Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲೇ ರುಚಿ ರುಚಿಯಾದ ಮೈಸೂರು ಪಾಕ್ ಮಾಡಿ..! ಇಲ್ಲಿದೆ ಪಾಕವಿಧಾನ
ಮೈಸೂರು ಪಾಕ್, ಪ್ರಸಿದ್ಧ ಮತ್ತು ರುಚಿಕರವಾದ ಭಾರತೀಯ ಸಿಹಿತಿಂಡಿ, ಹೆಚ್ಚು ಕಡಿಮೆ ಇಡೀ ದಕ್ಷಿಣ ಭಾರತದಲ್ಲಿ ಈ ಸಿಹಿ ತಿಂಡಿಗೆ ಮಾರುಹೋಗದವರಿಲ್ಲ. ಇತ್ತೀಚಿಗೆ ಟೇಸ್ಟ್ ಅಟ್ಲಾಸ್ ಇದನ್ನು ವಿಶ್ವದ ಅತ್ಯುತ್ತಮ ಸಿಹಿತಿಂಡಿಗಳಲ್ಲಿ ಒಂದು ಎಂದು ಹೆಸರಿಸಿದೆ. ಇದು ಕನ್ನಡಿಗರಿಗೆ ಅಷ್ಟೇ ಅಲ್ಲ ಭಾರತೀಯರಿಗೂ ಹೆಮ್ಮೆಯ ವಿಷಯವೆ.
ಮೈಸೂರು ಪಾಕ್ ಈ ಪಟ್ಟಿಯಲ್ಲಿ 14 ನೇ ಅತ್ಯುತ್ತಮ ಬೀದಿ ಆಹಾರವಾಗಿ ಸ್ಥಾನ ಪಡೆದಿದೆ ಮತ್ತು ಫಾಲೂಡಾ ಮತ್ತು ಕುಲ್ಫಿ ಫಲೂಡಾ ಪಟ್ಟಿಯಲ್ಲಿರುವ ಇತರ ಭಾರತೀಯ ಸಿಹಿತಿಂಡಿಗಳಾಗಿವೆ.
ಈ ರುಚಿಕರವಾದ ಸಿಹಿಭಕ್ಷ್ಯವು ಕನ್ನಡಿಗರಿಗೆ ಮಾತ್ರವಲ್ಲದೆ ದಕ್ಷಿಣ ಭಾರತದಾದ್ಯಂತ ಪ್ರಿಯವಾಗಿದೆ. ಇದರ ಸರಳವಾದ ಆದರೆ ಶ್ರೀಮಂತ ರುಚಿಯನ್ನು ಕೇವಲ ಮೂರು ಪದಾರ್ಥಗಳಿಂದ ರಚಿಸಲಾಗಿದೆ: ಸಕ್ಕರೆ, ತುಪ್ಪ ಮತ್ತು ಬೇಳೆ ಹಿಟ್ಟು. ಮೈಸೂರು ಪಾಕ್‌ನ ಕೃಷ್ಣ ರಾಜ ಒಡೆಯರ್ IVರ ಆಳ್ವಿಕೆಯಲ್ಲಿ ಆರಂಭವಾಯಿತು ಎಂಬ ಮಾತಿದೆ. ಇದನ್ನು ಮೊಟ್ಟ ಮೊದಲ ಬಾರಿಗೆ ಕಾಕಾಸುರ ಮಾದಪ್ಪ ಎಂಬುವರು ಅರಮನೆಯಲ್ಲಿ ತಯಾರಿಸಿ ರಾಜರಿಗೆ ನೀಡಿದ್ದರು ಎಂಬ ಉಲ್ಲೇಖ ನೋಡಬಹುದು.

ಹಾಗಾದರೆ ನಾವಿಂದು ಈ ರುಚಿಕರ ಮೈಸೂರು ಮಾಕ್ ಅನ್ನು ಮನೆಯಲ್ಲೇ ಮಾಡುವುದು ಹೇಗೆ?, ಮೈಸೂರು ಪಾಕ್ ಮಾಡಲು ಏನೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನೋಡೋಣ.
ಬೇಕಾಗುವ ಪದಾರ್ಥಗಳು
1 ಲೋಟ ಜರಡಿ ಹಿಡಿದ ಕಡಲೇಹಿಟ್ಟು
2 ಲೋಟ ಸಕ್ಕರೆ
3 ಲೋಟ ತುಪ್ಪ
ಚಿಟಿಕೆ ಅಡಿಗೆ ಸೋಡ
ಒಂದೂವರೆ ಲೋಟ ನೀರು
ಪಾತ್ರೆಯಲ್ಲಿ ನೀರಿಗೆ ಸಕ್ಕರೆ ಸೇರಿಸಿ, ಒಂದು ಹರಳೂ ಉಳಿಯದಂತೆ ಕರಗುವವರೆಗೂ ಕಾಯಿಸಿ. ಸಕ್ಕರೆ ದ್ರಾವಣದ ಪಾತ್ರೆಯನ್ನು ಒಲೆ ಮೇಲಿಟ್ಟು ಕಾಯಿಸಿ. ಒಲೆಯ ಉರಿ ಕಡಿಮೆಯಿರಲಿ. ಪಾತ್ರೆಯಲ್ಲಿನ ದ್ರಾವಣವನ್ನು ಸಣ್ಣ ಚಮಚೆಯಿಂದ ಹದನಾಗಿ ಕಲಕುತ್ತಾ ಹೋಗಿ. ದ್ರಾವಣ ಸುಮಾರಾಗಿ ಲೋಳೆಯಾಗಬೇಕು. ಎರಡು ಬೆರಳುಗಳ ನಡುವೆ ದ್ರಾವಣ ಹಾಕಿ, ಸೇರಿಸಿದ ಬೆರಳುಗಳನ್ನು ಬೇರೆ ಬೇರೆ ಮಾಡಿದರೆ ದ್ರಾವಣದ ನೂಲಿನಾಕಾರ ಬಂದರೆ ದ್ರಾವಣ ಹದವಾಗಿದೆ ಎಂದರ್ಥ. ಸಿದ್ಧವಾದ ಪಾಕವನ್ನು ಒಲೆ ಮೇಲಿಂದ ಕೆಳಗಿಳಿಸಿ.
ಮತ್ತೊಂದು ನಾನ್‌ಸ್ಟಿಕ್ ಪ್ಯಾನ್ ತೆಗೆದುಕೊಳ್ಳಿ (ಸಾದಾ ಬಾಣಲೆಯಾದರೂ ಆದೀತು). ಅದರಲ್ಲಿ 3-4 ಚಮಚ ತುಪ್ಪ ಹಾಕಿ ಕಾಯಿಸಿ, ಕರಗಿಸಿ. ಕಾದ ತುಪ್ಪಕ್ಕೆ 3-4 ಚಮಚ ಕಡಲೇ ಹಿಟ್ಟು ಸೇರಿಸಿ, ಅದೇ ಅಳತೆ (3-4 ಚಮಚ) ಯ ಪಾಕ ಹಾಕಿ ಹದವಾಗಿ ಕಾಯಿಸಿ. ಮಿಶ್ರಣವನ್ನು ಚಮಚದಿಂದ ಕಲಕುವುದನ್ನು ಮರೆಯಬೇಡಿ. ಮೂರ್ನಾಲ್ಕು ನಿಮಿಷದ ನಂತರ ಮತ್ತೆ ಅದೇ ಕ್ರಿಯೆಯನ್ನು ಮುಂದುವರೆಸಿ (ಅಷ್ಟೇ ಪ್ರಮಾಣ). ಈ ವೇಳೆ ಚಿಟಿಕೆಯಷ್ಟು ಅಡಿಗೆ ಸೋಡ ಬೆರೆಸಿ, ತುಪ್ಪ ಹಾಗೂ ಪಾಕ ಪೂರ್ತಿ ಖಾಲಿಯಾಗುವವರೆಗೆ ಬೆರೆಸುವಿಕೆ ಮುಂದುವರೆಸಿ. ಒಂದು ಹಂತದಲ್ಲಿ ಮಿಶ್ರಣ ಲಘು ಹಳದಿ ಬಣ್ಣಕ್ಕೆ ತಿರುಗುತ್ತದೆ. ಬಾಣಲೆಯ ಅಂಚಿನಲ್ಲಿ ಮಿಶ್ರಣ ಘನೀರ್ಭವಿಸಿ, ಪ್ಯಾನಿನ ಸಂಬಂಧ ಕಡಿದುಕೊಳ್ಳುತ್ತಿರುವುದು ಕಾಣುತ್ತದೆ. ತಕ್ಷಣ ಒಲೆಯ ಉರಿ ನಂದಿಸಿ.

ಅಗಲವಾದೊಂದು ತಟ್ಟೆಗೆ ತುಪ್ಪ ಸವರಿ, ಮಿಶ್ರಣವನ್ನು ಅದಕ್ಕೆ ಸುರಿಯಿರಿ. 15 ನಿಮಿಷ ಬಿಟ್ಟು, ಚಾಕುವಿನಿಂದ ನಿಮ್ಮ ಇಚ್ಛಾನುಸಾರ ಗಾತ್ರಕ್ಕೆ ಕತ್ತರಿಸಿ. ತಣ್ಣಗಾಗುವವರೆಗೆ ಸುಮ್ಮನಾಗಿ. ನಿಮ್ಮ ಮುಂದೆ ಈಗ ಮೈಸೂರು ಪಾಕು ಸಿದ್ಧ. ಇದನ್ನು ಮುಚ್ಚಳವಿರುವ ಡಬ್ಬದಲ್ಲಿ ಸಂಗ್ರಹಿಸಿಟ್ಟು ಸುಮಾರು 15ರಿಂದ 20 ದಿನಗಳವರೆಗೂ ಇಡಬಹುದು.



Click it and Unblock the Notifications