Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಂಥಾ ರುಚಿ ಹೆಸರು ಕಾಳಿನ ಪಾಯಸ: ಇಲ್ಲಿದೆ ಸುಲಭದ ರೆಸಿಪಿ!
ಎಲ್ಲರಿಗೂ ಪಾಯಸ ಸವಿಯುವುದು ಅಂದ್ರೆ ಬಹಳ ಇಷ್ಟ. ಎಲ್ಲರೂ ಶುಭ ಸಮಾರಂಭದಲ್ಲಿ, ಶುಭ ದಿನದಂದು ಈ ಪಾಯಸ ಇಲ್ಲದಿದ್ದರೆ ಅದು ಶುಭದಿನ ಎನಿಸುವುದೇ ಇಲ್ಲ. ಇನ್ನು ಈ ಪಾಯಸದಲ್ಲಿ ಹತ್ತಾರು ವಿಧಗಳಿವೆ. ಪಾಯಸವನ್ನು ಅತ್ಯಂತ ಸುಲಭವಾಗಿ ಮಾಡುವುದರಿಂದ ಹಿಡಿದು ದುಬಾರಿ ಪಾಯಸ ಕೂಡ ಮಾಡಬಹುದು. ಆದ್ರೆ ಕೆಲವೊಂದು ವಿಶೇಷ ಪಾಯಸಗಳು ಈಗ ಫೇಮಸ್ ಆಗುತ್ತಿವೆ.
ಅದರಲ್ಲೂ ನಾವಿಂದು ಸುಲಭವಾಗಿ ರುಚಿ ರುಚಿಯ ಹೆಸರು ಕಾಳಿನ ಪಾಯಸ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಸುಲಭವಾಗಿ ಹಾಗೆ ಅತ್ಯಂತ ರುಚಿಕರವಾದ ಈ ಪಾಯಸವನ್ನು ಎಲ್ಲರು ಸವಿಯಲು ಮುಂದಾಗುತ್ತಾರೆ. ಶುಭ ಸಮಾರಂಭದಲ್ಲಂತು ಇದು ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ಈ ಪಾಯಸ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.

ಹೆಸರು ಕಾಳಿನ ಪಾಯಸ ಮಾಡುವುದು ಹೇಗೆ? ಈ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಕಾಳಿನ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಹಸರು ಕಾಳು
ರವೆ- 1/2 ಕಪ್
ಬೆಲ್ಲ- 1 ಕಪ್
ಏಲಕ್ಕಿ ಪುಡಿ
ಗೋಡಂಬಿ ಮತ್ತು ಒಣದ್ರಾಕ್ಷಿ
ತೆಂಗಿನಕಾಯಿ ಹಾಲು
ತುಪ್ಪ
ನೀರು
ಉಪ್ಪು
ಹೆಸರು ಕಾಳಿನ ಪಾಯಸ ಮಾಡುವ ವಿಧಾನವೇನು?
ಮೊದಲು ಹೆಸರು ಕಾಳನ್ನು ಎರಡರಿಂದ ಮೂರು ಬಾರಿ ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ 2 ಸ್ಪೂನ್ ಚಮಚ ಹಾಕಿ ಬಳಿಕ ತೊಳೆದಿಟ್ಟ ಹೆಸರು ಕಾಳನ್ನು ಹಾಕಿಕೊಂಡು ತುಪ್ಪದಲ್ಲಿ ಬೇಯಿಸಿಕೊಳ್ಳಿ. 2ರಿಂದ 3 ನಿಮಿಷದ ಬಳಿಕ ಇದಕ್ಕೆ ನೀರು ಹಾಕಿಕೊಳ್ಳಬೇಕು. ನೀವು ಯಾವ ಅಳತೆಯಲ್ಲಿ ಹೆಸರು ಕಾಳು ತೆಗೆದುಕೊಂಡಿದ್ದೀರೋ ಅದೇ ಅಳತೆಯ ಮೂರರಷ್ಟು ನೀರು ಹಾಕಿಕೊಳ್ಳಬೇಕು.
ನಂತರ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಯಲು ಬಿಡಿ. ಈಗ ಇನ್ನೊಂದು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ರವೆ ಹಾಕಿಕೊಂಡು ಹುರಿದುಕೊಳ್ಳಬೇಕು. ರವೆಯಿಂದ ಘಮ ಘಮ ಎನ್ನುವಂತಹ ಸುವಾಸನೆ ಬರಬೇಕು. ಹೀಗಾಗಿ ತುಪ್ಪ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಒಲೆ ಆಫ್ ಮಾಡಿ ರವೆಯನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಕುಕ್ಕರ್ ಮುಚ್ಚ ತೆಗೆದು ಅದಕ್ಕೆ ಹುರಿದುಕೊಂಡ ರವೆಯನ್ನು ಹಾಕಿ ಮಿಕ್ಸ್ ಮಾಡಿ ಹಾಗೆ ಕಾಯಿ ಹಾಲು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಹಾಗೆ ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿದ ಬಳಿಕ ಬೆಲ್ಲದ ಪುಡಿ ಸಹ ಹಾಕಿಕೊಳ್ಳಿ. ಸಿಹಿ ಎಷ್ಟು ಬೇಕು ಎಂಬುದನ್ನು ನೋಡಿಕೊಂಡು ಹಾಕಿಕೊಳ್ಳಿ. ಈಗ ಕುದಿಬರಲು ಬಿಡಿ.
ಚೆನ್ನಾಗಿ ಕುದಿಬರುವಾಗ ಆಗಾಗ ಮಿಕ್ಸ್ ಮಾಡುತ್ತಾ ಇರಿ. 5 ನಿಮಿಷದ ಬಳಿಕ ಸಣ್ಣ ಉರಿಯಲ್ಲಿ ಇದನ್ನು ಇಟ್ಟು ಈಗ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಫ್ರೈ ಮಾಡಿ ಇದಕ್ಕೆ ಹಾಕಿಕೊಳ್ಳಿ. ಇಷ್ಟಾದರೆ ರುಚಿ ರುಚಿಯ ಹೆಸರು ಕಾಳಿನ ಪಾಯಸ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ನೀವು ಸಹ ಯಾವಾಗಲು ಇದನ್ನು ಮಾಡಲು ಮುಂದಾಗುತ್ತೀರಿ.
ಇದೇ ವಿಧಾನದಲ್ಲಿ ಹೆಸರು ಬೇಳೆಯ ಪಾಯಸ ಕೂಡ ಮಾಡಬಹುದು. ಅದು ಸಹ ಬಹಳ ರುಚಿಯಾಗಿರಲಿದೆ. ನೀವು ಸಹ ಒಮ್ಮೆ ಯಾವುದಾದರು ಒಂದು ಪಾಯಸವನ್ನು ಮಾಡಿ ನೋಡಿ. ಇದು ಶುಭ ಸಮಾರಂಭವನ್ನು ಮತ್ತಷ್ಟು ಶುಭವಾಗಿಸಲಿದೆ.



Click it and Unblock the Notifications