Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಆಹಾ.. ಜೇನಿನಂಥ ರುಚಿ! ಹಬ್ಬಕ್ಕೆ ಹೇಳಿ ಮಾಡಿಸಿದ ಹೆಸರುಬೇಳೆ ಪಾಯಸ; ಮಾಡೋದು ತುಂಬಾ ಈಸಿ
ಕೇವಲ 15 ನಿಮಿಷದಲ್ಲಿ ಮಾಡಿ ರುಚಿಯಾದ ಹೆಸರುಬೇಳೆ ಪಾಯಸ. ಅಡುಗೆ ಗೊತ್ತಿಲ್ಲದವರೂ ಮಾಡಬಹುದು ಈ ರೆಸಿಪಿ. ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ಸ್ವೀಟ್ ಇಲ್ಲದಿದ್ದರೆ ಅಪೂರ್ಣ ಎನಿಸುತ್ತದೆ. ಹಾಗೆಂದ ಮಾತ್ರಕ್ಕೆ ಸಂಕೀರ್ಣವಾದ ಸಿಹಿಯನ್ನೇ ಮಾಡಬೇಕು ಎಂದೇನಿಲ್ಲ. ಕೇವಲ ಮೂರು ಪದಾರ್ಥಗಳಾದ ಹೆಸರುಬೇಳೆ, ಬೆಲ್ಲ ಮತ್ತು ಹಾಲು ಬಳಸಿ ಅತಿ ಸುಲಭವಾಗಿ ರುಚಿಕರ ಹೆಸರುಬೇಳೆ ಪಾಯಸ (Moong Dal Payasa) ತಯಾರಿಸಬಹುದು. ಈ ರೆಸಿಪಿ ಸುಲಭವಾಗಿರುವುದು ಮಾತ್ರವಲ್ಲದೆ, ಬಿಸಿ ಬಿಸಿಯಾಗಿ ಮತ್ತು ತಣ್ಣಗಾದ ಮೇಲೂ ಅದ್ಭುತ ರುಚಿ ನೀಡುತ್ತದೆ. ಇದು ಹಬ್ಬಕ್ಕೆ ಹೇಳಿ ಮಾಡಿಸಿದ ಸಿಹಿ ಖಾದ್ಯ.
ಹೇಸರುಬೇಳೆ ಪಾಯಸವು ತನ್ನ ಆರೋಗ್ಯಕರ ಅಂಶಗಳಿಗಾಗಿ ಪ್ರಸಿದ್ಧ. ಇದು ತೆಳು ಮತ್ತು ಹಗುರವಾದ ಪಾಯಸವಾಗಿದ್ದು, ಊಟದ ನಂತರ ಸುಲಭವಾಗಿ ಜೀರ್ಣವಾಗುತ್ತದೆ. ಸಕ್ಕರೆ ಬದಲು ಬೆಲ್ಲವನ್ನು ಬಳಸುವುದು ಇದರ ಮತ್ತೊಂದು ವಿಶೇಷತೆ. ಬೆಲ್ಲವು ಪಾಯಸಕ್ಕೆ ಒಂದು ವಿಶೇಷವಾದ ಸುವಾಸನೆ ಮತ್ತು ಸಿಹಿಯನ್ನು ನೀಡುತ್ತದೆ. ಇದರೊಂದಿಗೆ, ಇದು ಕಬ್ಬಿಣಾಂಶದ ಉತ್ತಮ ಮೂಲವಾಗಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಇದು ಹೆಚ್ಚಾಗಿ ನಮ್ಮ ರಾಜ್ಯದಲ್ಲಿ ತಯಾರಿಸುವ ಸಾಂಪ್ರದಾಯಿಕ ಸಿಹಿಯಾಗಿದೆ. ಬನ್ನಿ, ಹೆಸರುಬೇಳೆ ಪಾಯಸ ಮಾಡುವ ಸುಲಭವಾದ ವಿಧಾನವನ್ನು (moong dal payasa recipe) ತಿಳಿಯೋಣ.

ಹೆಸರುಬೇಳೆ ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು
• ಹೆಸರುಬೇಳೆ
• ಬೆಲ್ಲ
• ಹಾಲು
• ಏಲಕ್ಕಿ ಪುಡಿ
• ತುಪ್ಪ
• ತೆಂಗಿನಕಾಯಿ
• ಗೋಡಂಬಿ ಮತ್ತು ಒಣ ದ್ರಾಕ್ಷಿ
ಹೆಸರುಬೇಳೆ ಪಾಯಸ ತಯಾರಿಸುವ ವಿಧಾನ
ಮೊದಲಿಗೆ, ಹೆಸರುಬೇಳೆಯನ್ನು ಚೆನ್ನಾಗಿ ತೊಳೆಯಿರಿ. ಒಂದು ಕುಕ್ಕರ್‌ನಲ್ಲಿ ಒಂದು ಕಪ್ ನೀರು ಮತ್ತು ಒಂದು ಚಿಟಿಕೆ ಕಲ್ಲುಪ್ಪಿನೊಂದಿಗೆ ಹಾಕಿ. ಇದನ್ನು 2 ರಿಂದ 3 ವಿಸಲ್ ಬರುವವರೆಗೆ ಬೇಯಿಸಿ. ಬೇಳೆಯು ಅತಿಯಾಗಿ ಮೆತ್ತಗಾಗದಂತೆ ನೋಡಿಕೊಳ್ಳಿ, ಅದು ಬಾಯಿಗೆ ಸಿಕ್ಕಿದಾಗ ಅದರ ರುಚಿ ಚೆನ್ನಾಗಿರುತ್ತದೆ. ಈಗ ಒಂದು ಪಾತ್ರೆಯಲ್ಲಿ ಬೆಲ್ಲಕ್ಕೆ ಒಂದು ಕಪ್ ನೀರು ಹಾಕಿ. ಅದನ್ನು ಬಿಸಿ ಮಾಡಿ. ಬೆಲ್ಲ ಸಂಪೂರ್ಣವಾಗಿ ಕರಗಿ ಪಾಕವಾದ ನಂತರ, ಅದರಲ್ಲಿರುವ ಕಸ ತೆಗೆದುಹಾಕಲು ಅದನ್ನು ಸೋಸಿ.
ಈಗ ಒಂದು ದೊಡ್ಡ ಪಾತ್ರೆಯಲ್ಲಿ ಹಾಲನ್ನು ಕುದಿಸಿ. ಹಾಲು ಕುದಿಯಲು ಪ್ರಾರಂಭಿಸಿದಾಗ ಉರಿಯನ್ನು ಕಡಿಮೆ ಮಾಡಿ. ಇದಕ್ಕೆ ಸೋಸಿದ ಬೆಲ್ಲದ ಪಾಕವನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅದಕ್ಕೆ ಈಗಾಗಲೇ ಬೇಯಿಸಿರುವ ಹೆಸರುಬೇಳೆಯನ್ನು ಹಾಕಿ. ಸೌಟಿನಿಂದ ಸ್ವಲ್ಪ ಮ್ಯಾಶ್ ಮಾಡಿ. ಈಗ ಏಲಕ್ಕಿ ಪುಡಿಯನ್ನು ಹಾಕಿ.

ಒಂದು ಸಣ್ಣ ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ. ತುಪ್ಪ ಬಿಸಿಯಾದ ನಂತರ ಅದಕ್ಕೆ ತೆಂಗಿನಕಾಯಿ ತುರಿ ಅಥವಾ ಹೋಳು ಹಾಕಿ. ಅವು ಸ್ವಲ್ಪ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಬೇಕಿದ್ದರೆ, ಇದಕ್ಕೆ ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನೂ ಬಳಸಬಹುದು. ಹುರಿದ ಒಗ್ಗರಣೆಯನ್ನು ನೇರವಾಗಿ ಪಾಯಸಕ್ಕೆ ಸುರಿಯಿರಿ. ಇಷ್ಟು ಮಾಡಿದರೆ ಸಾಕು, ಈಗ ರುಚಿಕರ ಹೆಸರುಬೇಳೆ ಪಾಯಸ ಸಿದ್ಧ.
ಇದನ್ನು ಬಿಸಿ ಬಿಸಿಯಾಗಿ ಸವಿಯಬಹುದು. ಅಥವಾ ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾದ ಮೇಲೆ ಬಡಿಸಬಹುದು. ಈ ಪಾಯಸವನ್ನು ಗ್ಲಾಸ್‌ನಲ್ಲಿ ಸುಲಭವಾಗಿ ಕುಡಿಯುವಂತೆ ಸ್ವಲ್ಪ ತೆಳುವಾಗಿ ತಯಾರಿಸುವುದು ಹೆಚ್ಚು ಉತ್ತಮ. ಈ ಸುಲಭ ಮತ್ತು ರುಚಿಕರ ಪಾಯಸವನ್ನು ಒಮ್ಮೆ ಟ್ರೈ ಮಾಡಿ. ಖಂಡಿತ ಇದು ನಿಮ್ಮ ಮನೆಯವರ ಮೆಚ್ಚುಗೆ ಗಳಿಸುತ್ತದೆ.
ಪ್ರಮುಖ ಸಲಹೆಗಳು
ಹೆಸರುಬೇಳೆಯನ್ನು ಪ್ರತ್ಯೇಕವಾಗಿ ಕುಕ್ಕರ್‌ನಲ್ಲಿ ಬೇಯಿಸಿ. ಹಾಲಿನ ಮಿಶ್ರಣಕ್ಕೆ ಸೇರಿಸುವುದು ಉತ್ತಮ. ಸಕ್ಕರೆಗಿಂತ ಬೆಲ್ಲವನ್ನು ಬಳಸುವುದು ಈ ಪಾಯಸಕ್ಕೆ ಹೆಚ್ಚು ಸೂಕ್ತ. ಅರ್ಧ ಲೀಟರ್ ಹಾಲಿಗೆ ಮತ್ತೆ ಅರ್ಧ ಲೀಟರ್ ನೀರು ಸೇರಿಸಬಹುದು. ಬೇಕಿದ್ದರೆ ಒಂದು ಕಪ್ ತೆಂಗಿನಕಾಯಿ ಹಾಲನ್ನು ಸಹ ಸೇರಿಸಬಹುದು.



Click it and Unblock the Notifications