Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕ್‌ಫಾಸ್ಟ್‌ಗೆ ಮಾಡಿ ಪುದಿನ ರೈಸ್..! ಎಷ್ಟು ರುಚಿ ನೀಡುತ್ತೆ ಗೊತ್ತಾ?
ಬೆಳಗ್ಗೆಯ ತಿಂಡಿಗೆ ಎಷ್ಟೆಲ್ಲಾ ರೈಸ್‌ನ ಐಟಂ ಮಾಡಿರುತ್ತೇವೆ. ರೈಸ್‌ನಿಂದ ಹಲವು ರೀತಿ ಖಾದ್ಯಗಳ ಮಾಡಬಹುದು ಎಂಬುದು ನಮಗೆಲ್ಲಾ ತಿಳಿದಿದೆ. ಅದರಲ್ಲೂ ಪಲಾಬ್, ಚಿತ್ರಾನ್ನ, ವಾಂಗಿಬಾತ್, ಪುಳಿಯೋಗರೆ, ರೈಸ್ ಬಾತ್ ಹೀಗೆ ಹತ್ತು ಹಲವು ರೀತಿಯ ಖಾದ್ಯ ಮಾಡಿ ಸವಿದಿರುತ್ತೇವೆ. ಈ ಎಲ್ಲಾ ಖಾದ್ಯವೂ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಮಾಡಬಹುದಾದದ ಖಾದ್ಯಗಳಾಗಿವೆ.
ನಾವು ಕೂಡ ಇಂತಹ ಹಲವು ರುಚಿಕರ ಖಾದ್ಯ ಮಾಡಿ ಸವಿದಿರುತ್ತೇವೆ. ಬಹಳ ಗಡಿ ಬಿಡಿಯಲ್ಲಿಯೂ ಈ ರೀತಿ ರೈಸ್‌ನಿಂದ ಸುಲಭವಾಗಿ ಹತ್ತಾರು ಖಾದ್ಯಗಳ ಮಾಡಬಹುದು. ಹಾಗೆ ನಾವಿಂದು ಪುದಿನ ಸೊಪ್ಪಿನಿಂದ ಮಾಡುವ ಈ ರೈಸ್ ಬಹಳ ರುಚಿಯಾಗಿರುತ್ತೆ. ಇದನ್ನು ಬೆಳಗ್ಗೆ ತಿಂಡಿಗೆ ಹಾಗೂ ಮಧ್ಯಾಹ್ನದ ಬಾಕ್ಸ್‌ಗೂ ಸಹ ಹಾಕಿ ಸವಿಯಬಹುದು.

ಹೀಗಾಗಿ ನಾವಿಂದು ಈ ಪುದೀನ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಹಿಂದೆ ನಾವು ಪಾಲಕ್ ರೈಸ್, ಕೊತ್ತಂಬರಿ ರೈಸ್ ಸೇರಿ ಕೆಲವೊಂದು ಸೊಪ್ಪಿನಿಂದ ಮಾಡಲಾಗುವ ಖಾದ್ಯಗಳ ಕುರಿತು ತಿಳಿದಿದ್ದೇವೆ. ಹೀಗಾಗಿ ನಾವಿಂದು ಈ ಪುಸಿನ ಸೊಪ್ಪಿನ ರೈಸ್ ಮಾಡುವುದನ್ನು ತಿಳಿದುಕೊಳ್ಳೋಣ. ಪುದಿನ ಸೊಪ್ಪಿನ ರೈಸ್ ಮಾಡಲು ಬೇಕಾಗುವ ಪದಾರ್ಥಗಳು, ಪುದಿನ ರೈಸ್ ಮಾಡುವುದು ಹೇಗೆ?, ಪುದಿನ ರೈಸ್ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪುದಿನ ಸೊಪ್ಪಿನ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಪುದಿನ ಸೊಪ್ಪು
- ಈರುಳ್ಳಿ
- ಹಸಿಮೆಣಸಿನಕಾಯಿ
- ಗೋಡಂಬಿ
- ಸೋಂಪು ಕಾಳು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್
- ಏಲಕ್ಕಿ
- ಲವಂಗ
- ಚಕ್ಕೆ
- ನಿಂಬೆ ಹಣ್ಣಿನ ರಸ
- ಉಪ್ಪು
- ತುಪ್ಪ
- ಎಣ್ಣೆ
ಪುದಿನ ಸೊಪ್ಪಿನ ರೈಸ್ ಮಾಡುವ ವಿಧಾನವೇನು?
ಮೊದಲು ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಚೆನ್ನಾಗಿ ತೊಳೆದು 10 ನಿಮಿಷ ನೆನೆಸಿಟ್ಟಿರುವ ಅಕ್ಕಿಯನ್ನು ಕುಕ್ಕರ್‌ಗೆ ಹಾಕಿಕೊಳ್ಳಿ. ನಂತರ ಅಳೆಯ ಪ್ರಕಾರವಾಗಿ ನೀರು ಕೂಡ ಹಾಕಿಕೊಳ್ಳಿ. ಇದಕ್ಕೆ ಉಪ್ಪು, ಸ್ವಲ್ಪ ಎಣ್ಣೆ ಹಾಕಿ ಅನ್ನ ಮಾಡಿಕೊಳ್ಳಿ. 2 ಸೀಟಿ ಹೊಡೆಸಿದರೆ ಸಾಕಾಗುತ್ತದೆ.
ನಂತರ ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಅನ್ನವನ್ನು ಉದುರು ಉದುರಾಗಿ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಪುದಿನ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಹಾಕಿಕೊಳ್ಳಿ. ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಮತ್ತು ತುಪ್ಪ ಹಾಕಿಕೊಂಡು ಬಿಸಿ ಮಾಡಿ ಅದಕ್ಕೆ ಸೋಂಕಾಳು. ಏಲಕ್ಕಿ, ಚಕ್ಕೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ, ಹಸಿ ಮೆಣಸು ಹಾಕಿ 5 ನಿಮಿಷ ಫ್ರೈ ಮಾಡಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಿಸಿ ಮಾಡಿಕೊಳ್ಳಿ.
ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಪುದಿನ ಎಲೆಯ ಪೇಸ್ಟ್ ಅನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. 3 ನಿಮಿಷಗಳ ಕಾಲ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ. ಈಗ ಸ್ವಲ್ಪ ಪುದಿನ ಎಲೆಗಳ ಕತ್ತರಿಸಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಈಗ 5 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಮೊದಲೇ ಮಾಡಿಕೊಂಡ ಅನ್ನವನ್ನು ಹಾಕಿಕೊಂಡು ಒಮ್ಮೆ ಕಲಸಿಕೊಂಡು ಒಲೆ ಆಫ್ ಮಾಡಿ.
ನಂತರ ಚೆನ್ನಾಗಿ ಈ ಮಿಶ್ರಣ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಪುದಿನ ರೈಸ್ ರೆಡಿಯಾಗುತ್ತದೆ. ಕೊನೆಯದಾಗಿ ತುಪ್ಪದಲ್ಲಿ ಗೋಡಂಬಿ ಹುರಿದುಹಾಕಿ, ಹಾಗೆ ನಿಂಬೆ ಹಣ್ಣಿನ ರಸ ಕೂಡ ಹಿಂಡಿಕೊಳ್ಳಿ. ಇದರ ಸುವಾಸನೆಗೆ ಬ್ರೇಕ್‌ಫಾಸ್ಟ್ ಮತ್ತಷ್ಟು ಸೇರುತ್ತದೆ. ಇದನ್ನು ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications