Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟ, ತಿಂಡಿ ಎಲ್ಲದಕ್ಕೂ ಬೆಸ್ಟ್ ಈ ಮೊಳಕೆ ಕಾಳಿನ ಕರಿ: ಮಾಡೋದು ಹೇಗೆ?
ನೀವು ಕಾಳುಗಳ ಪ್ರಯೋಜನಗಳ ಬಗ್ಗೆ ತಿಳಿದಿರುತ್ತೀರಿ. ಅದ್ರಲ್ಲೂ ಹೆಸರು ಕಾಳನ್ನು ಮೊಳಕೆ ಬರಿಸಿದರೆ ಅದರ ಪ್ರಯೋಜನ ಹಾಗೆ ರುಚಿ ಎರಡೂ ಸಹ ದುಪ್ಪಟ್ಟಾಗುತ್ತೆ. ನೀವು ಯಾವುದೇ ಖಾದ್ಯಕ್ಕೂ ಇದನ್ನು ಸೇರಿಸಬಹುದು. ಅದ್ರಲ್ಲೂ ಮೊಳಕೆ ಕಾಳುಗಳಿಂದ ನೀವು ಬಗೆ ಬಗೆಯ ಖಾದ್ಯಗಳ ಮಾಡಿ ಸವಿಯಬಹುದು. ಹೀಗಾಗಿ ನಾವಿಂದು ಮೊಳಕೆ ಕಾಳಿನ ವಿಶೇಷ ಖಾದ್ಯ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ.
ಹೆಸರು ಕಾಳುಗಳಿಂದ ಹಲವು ಖಾದ್ಯ ಮಾಡಬಹುದು. ಹಾಗೆ ಮೊಳಕೆ ಕಾಳಿನ ಮಿಶ್ರಣಗಳ ಮಾಡಿ ಸಂಜೆ ಸಮಯದಲ್ಲಿ ಹಾಗೆ ಬೆಳಗ್ಗೆ ತಿಂಡಿಗೆ ಸವಿಯುವುದು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮವಾಗಿರಲಿದೆ. ಅಲ್ಲದೆ ತೂಕ ಇಳಿಸುವುದು ಸೇರಿ ನಿಮ್ಮ ದೇಹವು ಸಮತೋಲನದಲ್ಲಿ ಇಟ್ಟುಕೊಳ್ಳಲು ಈ ಕಾಳಿನ ಆಹಾರಗಳು ನೆರವಾಗಲಿದೆ.

ಆದ್ರೆ ನಾವಿಂದು ಹೆಸರು ಕಾಳಿನ ಕರಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಕರಿ ವಿಶೇಷವಾಗಿ ದೋಸೆ, ಇಡ್ಲಿಯೊಂದಿಗೆ ಬಹಳ ರುಚಿ ನೀಡಲಿದೆ. ಊಟದೊಂದಿಗೆ ಕೂಡ ಇದನ್ನು ಸವಿಯಬಹುದು. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ. ಹಾಗಾದ್ರೆ ನಾವಿಂದು ಈ ಹೆಸರು ಕಾಳಿನ ಅದ್ಭುತ ರುಚಿಯ ಕರಿ ಮಾಡುವುದು ಹೇಗೆ ನೋಡೋಣ.
ಮೊಳಕೆ ಕಾಳಿನ ಕರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೊಳಕೆ ಕಾಳಿನ ಕರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೊಳಕೆ ಬರಿಸಿದ ಮೊಳಕೆಕಾಳುಗಳು
- ಜೀರಿಗೆ
- ಸಾಸಿವೆ
- ಉಪ್ಪು
- ಎಣ್ಣೆ
- ಹಸಿ ಮೆಣಸು
- ಹುರಿಗಡಲೆ
- ಈರುಳ್ಳಿ
- ಕರಿಬೇವು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಗರಂ ಮಸಾಲ
- ಅರಶಿಣ
- ಕೊತ್ತಂಬರಿ ಸೊಪ್ಪು
ಮೊಳಕೆ ಕಾಳಿನ ಕರಿ ಮಾಡುವ ಸುಲಭದ ವಿಧಾನವೇನು?
ಮೊದಲು ಮೊಳಕೆ ಬರಿಸಿಕೊಂಡಿರುವ ಹೆಸರು ಕಾಳುಗಳನ್ನು ನೀರಿನಲ್ಲಿ ತೊಳೆದು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಕುಕ್ಕರ್ ಇಟ್ಟು 1 ಕಪ್ ನೀರು ಹಾಕಿ ಈ ನೀರು ಬಿಸಿಯಾದ ಬಳಿಕ ತೊಳೆದುಕೊಂಡಿರುವ ಮೊಳಕೆ ಬಂದಿರುವ ಹೆಸರು ಕಾಳು, ಉಪ್ಪು ಹಾಕಿ ಮುಚ್ಚಳ ಹಾಕಿ 2 ಸೀಟಿ ಹೊಡೆಯಲು ಬಿಡಿ.
ಅನಂತರ ಕುಕ್ಕರ್ ತಣ್ಣಗಾಗಲು ಬಿಟ್ಟು ಮುಚ್ಚಳ ತೆರೆಯಿರಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಹುರಿಗಡಲೆ ಹಾಕಿ, ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಅರಶಿಣ ಹಾಕಿ ಪುಡಿ ಮಾಡಿಕೊಳ್ಳಿ. ಈಗ ಬಾಣಲೆಯಲ್ಲಿ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಇದಕ್ಕೆ ಜೀರಿಗೆ, ಸಾಸಿವೆ, ಹಸಿ ಮೆಣಸು, ಒಂದು ಈರುಳ್ಳಿ, ಕರಿಬೇವು ಸಹ ಹಾಕಿ ಫ್ರೈ ಮಾಡಿಕೊಳ್ಳಿ.
ಇದಕ್ಕೆ ಅರ್ಧ ಸ್ಪೂನ್ ಶುಂಠಿ ಬೆಳ್ಳುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿ ಅನಂತರ 2 ಟೊಮೆಟೋ ಇದಕ್ಕೆ ಹಾಕಿ 2 ನಿಮಿಷ ಫ್ರೈ ಮಾಡಿ. ಈ ಸಮಯದಲ್ಲಿ ಉಪ್ಪು ಸಹ ಹಾಕಿ. ಈಗ ಬೇಯಿಸಿಕೊಂಡಿರುವ ಕಾಳುಗಳನ್ನು ಈ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಮೊದಲು ಪುಡಿ ಮಾಡಿಕೊಂಡಿದ್ದ ಹುರಿಗಡಲೆ ಪುಡಿ ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳಬೇಕು. ನಿಮಗೆ ಯಾವ ಪ್ರಮಾಣದ ದಪ್ಪ ಬೇಕೋ ಹಾಗೆ ನೀರು ಹಾಕಿಕೊಳ್ಳಿ. ಇದಕ್ಕೆ ಅರ್ಧ ಸ್ಪೂನ್ ಗರಂ ಮಸಾಲ ಹಾಕಿ ಮಿಕ್ಸ್ ಮಾಡಿ. ಮತ್ತೆ 3 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಹೆಸರು ಕಾಳಿನ ರುಚಿಕರ ಕರಿ ಸಿದ್ದವಾಗುತ್ತೆ.



Click it and Unblock the Notifications