Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ನೀರು ತರಿಸುವ ಮಶ್ರೂಮ್ ಚಿಲ್ಲಿ: ರೆಸ್ಟೋರೆಂಟ್ ರುಚಿಯ ಖಾದ್ಯ!
ಊಟ ಹಾಗೂ ತಿಂಡಿಯೊಂದಿಗೆ ಯಾವುದಾದರು ಖಾದ್ಯವನ್ನು ಸವಿಯಲು ಇಷ್ಟಪಡುವ ಮಂದಿ ನೀವಾಗಿದ್ದರೆ ಅದ್ರಲ್ಲೂ ಸಸ್ಯಹಾರ ಊಟ ತಿಂಡಿಗಳು ಸವಿಯೋದು ನಿಮ್ಮ ಇಷ್ಟದ ಖಾದ್ಯ ಆಗಿರಬಹುದು. ವೆಜ್‌ನಲ್ಲಿ ಹೆಚ್ಚಾಗಿ ಮಶ್ರೂಮ್‌ನಿಂದ ಮಾಡುವಂತಹ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮಶ್ರೂಮ್‌ನಿಂದ ಹಲವು ಖಾದ್ಯ ಮಾಡಿ ಸವಿಯೋದು ಎಲ್ಲರಿಗೂ ತಿಳಿದಿರುವ ವಿಚಾರ.
ಇನ್ನು ಮಶ್ರೂಮ್ ಬಳಸಿ ಮಾಡುವ ಗ್ರೇವಿ, ಬಿರಿಯಾನಿಯನ್ನು ನೀವು ಸಹ ಸವಿದಿರುತ್ತೀರಿ, ನಾವಿಂದು ಮಶ್ರೂಮ್‌ನಲ್ಲಿ ಬಳಸಿ ಮಾಡುವ ಮಶ್ರೂಮ್ ಚಿಲ್ಲಿಯ ಕುರಿತಾಗಿ ತಿಳಿಯೋಣ. ಮಶ್ರೂಮ್ ಚಿಲ್ಲಿ ಒಮ್ಮೆ ಸವಿದರೆ ಊಟದೊಂದಿಗೆ ಹಾಗೆ ತಿಂಡಿಗೆ ನೀವು ಇದನ್ನೇ ಬಳಸೋದು ಖಚಿತ. ಖಾರ ಖಾರವಾದ ಮಶ್ರೂಮ್ ಚಿಲ್ಲಿ ಮಾಡಿ ನೋಡೋಣ.

ಈ ಮಶ್ರೂಮ್ ಚಿಲ್ಲಿ ಅಂದ್ರೆ ಎಲ್ಲಾ ತಿಂಡಿಯೊಂದಿಗೂ ಹಾಗೆ ಊಟದೊಂದಿಗೂ ಸವಿಯಬಹುದು. ಚಪಾತಿ, ರೊಟ್ಟಿ, ಅನ್ನ ಸೇರಿ ಎಲ್ಲಾ ಖಾದ್ಯದೊಂದಿಗೆ ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ರುಚಿ ರುಚಿಯಾಗಿ ಈ ಖಾದ್ಯ ಮಾಡಿದ್ರೆ ಮನೆ ಮಂದಿ ಎಲ್ಲರು ಕುಳಿತು ಸವಿಯಲು ಇಷ್ಟಪಡುತ್ತಾರೆ.
ಹಾಗಾದ್ರೆ ನಾವಿಂದು ಮನೆಯಲ್ಲಿ ಮಶ್ರೂಮ್‌ನಿಂದ ಸುಲಭವಾಗಿ ಚಿಲ್ಲಿ ಮಾಡುವ ವಿಧಾನವೇನು? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮಶ್ರೂಮ್ ಚಿಲ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮಶ್ರೂಮ್
- ಹಸಿ ಮೆಣಸು
- ಕಾಳು ಮೆಣಸಿನ ಪುಡಿ
- ಕ್ಯಾಪ್ಸಿಕಂ
- ಈರುಳ್ಳಿ
- ಕಾರ್ನ್ ಫ್ಲೋರ್
- ಮೈದಾ ಹಿಟ್ಟು
- ಸಕ್ಕರೆ
- ಸೋಯಾ ಸಾಸ್
- ವಿನೆಗರ್
- ಮೆಣಸಿನಕಾಯಿ ಸಾಸ್
- ಟೊಮೆಟೋ ಸಾಸ್
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮಶ್ರೂಮ್ ಚಿಲ್ಲಿ ಮಾಡುವ ವಿಧಾನವೇನು?
ಮೊದಲು ಮಶ್ರೂಮ್ ಸಿಪ್ಪೆ ತೆಗೆದು 2 ಭಾಗ ಮಾಡಿಕೊಂಡು ನೀರಿನಲ್ಲಿ ಹಾಕಿ. ಬಿಸಿ ನೀರಿನಲ್ಲಿ ಹಾಕಿ ತೊಳೆದುಕೊಳ್ಳಿ. ಈಗ ಒಂದು ಪಾತ್ರೆಗೆ ಹಾಕಿ ಕುದಿಯುವ ನೀರಿನಲ್ಲಿ 1 ನಿಮಿಷ ಬಿಡಬೇಕು. ನಂತರ ತೆಗೆದಿಟ್ಟುಕೊಳ್ಳಿ. ಈಗ ಒಂದು ಬಾಣಲೆಗೆ ಮಶ್ರೂಮ್ ಹಾಕಿ ಉಪ್ಪು ಹಾಕಿ, ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಕಾಲು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಚೆನ್ನಾಗಿ ಅಂಟಿಕೊಳ್ಳಬೇಕು.
ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಸ್ವಲ್ಪ ಮಶ್ರೂಮ್ ಅನ್ನು ಕರಿದುಕೊಳ್ಳಬೇಕು. ಹೀಗಾಗಿ ಎಣ್ಣೆ ಹೆಚ್ಚು ಬಳಸಿ. ಈ ಎಣ್ಣೆ ಹಾಕಿದ ಬಳಿಕ ಹಿಟ್ಟಿನಲ್ಲಿರುವ ಮಶ್ರೂಮ್ ಅನ್ನು ಸ್ವಲ್ಪ ಸ್ವಲ್ಪವೇ ಎಣ್ಣೆಗೆ ಬಿಟ್ಟು ಕರಿದುಕೊಳ್ಳಬೇಕು. ಇದು ಕ್ರಿಸ್ಪಿಯಾಗಿ ಕರಿಯಬೇಕು. ನಂತರ ತೆಗೆದು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಅದಕ್ಕೆ ಶುಂಠಿ, ಹಸಿ ಮೆಣಸು, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಹಾಗೆ ಈರುಳ್ಳಿ ಕೂಡ ಹಾಕಿ 1 ನಿಮಿಷ ಫ್ರೈ ಮಾಡಿ. ಈಗ ಅರ್ಧ ಸ್ಪೂನ್ ಸಕ್ಕರೆ, ಸೋಯಾ ಸಾಸ್, ವೆನಿಗರ್, ಚಿಲ್ಲಿ ಸಾಸ್, ಟೊಮೆಟೊ ಸಾಸ್ ಎಲ್ಲವೂ ಒಂದೊಂದು ಸ್ಪೂನ್ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಅರ್ಧ ಕಪ್ ನೀರು ಹಾಕಿ ಉಪ್ಪು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರದಲ್ಲಿ ಒಂದು ಚಿಕ್ಕ ಬೌಲ್‌ಗೆ 1 ಸ್ಪೂನ್ ಕಾರ್ನ್ ಫ್ಲೋರ್ ಹಾಕಿ ಅದಕ್ಕೆ ನೀರು ಹಾಕಿ ತೆಳುವಾಗಿ ಮಾಡಿ ಅದನ್ನು ಈ ಬಾಣಲೆಗೆ ಹಾಕಿಕೊಳ್ಳಿ. ಹಾಗೆ ಕುದಿಬರಲು ಬಿಡಿ. 3 ನಿಮಿಷ ಕುದಿಬಂದ ಬಳಿಕ ಇದಕ್ಕೆ ಹುರಿದುಕೊಂಡಿದ್ದ ಮಶ್ರೂಮ್ ಹಾಕಿಕೊಂಡು ಮಿಶ್ರಣ ಮಾಡಿ. ಕೊನೆಯಲ್ಲಿ ಈರುಳ್ಳಿ, ಕ್ಯಾಪ್ಸಿಕಂ ಹಾಗೆ ಟೊಮೆಟೋ ಹಾಕಿ ಒಮ್ಮೆ ಮಿಕ್ಸ್ ಮಾಡಿಕೊಂಡು 2 ನಿಮಿಷ ಫ್ರೈ ಆಗಲು ಬಿಟ್ಟು ಇಳಿಸಕೊಂಡರೆ ನಿಮ್ಮ ಮುಂದೆ ಮಶ್ರೂಮ್ ಚಿಲ್ಲಿ ರೆಡಿ.



Click it and Unblock the Notifications