Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅದ್ಭುತ ರುಚಿಯ ಮಟನ್ ಫ್ರೈ ಮಾಡೋದು ಹೇಗೆ? ಹೆಚ್ಚು ಮಸಾಲೆ ಬಳಸದೆ ಮಾಡಿ.!
ಮಾಂಸಹಾರ ಪ್ರಿಯರು ಹಲವು ರೀತಿಯ ನಾನ್ ವೆಜ್ ಖಾದ್ಯ ಸವಿಯಲು ಇಷ್ಟಪಡುತ್ತಾರೆ. ಅದರಲ್ಲೂ ಚಿಕನ್ ಹಾಗೂ ಮಟನ್‌ನಿಂದ ಮಾಡಿದ ಎಲ್ಲಾ ಖಾದ್ಯಗಳು ಅವರ ಬಾಯಲ್ಲಿ ನೀರು ತರಿಸುತ್ತವೆ. ಅದರಲ್ಲೂ ಮಟನ್ ಖಾದ್ಯ ಅಂದ್ರೆ ನಾನ್ ವೆಜ್ ಪ್ರಿಯರಿಗೆ ಬಹಳ ಇಷ್ಟವಾಗುತ್ತೆ. ಮಟನ್‌ನಿಂದ ಮಾಡುವ ಎಲ್ಲಾ ಖಾದ್ಯವೂ ಕೂಡ ಅದ್ಭುತ.
ಅದರಲ್ಲೂ ಮಟನ್ ಬಿರಿಯಾನಿ, ಮಟನ್ ಕರಿ, ಮಟನ್ ಗ್ರೇವಿ, ಮಟನ್ ಮಸಾಲ, ಮಟನ್ ಡ್ರೈ ಮಸಾಲೆ ಹೀಗೆ ಬಾಯಲ್ಲಿ ನೀರು ತರಿಸುವಂತಹ ಹಲವು ಬಗೆಯ ಖಾದ್ಯ ಮಾಡಿ ಸವಿಯುವುದು ಸಹ ಕಾಮನ್, ನಾನ್ ವೆಜ್ ಹೋಟಲ್‌ಗಳಲ್ಲಿ ಹಾಗೆ ರೆಸ್ಟೋರೆಂಡ್, ಢಾಬಾಗಳಲ್ಲಿ ನೀಡುವಂತಹ ರುಚಿ ರುಚಿಯ ಮಟನ್ ಖಾದ್ಯ ನೆನೆದರೆ ನಿಮ್ಮ ಬಾಯಲ್ಲಿ ನೀರು ಬರಬಹುದು.

ಇನ್ನು ಮಟನ್‌ನಿಂದ ಮಾಡಿ ಸವಿಯಬಹುದಾದ ಹಲವು ಖಾದ್ಯಗಳಲ್ಲಿ ಮಟನ್ ಫ್ರೈ ಬಹಳ ರುಚಿ ನೀಡುತ್ತೆ. ಊಟದ ಜೊತೆಗೆ ಮಟನ್ ಫ್ರೈ ಇದ್ದರೆ ಆ ಊಟದ ರುಚಿಯೇ ಬೇರೆ. ಹಾಗೆ ಮಟನ್ ಫ್ರೈ ಮಾಡೋದು ಕೂಡ ಬಹಳ ಸುಲಭ. ಮಟನ್ ರುಚಿಯನ್ನು ಸವಿಯಬೇಕಾದರೆ ಅದನ್ನು ಕಾಳು ಮೆಣಸಿನ ಪುಡಿಯ ಸುವಾಸನೆಯೊಂದಿಗೆ ಫ್ರೈ ಮಾಡಿರಬೇಕು.
ಖಾರ ಖಾರವಾದ ಈ ಮಟನ್ ಫ್ರೈ. ಬಹಳ ರುಚಿ ನೀಡಲಿದೆ. ಹೀಗಾಗಿ ಈ ಮಟನ್ ಫ್ರೈ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಮಟನ್ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಟನ್ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು
- ಮಟನ್
- ಸೋಂಪು ಕಾಳು
- ಹಸಿ ಮೆಣಸು
- ಈರುಳ್ಳಿ
- ಟೊಮೆಟೋ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಖಾರದ ಪುಡಿ
- ಕಾಳು ಮೆಣಸಿನ ಪುಡಿ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮಟನ್ ಫ್ರೈ ಮಾಡುವ ವಿಧಾನವೇನು?
ಮೊದಲು ಮಟನ್ ಅನ್ನು ಕುಕ್ಕರ್‌ನಲ್ಲಿ ಹಾಕಿ ಬೇಯಸಿಕೊಳ್ಳಬೇಕು. 4ರಿಂದ 5 ಸೀಟಿ ಹೊಡೆಸಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಸೋಂಪು ಕಾಳು, ಒಣ ಮೆಣಸು, ಸಣ್ಣದಾಗಿ ಹೆಚ್ಚಿರುವ ಈರುಳ್ಳಿಯನ್ನು ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಒಂದೆರಡು ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಟೊಮೆಟೋ ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಈಗ ಬೇಯಿಸಿಕೊಂಡಿರುವ ಮಟನ್ ಮಾಂಸವನ್ನು ಇದಕ್ಕೆ ಹಾಕಿಕೊಳ್ಳಿ. ನೀವು ಬೇಯಿಸುವಾಗಲೇ ಉಪ್ಪು ಕೂಡ ಹಾಕಿಕೊಂಡಿರಬೇಕು. ಈಗ ಮಟನ್ ಜೊತೆಗೆ ಬೇಯಿಸಿದ್ದ ನೀರು ಕೂಡ ಹಾಕಿಕೊಂಡಿರಿ. ಈಗ ಕಾಳು ಮೆಣಸಿನ ಪುಡಿ, ಖಾರದ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿ 2 ನಿಮಿಷ ಬಿಡಿ. ನಂತರ ಇದಕ್ಕೆ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿಕೊಂಡು ರೋಸ್ಟ್ ಫ್ರೈ ಮಾಡಿಕೊಳ್ಳಿ.
ನೀವು ಮಟನ್ ಬೇಯಿಸುವಾಗ ಉಪ್ಪು ಹಾಕಿರುವುದರಿಂದ ರುಚಿ ನೋಡಿಕೊಂಡು ಈ ಮಟನ್ ಗೆ ಉಪ್ಪು ಹಾಕಿ ಹಾಗೆ ಕೊನೆಯಲ್ಲಿ ಖಾರ ಬೇಕಿದ್ದರೆ ಹಾಕಿಕೊಂಡಿ ಮಿಕ್ಸ್ ಮಾಡಿ ನೀರು ಸ್ವಲ್ಪ ಆವಿಯಾಗುವಂತೆ ಫ್ರೈ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮಟನ್ ಫ್ರೈ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ಮಟನ್ ಖಾದ್ಯ ಮಾಡಿ ಸವಿದು ನೋಡಿ.



Click it and Unblock the Notifications