Navratri: ಉಪವಾಸಕ್ಕೆ ಈರುಳ್ಳಿ-ಬೆಳ್ಳುಳ್ಳಿ ಇಲ್ಲದೆ ನಿಮಿಷಗಳಲ್ಲಿ ಈ 2 ರೆಸಿಪಿ ಮಾಡಿ! ಒಮ್ಮೆ ತಿಂದರೆ ಮತ್ತೆ ಕೇಳ್ತೀರಾ

Posted By:

ನವರಾತ್ರಿ ಹಬ್ಬದ (Navratri) ಸಮಯದಲ್ಲಿ ಬಹುತೇಕ ಮನೆಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಅಡುಗೆಗಳನ್ನು ತಯಾರಿಸಲಾಗುತ್ತದೆ. ನೀವು ಸಹ ಈರುಳ್ಳಿ-ಬೆಳ್ಳುಳ್ಳಿ (Without Onion-Garlic) ಇಲ್ಲದೆ ಮಾಡುವ, ರುಚಿಕರವಾದ ರೆಸಿಪಿ ಹುಡುಕುತ್ತಿದ್ದರೆ, ಈ ಲೇಖನ ನಿಮಗೆ ಸಹಕಾರಿಯಾಗಲಿದೆ. ಇಲ್ಲಿ ತಿಳಿಸಿರುವ ತರಕಾರಿ ಖಾದ್ಯಗಳ ರೆಸಪಿಯನ್ನು ಮನೆಯಲ್ಲಿಯೇ ಒಮ್ಮೆ ಟ್ರೈ ಮಾಡಿ ನೋಡಿ.

ಒಂಬತ್ತು ದಿನಗಳ ಶಾರದೀಯ ನವರಾತ್ರಿಯ ಹಬ್ಬವನ್ನು ಪೂಜೆ ಸಾಮಾನ್ಯ. ಜೊತೆಗೆ ಉಪವಾಸ, ವ್ರತ ಮತ್ತು ಸಾತ್ವಿಕ ಆಹಾರ ಸೇವನೆಯೂ ಇರುತ್ತದೆ. ಈ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸಿದ ಆಹಾರಗಳಿಂದ ದೂರವಿರುತ್ತಾರೆ. ಹೀಗೆ ಆಹಾರವನ್ನು ಪವಿತ್ರ ಮತ್ತು ಶುದ್ಧವಾಗಿ ಇರಿಸಿಕೊಳ್ಳಲು ಆದ್ಯತೆ ನೀಡಲಾಗುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ಅಡುಗೆ (navratri vrat recipes) ಹೇಗೆ ಮಾಡುವುದು ಎಂಬ ಯೋಚನೆಯೇ? ನೀವು ಚಿಂತಿಸಬೇಕಾಗಿಲ್ಲ.

navratri vrat recipes

ನಾವು ಇಂದು ಈ ಲೇಖನದಲ್ಲಿ ಎರಡು ಸುಲಭ ಮತ್ತು ರುಚಿಕರವಾದ ರೆಸಿಪಿಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಅವುಗಳೇ ಆಲೂಗಡ್ಡೆ-ಟೊಮೆಟೊ ಪಲ್ಯ ಮತ್ತು ಪನೀರ್ ಮಖಾನಾ ಕರಿ. ಈ ರೆಸಿಪಿಗಳು ನವರಾತ್ರಿ ಉಪವಾಸಕ್ಕೆ ಸೂಕ್ತವಾಗಿವೆ. ಇವು ತಯಾರಿಸಲು ತುಂಬಾ ಸುಲಭ. ಹಾಗಾಗಿ, ಈ ನವರಾತ್ರಿಯಲ್ಲಿ ರುಚಿ ಮತ್ತು ಆರೋಗ್ಯ (Navratri Recipe) ಎರಡನ್ನೂ ನೀವು ಪಡೆಯಬಹುದು. ನಿಮ್ಮ ಉಪವಾಸ ವ್ರತವನ್ನು ಇನ್ನಷ್ಟು ವಿಶೇಷವಾಗಿಸಬಹುದು.

ಆಲೂಗಡ್ಡೆ-ಟೊಮೆಟೊ ಪಲ್ಯ

ಆಲೂಗಡ್ಡೆ-ಟೊಮೆಟೊ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು

• ಆಲೂಗಡ್ಡೆ
• ಟೊಮೆಟೊ
• ಹಸಿ ಮೆಣಸಿನಕಾಯಿ
• ಶುಂಠಿ
• ಅರಿಶಿನ ಪುಡಿ
• ಕೊತ್ತಂಬರಿ ಪುಡಿ
• ಕೆಂಪು ಮೆಣಸಿನ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ಎಣ್ಣೆ
• ಹಸಿ ಕೊತ್ತಂಬರಿ

ಆಲೂಗಡ್ಡೆ-ಟೊಮೆಟೊ ಪಲ್ಯ ತಯಾರಿಸುವ ವಿಧಾನ

ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಇಂಗು ಮತ್ತು ಶುಂಠಿ ಹಾಕಿ ಸ್ವಲ್ಪ ಹುರಿಯಿರಿ. ಈಗ ಹಸಿ ಮೆಣಸಿನಕಾಯಿ ಮತ್ತು ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಅರಿಶಿನ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ. ಬೇಯಿಸಿದ ಆಲೂಗಡ್ಡೆಯನ್ನು ಹಾಕಿ ಮಸಾಲೆಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಸುಮಾರು 5 ನಿಮಿಷಗಳ ಕಾಲ ಬೇಯಿಸಿ.

ಕೊನೆಯಲ್ಲಿ ಹಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿ ಬಡಿಸಿ. ನವರಾತ್ರಿ ಉಪವಾಸದಲ್ಲಿ ಈ ರುಚಿಕರವಾದ ಆಲೂಗಡ್ಡೆ-ಟೊಮೆಟೊ ಪಲ್ಯವು ನಿಮ್ಮ ಉಪವಾಸವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಈ ಪಾಕವಿಧಾನವು ಸುಲಭ ಮತ್ತು ಆರೋಗ್ಯಕರವಾಗಿದೆ.

ಪನೀರ್ ಮಖಾನಾ ಕರಿ

ಪನೀರ್ ಮಖಾನಾ ಕರಿಗೆ ಬೇಕಾಗುವ ಸಾಮಗ್ರಿಗಳು

• ಪನೀರ್
• ಮಖಾನಾ
• ಹಾಲು
• ಗೋಡಂಬಿ
• ಶುಂಠಿ
• ಅರಿಶಿನ ಪುಡಿ
• ಕೆಂಪು ಮೆಣಸಿನ ಪುಡಿ
• ಕೊತ್ತಂಬರಿ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ತುಪ್ಪ
• ಹಸಿ ಕೊತ್ತಂಬರಿ

ಪನೀರ್ ಮಖಾನಾ ಕರಿ ತಯಾರಿಸುವ ವಿಧಾನ

ಮೊದಲು ಗೋಡಂಬಿ ಮತ್ತು ಶುಂಠಿಯನ್ನು ಮಿಕ್ಸ್ ಮಾಡಿ, ಪೇಸ್ಟ್ ತಯಾರಿಸಿ. ಈಗ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಪೇಸ್ಟ್ ಹಾಕಿ ಸ್ವಲ್ಪ ಹುರಿಯಿರಿ. ಈಗ ಅರಿಶಿನ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಕೊತ್ತಂಬರಿ ಪುಡಿ ಹಾಕಿ. ಬಳಿಕ ಹಾಲು ಹಾಕಿ 5 ನಿಮಿಷ ಬೇಯಿಸಿ.

ನಂತರ ಹುರಿದ ಮಖಾನಾ ಮತ್ತು ಪನೀರ್ ಹಾಕಿ. ಕರಿ ಗಟ್ಟಿಯಾಗುವವರೆಗೆ ಸುಮಾರು 7 ರಿಂದ 10 ನಿಮಿಷಗಳ ಕಾಲ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿ ಬಿಸಿಯಾಗಿ ಸವಿಯಬಹುದು. ಈ ರೆಸಪಿಯು ನವರಾತ್ರಿ ಉಪವಾಸ ವ್ರತಕ್ಕೆ ಸೂಕ್ತವಾಗಿದೆ.

[ of 5 - Users]
Story first published: Monday, September 22, 2025, 17:47 [IST]
X
Desktop Bottom Promotion