Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೂಕ ಇಳಿಸಲು, ಜೀರ್ಣಕ್ರಿಯೆ ಸುಧಾರಿಸಲು ಈ ನುಗ್ಗೆ ಸೊಪ್ಪಿನ ಪಲ್ಯ ಬೆಸ್ಟ್!
ನುಗ್ಗೆಕಾಯಿಯ ಸಾಂಬಾರ್ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದೇ ರೀತಿ ಊಟದೊಂದಿಗೆ ಹಾಗೆ ಚಪಾತಿ, ರೊಟ್ಟಿ, ದೋಸೆಯೊಂದಿಗೆ ಸವಿಯಲು ಪಲ್ಯ, ಚಟ್ನಿ ಮಾಡುವುದು ಸಾಮಾನ್ಯ. ಹೀಗೆ ನುಗ್ಗೆ ಸೊಪ್ಪಿನ ಪಲ್ಯ ಕೂಡ ಬಹಳ ರುಚಿಕರ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯಗಳಲ್ಲಿ ಒಂದು. ಯಾವುದೇ ತಿಂಡಿಯೊಂದಿಗೆ ಹಾಗೆ ಊಟದೊಂದಿಗೆ ಕೂಡ ಇದನ್ನು ನೀವು ಸವಿಯಬಹುದು.
ಹಾಗೆ ಈ ನುಗ್ಗೆ ಸೊಪ್ಪಿನ ಆರೋಗ್ಯಕರ ಗುಣಗಳ ಕಾರಣದಿಂದ ಯಾವುದೇ ಖಾದ್ಯ ಸವಿದರು ನಿಮ್ಮ ದೇಹಕ್ಕೆ ಅದು ಉತ್ತಮವಾಗಿರಲಿದೆ. ಅದರಲ್ಲು ನುಗ್ಗೆ ಸೊಪ್ಪು ಬಹಳ ಹಿಂದಿನ ಕಾಲದಿಂದಲೂ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ - ಆಕ್ಸಿಡೆಂಟ್ ಗಳು ವಿಟಮಿನ್ ಸಿ, ಜಿಂಕ್ ಸೇರಿದಂತೆ ಹಲವು ಪೋಷಕಾಂಶಗಳಿವೆ.
ಹಾಗೆ ನುಗ್ಗೆ ಸೊಪ್ಪಿನಲ್ಲಿನ ಫೈಬರ್ ಅಂಶವು ನಿಮ್ಮ ಜೀರ್ಣಕ್ರಿಯೆ ಹಾಗೆ ತೂಕ ಇಳಿಸಿಕೊಳ್ಳಲು ಸಹ ನೆರವಾಗಲಿದೆ. ಹಾಗೆ ಈ ನುಗ್ಗೆ ಸೊಪ್ಪು ಬಹಳ ರುಚಿಕರವಾಗಿ ಮಾಡಬಹುದು. ಸುಲಭವಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವ ಈ ಪಲ್ಯವು ಎಲ್ಲರ ಆರೋಗ್ಯಕ್ಕೆ ಬಹಳ ಉತ್ತಮ ತಿನಿಸಾಗಲಿದೆ. ಹಾಗಾದ್ರೆ ಈ ನುಗ್ಗೆ ಸೊಪ್ಪಿನ ಪಲ್ಯ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪಿನ ಮಸಾಲ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು ಬೇಕು?
- ನುಗ್ಗೆ ಸೊಪ್ಪು
- ಜೀರಿಗೆ
- ಸಾಸಿವೆ
- ಉಪ್ಪು
- ಎಣ್ಣೆ
- ಬೆಳ್ಳುಳ್ಳಿ
- ಉದ್ದಿನ ಬೇಳೆ
- ಈರುಳ್ಳಿ
- ಕರಿಬೇವು
- ಅರಶಿಣ
ನುಗ್ಗೆ ಸೊಪ್ಪಿನ ಮಸಾಲ ಪಲ್ಯ ಮಾಡುವ ವಿಧಾನವೇನು?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಶೇಂಗಾ ಹಾಕಿ ಹುರಿದುಕೊಳ್ಳಿ. ನಂತರ ತೆಗೆದು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದನ್ನ ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಅದಕ್ಕೆ ಒಣ ಮೆಣಸು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಇದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಾಕಿ ಬಿಸಿ ಮಾಡಿ. ಅನಂತರ ಬೆಳ್ಳುಳ್ಳಿ ಜಜ್ಜಿ ಹಾಕಿಕೊಳ್ಳಿ.
ಈಗ ಹೆಚ್ಚಿಕೊಂಡ ಈರುಳ್ಳಿ, ಕರಿಬೇವು ಹಾಕಿ 1 ನಿಮಿಷ ಫ್ರೈ ಮಾಡಿ. ಅನಂತರ ಕತ್ತರಿಸಿಕೊಂಡು ತೊಳೆದು ಇಟ್ಟಿರುವ ನುಗ್ಗೆ ಸೊಪ್ಪನ್ನು ಇದಕ್ಕೆ ಹಾಕಿ, ಸಣ್ಣದಾಗಿ ಹೆಚ್ಚಿಕೊಳ್ಳುವ ಅಗತ್ಯವಿಲ್ಲ. ಹಾಗೆ ಇಡಿ ಎಲೆಗಳಿರುವಂತೆಯೇ ಇದನ್ನು ಹಾಕಿಕೊಳ್ಳಿ. ಕಾಲು ಚಮಚ ಅರಶಿಣ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡುತ್ತಾ ಇರಿ. ಇದಕ್ಕೆ ಕಾಯಿ ತುರಿ ಹಾಕಿ ಮಿಕ್ಸ್ ಮಾಡಿ.
1 ನಿಮಿಷ ಬಿಟ್ಟು ಮಿಕ್ಸಿಯಲ್ಲಿ ರುಬ್ಬಿದ್ದ ಕಡಲೆ ಕಾಳಿನ ಪುಡಿಗಳನ್ನು ಸಹ ಇದಕ್ಕೆ ಹಾಕಿಕೊಂಡು ಮಿಶ್ರಣ ಮಾಡಿ. ನೀರು ಹಾಕಿಕೊಳ್ಳದೆ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ 4ರಿಂದ 5 ನಿಮಿಷ ಬೇಯಿಸಿಕೊಳ್ಳಿ. ತಳ ಹಿಡಿಯುತ್ತಿದ್ದರೆ 4 ಸ್ಪೂನ್ ನೀರು ಹಾಕಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ನುಗ್ಗೆ ಸೊಪ್ಪಿನ ಪಲ್ಯ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
