Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಷ್ಟೊಂದು ರುಚಿಯ ಪುದಿನ ನಿಪ್ಪಟ್ಟು ಮಾಡಿದ್ದೀರಾ? ಒಮ್ಮೆ ಟ್ರೈ ಮಾಡಿ ನೋಡಿ..!!
ನಾವು ಸಿಹಿ ತಿಂಡಿಯ ಜೊತೆಗೆ ಖಾರ ಖಾರದ ತಿಂಡಿಯನ್ನೂ ಕೂಡ ಇಷ್ಟಪಡುವವರಾಗಿರುತ್ತೇವೆ. ಹೀಗಾಗಿ ಸಂಜೆಯ ಸ್ನ್ಯಾಕ್ಸ್, ಊಟ, ತಿಂಡಿಗೆ ಯಾವುದಾದ್ರು ತಿಂಡಿ ಮಾಡಿರುತ್ತೇವೆ. ಅದರಲ್ಲಿ ವಡೆ, ನಿಪ್ಪಟ್ಟು, ಹಪ್ಪಳ ಈ ರೀತಿಯ ಯಾವುದಾದರು ವಸ್ತು ಇದ್ದರೆ ಊಟ, ತಿಂಡಿಗೆ ರುಚಿ ಹೆಚ್ಚಾಗುತ್ತೆ. ನಿಪ್ಪಟ್ಟು ಮತ್ತು ವಡೆಯನ್ನು ಒಂದೇ ರೀತಿಯಲ್ಲಿ ಮಾಡಬಹುದಾದರು ಎರಡರ ರುಚಿಯೂ ಬೇರೆ ಬೇರೆಯಾಗಿದೆ.
ವಡೆ ಹಾಗೂ ನಿಪ್ಪಟ್ಟು ಊಟಕ್ಕೆ ಎಷ್ಟು ರುಚಿ ನೀಡುತ್ತೆ ಅನ್ನೋದನ್ನು ನೀವು ತಿಳಿದಿರುತ್ತೀರಿ, ಇನ್ನು ಈ ನಿಪ್ಪಟ್ಟನ್ನು ಹತ್ತು ಹಲವು ರೀತಿ ಮಾಡಿ ಸವಿಯಬಹುದು. ಒಂದೊಂದು ಬಗೆ ಒಂದೊಂದು ರೀತಿ ರುಚಿ ನೀಡಲಿದೆ. ನಾವಿಂದು ಈ ನಿಪ್ಪಟ್ಟಿನಲ್ಲಿ ಹೊಸ ಹೊಸ ರೀತಿಯ ನಿಪ್ಪಟ್ಟು ಮಾಡುವ ಕುರಿತು ತಿಳಿಯೋಣ. ಅದರಲ್ಲಿ ಹೊಸ ರುಚಿಯಲ್ಲಿ ಪುದಿನ ಸೊಪ್ಪಿನ ನಿಪ್ಪಟ್ಟು ಮಾಡುವುದನ್ನು ತಿಳಿಯೋಣ.

ಪುದಿನ ಸೊಪ್ಪಿನ ರುಚಿಕರ ಅಂಶ ನಿಮಗೂ ಗೊತ್ತಿರುತ್ತೆ. ಪುದಿನ ಸೊಪ್ಪು ಆರೋಗ್ಯದ ದೃಷ್ಟಿಯಲ್ಲು ಬಹಳ ಒಳ್ಳೆಯದು. ಈ ಸೊಪ್ಪು ಬಳಸಿಯೇ ರುಚಿ ರುಚಿಯ ನಿಪ್ಪಟ್ಟು ಕೂಡ ಮಾಡಬಹುದು. ಹೀಗಾಗಿ ನಾವಿಂದು ರುಚಿ ರುಚಿಯ ಪುದಿನ ನಿಪ್ಪಟ್ಟಿನ ಕುರಿತು ತಿಳಿದುಕೊಳ್ಳೋಣ.
ಈ ಪುದಿನ ಸೊಪ್ಪಿನ ನಿಪ್ಪಟ್ಟು ಮಾಡುವುದು ಹೇಗೆ? ಪುದಿನ ಸೊಪ್ಪಿನ ನಿಪ್ಪಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪುದಿನ ಸೊಪ್ಪಿನ ನಿಪ್ಪಟ್ಟು ಮಾಡಲು ಬೇಕಾಗುವ ಪದಾರ್ಥಗಳು
- ಶೇಂಗಾ ಬೀಜ
- ಅಕ್ಕಿ ಹಿಟ್ಟು
- ಹುರಿಗಡಲೆ
- ಇಂಗು
- ಪುದಿನ
- ಕೊತ್ತಂಬರಿ ಸೊಪ್ಪು
- ಜೀರಿಗೆ
- ಹಸಿಮೆಣಸು
- ಉಪ್ಪು
- ಎಣ್ಣೆ
ಪುದಿನ ಸೊಪ್ಪಿನ ನಿಪ್ಪಟ್ಟು ಮಾಡುವುದು ಹೇಗೆ?
ಅರ್ಧ ಕಪ್‌ನಲ್ಲಿ ಅಥವಾ ಸ್ವಲ್ಪ ಸಿಂಗಲ್ ಪೀಸ್ ಶೇಂಗಾ ಬೀಜವನ್ನು ಪಾತ್ರೆಗೆ ಹಾಕಿ ಹುರಿದುಕೊಳ್ಳಿ. 3 ನಿಮಿಷ ಹುರಿದು ಬಳಿಕ ತಣ್ಣಗಾದಾಗ ಅದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ. ಅದೇ ಪ್ರಮಾಣದಲ್ಲಿ ಹುರಿಗಡಲೆ ಕೂಡ ತೆಗೆದುಕೊಂಡು ಅದನ್ನು ಕೂಡ ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು ತರಿ ತರಿಯಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ದೊಡ್ಡ ಬೌಲ್ ಅಥವಾ ಬೇಸನ್ ತೆಗೆದುಕೊಂಡು ಅದಕ್ಕೆ 2 ಕಪ್ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಹಾಗೆ ಇದಕ್ಕೆ ರುಬ್ಬಿಕೊಂಡ ಹುರಿಗಡಲೆ ಹಾಗು ಶೇಂಗಾ ಪುಡಿಯನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಕರಿಬೇವು ಕತ್ತರಿಸಿಕೊಂಡು ಹಾಕಿ, ಜೀರಿಗೆ, ಇಂಗು, ಉಪ್ಪು ಹಾಕಿ. ಈಗ ಮಿಕ್ಸಿ ಜಾರ್‌ಗೆ ಕೊತ್ತಂಬರಿ ಸೊಪ್ಪು ಹಾಗೂ ಸ್ವಲ್ಪ ಪುದಿನ ಸೊಪ್ಪು, ಹಸಿ ಮೆಣಸು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನೀರು ಹಾಕದೆ ರುಬ್ಬಿಕೊಳ್ಳಬೇಕು.
ಈ ರೆಡಿ ಮಾಡಿದ ಹಿಟ್ಟಿಗೆ ಎಣ್ಣೆಯನ್ನು ಹಾಕಿಕೊಳ್ಳಿ. 3 ಸ್ಪೂನ್ ಎಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ರುಬ್ಬಿಕೊಂಡ ಪುದಿನ, ಕೊತ್ತಂಬರಿ ಪೇಸ್ಟ್ ಅನ್ನು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಬೇಕು. ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಹದ ಮಾಡಿಕೊಳ್ಳಬೇಕು. ಈ ಹಿಟ್ಟು ತೀರ ಗಟ್ಟಿಯಾಗಬಾರದು, ಗಟ್ಟಿಯಾದರೆ ಒಡೆಯುತ್ತದೆ, ನೀರಾದರೆ ಪೂರಿಯಾಗಿ ಉಬ್ಬುತ್ತದೆ. ಸರಿಯಾದ ಹದಕ್ಕೆ ಹಿಟ್ಟು ಮಾಡಿ.
ಈಗ ಒಂದು ಪ್ಲಾಸ್ಟಿಕ್‌ಗೆ ಎಣ್ಣೆ ಹಚ್ಚಿಕೊಂಡು ಈ ಹಿಟ್ಟನ್ನು ಹಾಕಿ ತಟ್ಟಿಕೊಳ್ಳಬೇಕು, ಹೆಚ್ಚು ದಪ್ಪ ಹಾಗೂ ತೆಳುವಾಗಿ ಇಲ್ಲದೆ ಒಂದು ಮಧ್ಯಮ ಹದದಲ್ಲಿ ನಿಪ್ಪಟ್ಟು ತಟ್ಟಿಕೊಳ್ಳಬೇಕು. ಈಗ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಅದಕ್ಕೆ ಒಂದೊಂದೆ ನಿಪ್ಪಟ್ಟು ಹಾಕಿ ಕರಿದುಕೊಳ್ಳಬೇಕು. ಎರಡು ಕಡೆ ಕರದ ಬಳಿಕ ಎಣ್ಣೆಯಿಂದ ತೆಗೆದಿಟ್ಟುಕೊಳ್ಳಬೇಕು.
ಇಷ್ಟಾದರೆ ನಿಮ್ಮ ಮುಂದೆ ಪುದಿನ ನಿಪ್ಪಟ್ಟು ರೆಡಿಯಾಗುತ್ತೆ. ನೀವು ಹೆಚ್ಚು ಪುದಿನ ಎಲೆಗಳ ಬಳಸಿದರೆ ಅದರ ಟೇಸ್ಟ್ ನಿಮ್ಮ ರುಚಿ ಹೆಚ್ಚಿಸಲಿದೆ ನೀವು ಕೂಡ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications