Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪರ್ಫೆಕ್ಟ್ ರುಚಿಯ ಮೆಣಸಿನಕಾಯಿ ಬಜ್ಜಿ ಮಾಡೋದು ಹೇಗೆ? ರೆಸಿಪಿ ಇಲ್ಲಿದೆ..!
ಊಟ ಆಗಿ ಸಂಜೆ ವೇಳೆ ಟೀ ಜೊತೆ ಯಾವುದಾದರು ಸ್ನ್ಯಾಕ್ಸ್ ಇದ್ದರೆ ಟೀ-ಕಾಫಿ ರುಚಿ ಮತ್ತಷ್ಟು ಹೆಚ್ಚಾಗೋದು ಪಕ್ಕಾ. ಅದ್ರೆ ಟೀ ಜೊತೆ ಸವಿಯಲು ಮಾಡೋದು ಏನು? ಹೆಚ್ಚಾಗಿ ಟೀ ಜೊತೆಗೆ ಮೆಣಸಿನಕಾಯಿ ಬಜ್ಜೆ ಮಾಡುತ್ತಾರೆ. ಏಕಂದ್ರೆ ಬಸಿ ಬಿಸಿ ಟೀ ಜೊತೆ ಖಾರ ಖಾರದ ಬಜ್ಜೆ ಸಖತ್ ರುಚಿ ನೀಡುತ್ತೆ.
ಆದ್ರೆ ಈ ಮೆಣಸಿನಕಾಯಿ ಬಜ್ಜೆ ಮಾಡಲು ಹೋದಾಗ ಒಂದಲ್ಲಾ ಒಂದು ಯಡವಟ್ಟಾಗುತ್ತದೆ, ಕೆಲವೊಮ್ಮೆ ಹಿಟ್ಟು ಚೆನ್ನಾಗಿ ಬರುವುದಿಲ್ಲ. ಮತ್ತೊಂದು ಸಹ ಎಣ್ಣೆಗೆ ಬಿಟ್ಟ ಕೂಡಲೆ ಹರಿದು ಹೋಗುತ್ತದೆ. ಆದ್ರೆ ನಾವು ಹೇಳುವಂತೆ ಮಾಡಿದರೆ ಈ ಬಜ್ಜಿ ಪರ್ಫೆಕ್ಟ್ ಆಗಿ ಮಾಡಬಹುದು.

ಹಾಗಾದ್ರೆ ನಾವಿಂದು ರುಚಿಕರ ಪರ್ಫೆಕ್ಟ್ ಆಗಿ ಮೆಣಸಿನ ಬಜ್ಜಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಈ ಬಜ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಬಜ್ಜಿ ಮಾಡುವ ವಿಧಾನವೇನು? ಬಜ್ಜಿ ಮಾಡಲು ಎಷ್ಟು ಸಮಯಬೇಕು? ಈ ಬಜ್ಜಿ ಮಾಡಲು ಹಿಟ್ಟು ಹೇಗೆ ರೆಡಿ ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪರ್ಫೆಕ್ಟ್ ರುಚಿಯ ಮೆಣಸಿನ ಬಜ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು
- ಕಡಲೆ ಹಿಟ್ಟು- 1 1/2 ಕಪ್
- ಅಕ್ಕಿ ಹಿಟ್ಟು - ಅರ್ಧ ಕಪ್
- ಬಜ್ಜಿ ಮಿರ್ಚಿ -10 ರಿಂದ 15
- ಅರಿಶಿನ ಪುಡಿ - 1/2 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
- ಜೀರಿಗೆ ಪುಡಿ - 1/2 tsp & 1/4 tsp
- ದನಿಯಾ ಪುಡಿ - 1/2 ಟೀಸ್ಪೂನ್
- ಓಂಕಾಳು - 1/4 ಟೀಸ್ಪೂನ್
- ಅಡುಗೆ ಸೋಡಾ - 2 ಪಿಂಚ್
- ನೀರು
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಮೆಣಸಿನ ಬಜ್ಜಿ ಮಾಡುವುದು ಹೇಗೆ?
ಮೊದಲು ಒಂದು ಬೌಲ್ನಲ್ಲಿ ಕಡಲೆಹಿಟ್ಟು ಹಾಗೂ ಅಕ್ಕಿ ಹಿಟ್ಟು ಹಾಕಿಕೊಳ್ಳಿ, ಅರಶಿನ, ಖಾರದ ಪುಡಿ, ಉಪ್ಪು, ಓಂಕಾಳು, ಜೀರಿಗೆ ಪುಡಿ, ದನಿಯಾ ಪುಡಿ, ಕೊತ್ತಂಬರಿ ಸೊಪ್ಪು ಚಿಕ್ಕದಾಗಿ ಕತ್ತರಿಸಿದ್ದು, ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಮಿಕ್ಸ್ ಮಾಡುವಾಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಮಿಕ್ಸ್ ಮಾಡುತ್ತಾ ಹೋಗಬೇಕು. ಈ ಹಿಟ್ಟ ಮಾಡುವಾಗ ಎಚ್ಚರ ವಹಿಸಬೇಕು. ಹಿಟ್ಟು ತೆಳುವಾದರೆ ಬಜ್ಜಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ಗಂಟಾಗದಂತೆ ಮಿಕ್ಸ್ ಮಾಡಿಕೊಳ್ಳಬೇಕು. ಹಿಟ್ಟು ಗಂಟಾದರೆ ಬಜ್ಜಿ ಚೆನ್ನಾಗಿ ಬರುವುದಿಲ್ಲ ಹೀಗಾಗಿ ನೀರನ್ನು ನಿಧಾನವಾಗಿ ಹಾಕಿಕೊಂಡು ಹಿಟ್ಟು ರೆಡಿ ಮಾಡಿಕೊಳ್ಳಿ.
ಈಗ ಇನ್ನೊಂದು ಬೌಲ್ನಲ್ಲಿ ಸ್ವಲ್ಪ ದನಿಯಾ, ಜೀರಿಗೆ ಪುಡಿ, ಉಪ್ಪು, ಓಂಕಾಳು ಹಾಕಿಕೊಂಡು ಮಿಕ್ಸ್ ಮಾಡಿ. ಬಳಿಕ ಮೆಣಸಿನಕಾಯಿಯನ್ನು ಮಧ್ಯದಲ್ಲಿ ಸಿಗಿದುಕೊಂಡು ಅದರಲ್ಲಿರುವ ಬೀಜ ತೆಗೆದುಕೊಳ್ಳಿ. ತೆಗೆದ ಬಳಿಕ ಈ ಮಸಾಲವನ್ನು ಅದಕ್ಕೆ ಹಚ್ಚಿಕೊಳ್ಳಿ.
ಈಗ ಈ ಮೆಣಸನ್ನು ಹಿಟ್ಟಿನಲ್ಲಿ ಅದ್ದಿಕೊಳ್ಳಿ, ಬಳಿಕ ಮೆಣಸನ್ನು ಕಾದ ಎಣ್ಣೆಯೊಳಗೆ ಬಿಡಿ. ಉರಿಯನ್ನು ನಿಧಾನವಾಗಿ ಇಟ್ಟುಕೊಳ್ಳಿ. ಮೆಣಸನ್ನು ಎರಡೂ ಕಡೆಗಳಲ್ಲಿ ಚೆನ್ನಾಗಿ ಕಾಯಿಸಿಕೊಳ್ಳಿ. 5ರಿಂದ 6 ನಿಮಿಷಗಳ ಕಾಲ ಕಾಯಿಸಿದರೆ ಮೆಣಸಿನಕಾಯಿ ಬಜ್ಜಿ ನಿಮ್ಮ ಮುಂದೆ ರೆಡಿಯಾಗಿರುತ್ತದೆ.
ಮಧ್ಯಮ ಉರಿಯಲ್ಲಿಟ್ಟು ಕಾಯಿಸುವುದರಿಂದ ಬಜ್ಜಿ ಹೆಚ್ಚು ಎಣ್ಣೆ ಕುಡಿಯುವುದಿಲ್ಲ. ಇಷ್ಟಾದರೆ ನಿಮ್ಮ ಮುಂದೆ ಬಜ್ಜಿ ರೆಡಿಯಾಗುತ್ತದೆ. ಇದನ್ನು ಟೀ-ಕಾಫಿ ಜೊತೆ ಸವಿಯಲು ನೀಡಬಹುದು. ಬಿಸಿ ಬಿಸಿಯಾಗಿದ್ದಾಗಲೇ ಬಜ್ಜಿ ಸವಿದರೆ ಮತ್ತಷ್ಟು ರುಚಿ ಎನಿಸುತ್ತದೆ.



Click it and Unblock the Notifications