಹಿಟ್ಟು ರೆಡಿ ಮಾಡಿಕೊಂಡು ರುಚಿ ರುಚಿಯಾಗಿ ಈ ದೋಸೆ ಮಾಡಬಹುದು.
ಹಾಗಾದ್ರೆ ಈ ವಿಭಿನ್ನ ತಯಾರಿಯಲ್ಲಿ ಹಿಟ್ಟು ರೆಡಿ ಮಾಡಿ ನೀರ್ ದೋಸೆ ಮಾಡುವುದು ಹೇಗೆ?, ಈ ನೀರ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಹಿಟ್ಟು ಮಾಡಿಕೊಳ್ಳುವುದು ಹೇಗೆ?, ತಯಾರಿ ಹೇಗೆ ಮಾಡಬೇಕು? ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನೀರ್ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು- 2 ಕಪ್
- ತೆಂಗಿನ ಕಾಯಿ ತುರಿ- ಅರ್ಧ ಕಪ್
- ಉಪ್ಪು
- ಎಣ್ಣೆ
ನೀರ್ ದೋಸೆ ಮಾಡುವುದು ಹೇಗೆ?
ಸಾಮಾನ್ಯವಾಗಿ ನೀರ್ ದೋಸೆ ಮಾಡಲು ಹಿಂದಿನ ದಿನ ಅಕ್ಕಿ ನೆನೆಸಿಟ್ಟು ಅದನ್ನು ರುಬ್ಬಿಕೊಂಡು ಹಿಟ್ಟು ರೆಡಿ ಮಾಡಿಕೊಳ್ಳಬೇಕಾಗುತ್ತದೆ. ಆದ್ರೆ ನಾವಿಂದು ನೇರವಾಗಿ ಹಿಟ್ಟನ್ನು ಕ್ಷಣದಲ್ಲಿ ತಯಾರಿ ಮಾಡಕೊಳ್ಳಬೇಕಾಗುತ್ತದೆ. ಇದಕ್ಕೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ 2 ಕಪ್ ಅಕ್ಕಿ ಹಿಟ್ಟು ಹಾಕಿಕೊಳ್ಳಿ, ನಂತರ ಇದಕ್ಕೆ ಅರ್ಧ ಕಪ್ ತೆಂಗಿನ ಕಾಯಿ ತುರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ವಸ್ತುಗಳ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಳ್ಳುವಾಗ ಎಲ್ಲಾ ವಸ್ತು ಮುಳುಗುವಷ್ಟು ನೀರು ಹಾಕಿಕೊಳ್ಳಬೇಕು. ನಂತರ ಚೆನ್ನಾಗಿ ನುಣ್ಣಗೆ ರುಬ್ಬಿ ಒಂದು ಬೌಲ್‌ಗೆ ಹಾಕಿಕೊಳ್ಳಿ. ರುಬ್ಬಿದ ಬಳಿಕ ಇನ್ನೊಂದು ಕಪ್ ನೀರು ಹಾಕಿ ಮಿಕ್ಸ್ ಮಾಡಿ. ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಬಿಸಿ ಮಾಡಿಕೊಳ್ಳಿ.
ಬಿಸಿಯಾದ ಬಳಿಕ ಎಣ್ಣೆ ಹಚ್ಚಿಕೊಂಡು ಅದಕ್ಕೆ ರೆಡಿ ಮಾಡಿಕೊಂಡ ಹಿಟ್ಟನ್ನು ಹಾಕಿಕೊಳ್ಳಿ. ಈ ದೋಸೆಯನ್ನ ಒಂದೇ ಕಡೆ ಬೇಯಿಸಿಕೊಳ್ಳಬೇಕು. ಎರಡು ಕಡೆ ಬೇಯಿಸಿದರೆ ದೋಸೆ ಗಟ್ಟಿಯಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ನೀರ್ ದೋಸೆ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ಸುಲಭದ ತಿಂಡಿ ಮಾಡಿ ನೋಡಿ. ಮಾಡೋದು ತುಂಬಾನೆ ಸುಲಭ.



Click it and Unblock the Notifications