Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
5ಕ್ಕೂ ಹೆಚ್ಚು ರೀತಿಯ ಕಾಳುಗಳ ಸೇರಿಸಿ ಒಂದು ಪಲ್ಯ ಮಾಡಿ! ಊಟದೊಂದಿಗೆ ಆರೋಗ್ಯವೂ ನಿಮ್ಮದೇ!
ಊಟದೊಂದಿಗೆ ಆರೋಗ್ಯಕರ ಖಾದ್ಯಗಳು ಊಟದ ರುಚಿ ಹೆಚ್ಚಿಸುವ ಜೊತೆಗೆ ನಿಮ್ಮ ಆರೋಗ್ಯವನ್ನು ಸಹ ವೃದ್ಧಿಸಲಿದೆ. ಅಲ್ಲದೆ ದೇಹ್ಕಕೆ ಬೇಕಾದ ಅಗತ್ಯ ವಿಟಮಿನ್, ಪೋಷಕಾಂಶಗಳ ನೀಡಲು ಅನ್ನ, ಸಾಂಬಾರ್, ಚಟ್ನಿಗಳಿಂದ ಸಾಧ್ಯವಿಲ್ಲ ಹೀಗಾಗಿ ಅದರೊಂದಿಗೆ ಹಸಿರು ತರಕಾರಿಗಳು, ಬೇಳೆ ಕಾಳುಗಳು ಸಹ ಮುಖ್ಯವಾಗುತ್ತವೆ. ಕಾಳುಗಳಲ್ಲಿನ ಪೋಷಕಾಂಶಗಳು ನಿಮ್ಮ ದೇಹಕ್ಕೆ ಬಹಳ ಉತ್ತಮ, ಹಾಗೆ ಎಲ್ಲಾ ವಿಧವಾಗಿಯೂ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿವೆ.
ಹಾಗೆ ಊಟದೊಂದಿಗೆ ಎಲ್ಲಾ ಕಾಳುಗಳನ್ನು ಹಾಕಿ ಮಾಡುವ ಪಲ್ಯ ಇದ್ದರೆ ಊಟದ ರುಚಿಯೂ ದುಪ್ಪಟ್ಟಾಗುವುದು ನೋಡಬಹುದು. ನಾವಿಂದು ಮನೆಯಲ್ಲೇ ಊಟದ ಸಮಯಕ್ಕೆ ಸರಿಯಾಗಿ ಈ ಕಾಳುಗಳ ಬಳಸಿಕೊಂಡು ಮಾಡುವ ಪಲ್ಯದ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಈ ಎಲ್ಲಾ ಕಾಳುಗಳ ವಿಶೇಷ ಆರೋಗ್ಯ ಪ್ರಯೋಜನವು ನಿಮ್ಮಲ್ಲಿ ಉತ್ತಮ ಆರೋಗ್ಯ ವೃದ್ಧಿಗೆ ಕಾರಣವಾಗಲಿದೆ.

ಊಟದೊಂದಿಗೆ ಸವಿಯಲು ಎಲ್ಲರು ಮೊಳಕೆ ಬರಿಸಿದ ಕಾಳುಗಳ ಸೇವಿಸುವುದು ನೋಡಿರಬಹುದು. ಆದ್ರೆ ನಾವಿಂದು ಹಲವು ಕಾಳುಗಳ ಬಳಸಿಕೊಂಡು ಉತ್ತಮ ರುಚಿಯ ಪಲ್ಯ ಮಾಡುವ ಕುರಿತು ತಿಳಿಯೋಣ. ಇಂದು ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಅಂಶಗಳ ಹೊಂದಿರಲಿವೆ.
ಕಾಳುಗಳ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಯಾವೆಲ್ಲಾ ಕಾಳುಗಳನ್ನ ಬಳಸಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕಾಳು ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಒಣ ಹಸಿರು ಬಟಾಣಿ
- ರಾಜ್ಮಾ - 2 ಚಮಚ
- ಕಪ್ಪು ಕಡಲೆ - 2 ಚಮಚ
- ಕಪ್ಪು ಕಣ್ಣಿನ ಬಟಾಣಿ - 2 ಚಮಚ
- ಕಾಬೂಲ್ ಕಡಲೆ
- ನೆಲಗಡಲೆ - 2 ಚಮಚ
- ಅವರೆಕಾಳು
- ಹೆಸರು ಕಾಳು
- ಬೀನ್ಸ್ - 2 ಚಮಚ
- ತೆಂಗಿನಕಾಯಿ ತುರಿ - 1/2 ಕಪ್
- ಸಾಸಿವೆ - 1/2 ಚಮಚ
- ಜೀರಿಗೆ- 1/2 ಚಮಚ
- ಚನ್ನಾ ಕಡಲೆ
- ಇಂಗು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಒಣ ಮೆಣಸು
- ಹಸಿ ಮೆಣಸು
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಕಾಳು ಪಲ್ಯ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಎಲ್ಲಾ ಕಡಲೆಗಳನ್ನು ಬೇರೆ ಬೇರೆಯಾಗಿ ತೊಳೆದುಕೊಂಡು ನಂತರ ಒಂದೇ ಪಾತ್ರೆಗೆ ಹಾಕಿ ನೆನೆಸಿಡಬೇಕು. ಒಂದು ರಾತ್ರಿ ನೆನೆಸಿದ ಬಳಿಕ ಮಾರನೆ ದಿನ ಒಂದು ಕುಕ್ಕರ್‌ಗೆ ಈ ಕಾಳುಗಳ ಹಾಕಿಕೊಳ್ಳಿ. ಹಾಗೆ ಉಪ್ಪು, ಕಾಳು ಮುಳುಗುವಷ್ಟು ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. ಅನಂತರ ಮುಚ್ಚಳ ತೆರೆದು ನೀರನ್ನು ಬಸಿದು ತೆಗೆದುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ಹಾಕಿ ತುರಿದು ಇಟ್ಟುಕೊಳ್ಳಿ. ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಇಂಗು, ಕರಿಬೇವು, ಒಣ ಮೆಣಸು, ಸಣ್ಣದಾಗಿ ಹೆಚ್ಚಿದ ಹಸಿ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಬೇಯಿಸಿಕೊಂಡಿದ್ದ ಕಾಳುಗಳನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹೀಗೆ ಮಿಕ್ಸ್ ಮಾಡುವಾಗ ಉಪ್ಪು ಬೇಕಿದ್ದರೆ ಹಾಕಿ. ಹಾಗೆ ಖಾರ ಬೇಕಿದ್ದರೆ ಖಾರದ ಪುಡಿ ಹಾಕಬಹುದು. ಈಗ ತುರಿದ ತೆಂಗಿನಕಾಯಿಯನ್ನು ಸಹ ಹಾಕಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಕಾಳು ಪಲ್ಯಗಳು ಸಿದ್ದವಾಗುತ್ತೆ.



Click it and Unblock the Notifications