Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಯಲ್ಲಿ ಬಿಸಿ ಬಿಸಿಯಾದ ಮೈಸೂರು ರಸಂ ಮಾಡಿ: ಇಲ್ಲಿದೆ ರುಚಿ ರುಚಿ ರೆಸಿಪಿ
ಚಳಿಗಾಲದಲ್ಲಿ ನೀವು ಹಲವು ರೀತಿ ಬಿಸಿ ಬಿಸಿಯಾದ ಅಡುಗೆ ಮಾಡಿ ಸವಿಯಲು ಇಷ್ಟಪಡಬಹುದು. ಹಾಗೆ ಈ ಸಮಯದಲ್ಲಿ ನೀವು ಊಟದೊಂದಿಗೆ ರುಚಿ ರುಚಿಯಾದ ಅಡುಗೆಗಳನ್ನು ಸವಿಯೋದು ನೋಡಬಹುದು. ಹಾಗೆ ಊಟದೊಂದಿಗೆ ಬಿಸಿ ಬಿಸಿಯಾದ ರಸಂ ಸವಿಯೋಕೆ ಬಯಸುತ್ತೀರಿ. ರಸಂ ಇದ್ದರೆ ಊಟದ ರುಚಿ ಮತ್ತಷ್ಟು ಹೆಚ್ಚಾಗೋದು ಕಾಮನ್. ಹಾಗೆ ಊಟದೊಂದಿಗೆ ರಸಂ ಇದ್ದರೇನೇ ಊಟದ ರುಚಿ ದುಪ್ಪಟ್ಟಾಗುತ್ತೆ. ಇನ್ನು ಚಳಿಗಾಲದಲ್ಲಿ ಬಿಸಿ ಬಿಸಿ ರಸಂ ಅನ್ನು ನೀವು ಹಾಗೆಯೇ ಕುಡಿಯಬಹುದು.
ಇನ್ನು ಈ ರಸಂ ಅನ್ನು ಹತ್ತಾರು ಬಗೆಯಲ್ಲಿ ಮಾಡಬಹುದು. ನಾವಿಂದು ಸುಲಭವಾಗಿ ಹಾಗೆ ವಿಶೇಷ ರುಚಿಯ ಮೈಸೂರು ರಸಂ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಸಹ ಮೈಸೂರು ಭಾಗದಲ್ಲಿನ ಹೋಟೆಲ್‌ಗಳಲ್ಲಿ ಸವಿದಿರಬಹುದು. ವಿಶೇಷ ರುಚಿಯಲ್ಲಿ ಈ ರಸಂ ಮಾಡಲಾಗುತ್ತೆ. ಹಾಗೆ ಇದರ ರುಚಿ ಒಮ್ಮೆ ಸವಿದರೆ ನೀವು ಕೂಡ ಇದೇ ವಿಧಾನದಲ್ಲಿ ರಸಂ ಮಾಡಿ ಸವಿಯಲು ಮುಂದಾಗೋದು ಖಚಿತ.

ಹಾಗಾದ್ರೆ ಈ ಮೈಸೂರು ರಸಂ ಮಾಡೋದು ಹೇಗೆ? ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಅದ್ರಲ್ಲೂ ಈ ಮೈಸೂರು ರಸಂ ಊಟದೊಂದಿಗೆ ದುಪ್ಪಟ್ಟು ರುಚಿ ನೀಡಲಿದೆ. ಈ ರಸಂ ಮಾಡುವ ವಿಧಾನ ಇಲ್ಲಿದೆ.
ಮೈಸೂರು ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬೇಳೆ-1 ಕಪ್
- ಟೊಮೆಟೋ - 2
- ಹುಣಸೆಹಣ್ಣು
- ತುರಿದ ಹಸಿ ತೆಂಗಿನಕಾಯಿ
- ಶೇಂಗಾ
- ಒಣ ಮೆಣಸು
- ಧನಿಯಾ ಕಾಳು
- ಶುಂಠಿ
- ಉಪ್ಪು
- ತುಪ್ಪ
- ಸಾಸಿವೆ
- ಮೆಂತ್ಯ
- ಕೊತ್ತಂಬರಿ ಸೊಪ್ಪು
- ಬೆಲ್ಲ
- ಕರಿಬೇವು
- ಅರಿಶಿನ
- ಎಣ್ಣೆ
ಮೈಸೂರು ರಸಂ ಮಾಡುವ ವಿಧಾನವೇನು?
ಮೊದಲು ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಬೇಳೆ ಹಾಗೂ ನೀರು ಹಾಕಿ ಚಿಟಿಕೆ ಅರಶಿಣ, ಉಪ್ಪು, ಸೇರಿಸಿ 2 ಸೀಟಿ ಹೊಡೆಯಲು ಬಿಡಿ ಅನಂತರ ಉರಿ ಬಂದ್ ಮಾಡಿ ಮುಚ್ಚಳ ತೆರೆದು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. ಹಾಗೆ ಒಲೆ ಮೇಲೆ ಮತ್ತೊಂದು ಪಾತ್ರೆಗೆ ನೀರು ಹಾಕಿ ಅದಕ್ಕೆ ಟೊಮೆಟೋ ಹಾಕಿ ಕುದಿಬರಲು ಬಿಡಿ.
ಕುದಿಬಂದ ಈ ಟೊಮೆಟೋ ಹಣ್ಣನ್ನು ರಸವನ್ನು ಹಿಂಡಿ ಇಟ್ಟುಕೊಳ್ಳಿ. ಈಗ ಒಲೆಯ ಮೇಲೆ ಪ್ಯಾನ್ ಇರಿಸಿ ಸ್ವಲ್ಪ ಎಣ್ಣೆ ಸೇರಿಸಿ, ಶುಂಠಿ, ಮೆಣಸು, ಶೇಂಗಾ, ಒಣ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಮೃದುವಾಗುವವರೆಗೆ ಹುರಿಯಿರಿ ಮತ್ತು ಪಕ್ಕಕ್ಕೆ ಇರಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಅವುಗಳನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಇದಕ್ಕೆ ತುರಿದ ತೆಂಗನಕಾಯಿ ತುರಿ ಮತ್ತು ಜೀರಿಗೆ ಸೇರಿಸಿಕೊಳ್ಳಿ. ಹಾಗೆ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಈಗ ಒಲೆಯ ಮೇಲೆ ಪಾತ್ರೆ ಇಟ್ಟು ಅದರಲ್ಲಿ ಹುಣಸೆ-ಟೊಮೆಟೊ ರಸವನ್ನು ಸುರಿಯಿರಿ, ರುಚಿಗೆ ತಕ್ಕಷ್ಟು ಉಪ್ಪು ಮೊದಲೇ ತಯಾರಿಸಿದ ಮಸಾಲಾ ಪುಡಿಯನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಕುದಿಸಿ. ಹಸಿ ವಾಸನೆ ಹೋಗುವವರೆಗೆ ಕುದಿಸಿದ ನಂತರ ಅದಕ್ಕೆ ಹಿಸುಕಿದ ಬೇಳೆ ಮಿಶ್ರಣವನ್ನು ಸೇರಿಸಿ. ಇದು ಕುದಿಯಲು ಆರಂಭಿಸಿದಾಗ ಒಂದು ಸಣ್ಣ ತುಂಡು ಬೆಲ್ಲವನ್ನು ಸೇರಿಸಿ. ಕೊನೆಯಲ್ಲಿ ಇದಕ್ಕೊಂದು ಒಗ್ಗರಣೆ ಹಾಕಿ.
ಸಣ್ಣ ಬಾಣಲೆಯಲ್ಲಿ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವು ಎಲ್ಲವನ್ನೂ ಹುರಿದು ರಸದಲ್ಲಿ ಬೆರೆಸಿ. ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ಮೈಸೂರು ರಸಂ ಸಿದ್ದವಾಗುತ್ತೆ.



Click it and Unblock the Notifications