Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಟಿ ಕೋಳಿಗೆ ಮಸಾಲೆ ಹೀಗೆ ಮಾಡಿ ನೋಡಿ ರುಚಿ ಬೊಂಬಾಟ್ ಆಗಿರುತ್ತೆ
ವೀಕೆಂಡ್‌ನಲ್ಲಿ ನೀವು ನಾಟಿಕೋಳಿ ಮಾಡುವುದಾದರೆ ಈ ರೀತಿ ಟ್ರೈ ಮಾಡಿ ನೋಡಿ ರುಚಿ ತುಂಬಾನೇ ಇಷ್ಟವಾಗುತ್ತೆ, ಈ ರೆಸಿಪಿ ಸುಲಭವಾಗಿದ್ದು ನಾಟಿ ಕೋಳಿ ರುಚಿ ಮನಸ್ಸಿಗೆ ತೃಪ್ತಿ ನೀಡುತ್ತೆ. ಬನ್ನಿ ನಾಟಿ ಕೋಳಿ ಸಾರು ಮಾಡುವುದು ಹೇಗೆ ಎಂದು ನೋಡೋಣ:

ನಾಟಿ ಕೋಳಿ ಸಾರಿಗೆ ಬೇಕಾಗುವ ಸಾಮಗ್ರಿ
1 ಕೆಜಿ ನಾಟಿ ಕೋಳಿ
ತೆಂಗಿನ ತುರಿ ಒಂದೂವರೆ ಕಪ್
ಮೆಣಸಿನ ಪುಡಿ ಒಂದೂವರೆ ಚಮಚ
ಕೊತ್ತಂಬರಿ ಪುಡಿ 2 ಚಮಚ
ಗರಂ ಮಸಾಲ ಪುಡಿ 1/2 ಚಮಚ
ಸೋಂಪು 1/2 ಚಮಚ
ಜೀರಿಗೆ 1/2 ಚಮಚ
1/2 ಚಮಚ ಅರಿಶಿಣ
ಬೆಳುಳ್ಳಿ 2-3 ಎಸಳು
2-3 ಲವಂಗ
ಚಕ್ಕೆ 1 ಚಮಚ
ಎಣ್ಣೆ
ಚಿಕ್ಕ ಈರುಳ್ಳಿ 2
ಸ್ವಲ್ಪ ಕರಿಬೇವು
1 ಚಮಚ ನಿಂಬೆರಸ
ಮಾಡುವ ವಿಧಾನ
- ಬಾಣಲೆ ಬಿಸಿ ಮಾಡಿ ತೆಂಗಿನ ತುರಿ ಹಾಕಿ 1 ಚಮಚ ಎಣ್ಣೆ ಹಾಕಿ ಹುರಿಯಿರಿ
- ನಂತರ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಸೋಂಪು, ಜೀರಿಗೆ ಸೇರಿಸಿ ಫ್ರೈ ಮಾಡಿ
- ಬೆಳ್ಳುಳ್ಳಿ, ಲವಂಗ ಸೇರಿಸಿ
- ಈರುಳ್ಳಿ ಹಾಕಿ ಫ್ರೈ ಮಾಡಿ
- ಸ್ವಲ್ಪ ಕರಿಬೇವು ಸೇರಿಸಿ ಫ್ರೈ ಮಾಡಿ
- ಈಗ ಈ ಮಸಾಲೆ ಸಾಮಗ್ರಿ ತೆಂಗಿನ ತುರಿ ಜೊತೆ ಫ್ರೈ ಮಾಡುವಾಗ ಸುವಾಸನೆ ಬೀರುತ್ತದೆ, ತೆಂಗಿನ ತುರಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ
- ಬಳಿಕ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ
- ಅದಾದ ಬಳಿಕ ನುಣ್ಣನೆ ರುಬ್ಬಿ.
- ಈಗ ನೀವು ಕುಕ್ಕರ್ ಬಿಸಿ ಮಾಡಿ, ನಂತರ 1-2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ ಸೇರಿಸಿ ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ನಂತರ ಚಿಕನ್ ಹಾಕಿ.
- ಅರಿಶಿಣ ಪುಡಿ ಸೇರಿಸಿ
- ರುಚಿಗೆ ತಕ್ಕ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ.
- ಬಳಿಕ ರುಬ್ಬಿದ ಮಸಾಲೆ ಸೇರಿಸಿ, ನಿಮಗೆ ಗ್ರೇವಿ ಕಡಿಮೆ ಸಾಕೆಂದರೆ ಒಂದು ಕಪ್ ನೀರು ಸೇರಿಸಿ, ಹೆಚ್ಚು ಬೇಕೆಂದರೆ ಒಂದೂವರೆ ಕಪ್ ನೀರು ಸೇರಿಸಿ 4-5 ವಿಶಲ್ ಬರುವವರೆಗೆ ಬೇಯಿಸಿ
- ನಂತರ ಒಗ್ಗರಣೆ ಹಾಕಿದರೆ ನಾಟಿ ಕೋಳಿ ರೆಡಿ, ರೆಡಿಯಾದ ನಾಟಿಕೋಳಿ ಮುದ್ದೆ ಜೊತೆ ಸವಿದು ನೋಡಿ ಸೂಪರ್ ಆಗಿರುತ್ತೆ.
ಜೊತೆಗೆ ರಾಗಿ ಮುದ್ದೆ ಮಾಡುವುದಾದರೆ
ಬೇಕಾಗುವ ಸಾಮಗ್ರಿ
1 ಕಪ್ ರಾಗಿ ಹಿಟ್ಟು
2 ಕಪ್ ನೀರು
1/2 ಚಮಚ ಉಪ್ಪು
ತುಪ್ಪ 2 ಚಮಚ
ಮಾಡುವ ವಿಧಾನ
2 ಕಪ್ ನೀರು ಹಾಕಿ ಕುದಿಸಿ, ತುಪ್ಪ, ಉಪ್ಪು ಸೇರಿಸಿ
ನಂತರ ರಾಗಿ ಹಿಟ್ಟು ಹಾಕಿ ಕಲೆಸಿ
ಹಿಟ್ಟು ಬೆಂದ ಮೇಲೆ ಉರಿಯಿಂದ ಇಳಿಸಿ
ಒಂದು ತಟ್ಟೆಗೆ ತುಪ್ಪ ಸವರಿ ಅವರಲ್ಲಿ ಸ್ವಲ್ಪ ಹಿಟ್ಟು ಹಾಕಿ ಮುದ್ದೆ ಕಟ್ಟಿ,
ನಿಮಗೆ ಬೇಕಾದ ಗಾತ್ರದಲ್ಲಿ ಮುದ್ದೆ ಕಟ್ಟಿ.



Click it and Unblock the Notifications