Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಣ್ಣೆಯಂತೆ ಕರಗುವ ಹೆಸರು ಬೇಳೆ ಸಿಹಿ ತಿಂಡಿ: ರುಚಿಯು ಅದ್ಭುತ, ಮಾಡೋದು ಸುಲಭ!
ಮನೆಯಲ್ಲಿ ನೀವು ಸ್ವೀಟ್ ಮಾಡಿ ಸವಿಯುವ ಆಸೆ ಇಟ್ಟುಕೊಂಡಿರುವ ಮಂದಿಯಾಗಿದ್ದರೆ, ಸಣ್ಣ ಪುಟ್ಟ ಸಿಹಿ ಯಾವಾಗಲು ಮಾಡಿರುತ್ತೀರಿ. ಸಮಯವಿದ್ದಾಗ, ಅತಿಥಿಗಳು ಬಂದಾಗ, ಶುಭ ದಿನಗಳಿದ್ದಾಗ ಹಾಗೆ ಮಕ್ಕಳಿಗೆ ಏನಾದರು ಮಾಡಿ ನೀಡಬೇಕು ಎಂಬ ಬಯಕೆ ಇದ್ದಾಗ ಸುಲಭದ ಸಿಹಿ ತಿಂಡಿಗಳು ನಿಮಗೆ ಯಾವಾಗಲು ನೆನಪಿಗೆ ಬರುತ್ತವೆ. ಈ ಸಮಯದಲ್ಲಿ ನಾವು ಕೇಸರಿಬಾತ್, ಬರ್ಫಿ, ಹಲ್ವಾದಂತಹ ಸಿಹಿಯನ್ನು ಮಾಡಿರುತ್ತೇವೆ.
ಹಾಗೆ ನಾವಿಂದು ವಿಶೇಷವಾಗಿ ಹಾಗೆ ಸುಲಭವಾಗಿ ಮನೆಯಲ್ಲಿ ಮಾಡಬಹುದಾದ ಕೇಸರಿಬಾತ್‌ಗಿಂತಲೂ ರುಚಿ ತರುವ ಸಿಹಿ ತಿಂಡಿ ಕುರಿತಾಗಿ ಹೇಳಲಿದ್ದೇವೆ. ಹೆಸರು ಬೇಳೆ ಬಳಸಿಕೊಂಡು ಮಾಡುವ ಈ ಸಿಹಿ ತಿಂಡಿಯು ನಿಮ್ಮ ಬಾಯಲ್ಲಿ ನೀರು ತರಿಸಲಿದೆ. ಹೆಸರು ಬೇಳೆಯನ್ನು ಹಲವು ಖಾದ್ಯಗಳ ಮಾಡಲು ನೀವು ಬಳಸಿರುತ್ತೀರಿ.

ಆದ್ರೆ ಈ ಹೆಸರು ಬೇಳೆಯನ್ನು ಬಳಸಿಕೊಂಡು ಕೇಸರಿಬಾತ್‌ನಂತೆ ಕಾಣುವ ಸಿಹಿ ತಿಂಡಿ ಮಾಡಿ ಸವಿಯಬಹುದು. ಈ ತಿಂಡಿಯನ್ನು ಒಮ್ಮೆ ನೀವು ಮಾಡಿ ಸವಿದರೆ ಮತ್ತೆ ಮತ್ತೆ ಮಾಡಿ ಸವಿಯೋದು ಖಚಿತ. ಅದ್ರಲ್ಲೂ ಸಂಜೆ ಸಮಯದಲ್ಲಿ ನೀವು ಏನಾದರು ಸವಿಯಲು ಮಾಡುವ ಆಭ್ಯಾಸ ಇಟ್ಟುಕೊಂಡಿದ್ದರೆ ಈ ಸಿಹಿ ತಿಂಡಿ ನಿಮಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.
ಹಾಗಾದ್ರೆ ಹೆಸರು ಬೇಳೆ ಸಿಹಿ ತಿಂಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಹೆಸರು ಬೇಳೆ ಸಿಹಿ ತಿಂಡಿ ಮಾಡಲು ಬೇಗಾಗುವ ಅಗತ್ಯ ವಸ್ತುಗಳಿ
- ಹೆಸರು ಬೇಳೆ
- ಗೋಡಂಬಿ
- ದ್ರಾಕ್ಷಿ
- ಬಾದಾಮಿ
- ಎಣ್ಣೆ
- ಬೆಲ್ಲ ಅಥವಾ ಸಕ್ಕರೆ
- ರವೆ
ಹೆಸರು ಬೇಳೆ ಸಿಹಿ ತಿಂಡಿ ಮಾಡುವ ವಿಧಾನವೇನು?
ಮೊದಲು ಒಂದು ಕುಕ್ಕರ್‌ಗೆ ಒಂದು ಕಪ್ ಹೆಸರು ಬೇಳೆ ಹಾಕಿ ತೊಳೆದು ಕೊಂಡು ನೀರು ಹಾಕಿಕೊಳ್ಳಿ. ಬೇಳೆಗೆ ಮೂರು ಕಪ್ ನೀರು ಹಾಕಿಕೊಂಡು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಬೆಲ್ಲ ಹಾಕಿಕೊಂಡು (4 ಮಧ್ಯಮ ಗಾತ್ರದ ಉಂಡೆ) ನೀರು ಹಾಕಿಕೊಂಡು ಕರಗಲು ಬಿಡಿ. ಈಗ ಬೇಳೆ ಬೆಂದಿದ್ದರೆ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿ. ಈಗ ಮತ್ತೊಂದು ಬಾಣಲೆ ಒಲೆ ಮೇಲೆ ಇಟ್ಟು 2ರಿಂದ3 ಸ್ಪೂನ್ ತುಪ್ಪ ಹಾಕಿ ಕರಗಲು ಬಿಡಿ. ಅದಕ್ಕೆ ನಿಮಗೆ ಬೇಕಾದ ಡ್ರೈ ಫ್ರೂಟ್ಸ್ ಹಾಕಿ (ಗೋಡಂಬಿ, ಬಾದಾಮಿ, ದ್ರಾಕ್ಷಿ) ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.
ಈಗ ಇದೇ ಬಾಣಲೆಗೆ ಅರ್ಧ ಕಪ್ ರವೆಯನ್ನು ಹಾಕಿಕೊಂಡು ಹುರಿದುಕೊಳ್ಳಬೇಕು. ಇದು ಬಣ್ಣ ಬದಲಾಗಿ ಘಮ ಘಮ ಎನ್ನಬೇಕು. ಈಗ 1 ಕಪ್ ನೀರು ಇದಕ್ಕೆ ಸೇರಿಸಿ ಮಿಕ್ಸ್ ಮಾಡಿ ಗಟ್ಟಿಯಾಗುವಂತೆ ಬೇಯಿಸಬೇಕು. ಸ್ವಲ್ಪ ಗಟ್ಟಿಯಾದಾಗ ಇದಕ್ಕೆ ಬೇಯಿಸಿಕೊಂಡ ಬೇಳೆಯನ್ನು ಇದಕ್ಕೆ ಸೇರಿಸಬೇಕು.
ಬೇಳೆ ಮತ್ತು ರವೆ ಚೆನ್ನಾಗಿ ಮಿಕ್ಸ್ ಆಗಬೇಕು. ಸಣ್ಣ ಉರಿಯಲ್ಲಿ ಕುದಿಬರಲು ಬಿಡಿ. ಕುದಿ ಬರಲು ಆರಂಭಿಸಿದಾಗ ಬೆಲ್ಲದ ನೀರು ಸಹ ಇದಕ್ಕೆ ಹಾಕಿ ಮಿಶ್ರಣ ಮಾಡಬೇಕು. ನಂತರ ನಿಧಾನವಾಗಿ ಗಟ್ಟಿಯಾಗುತ್ತಾ ಬರಬೇಕು. ಸಣ್ಣ ಉರಿಯಲ್ಲಿ ಕುದಿಬರಲು ಬಿಡಬೇಕು. ಕೇಸರಿ ಬಾತ್ ಹದಕ್ಕೆ ಇದು ಬರಬೇಕು. ಕೊನೆಯಲ್ಲಿ ಇದಕ್ಕೆ ಹುರಿದುಕೊಂಡಿದ್ದ ಡ್ರೈ ಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಈ ಹೆಸರು ಬೇಳೆ ಸಿಹಿ ಸಿದ್ದವಾಗುತ್ತೆ.



Click it and Unblock the Notifications