Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅರ್ಧ ಲೀಟರ್ ಹಾಲಿದ್ರೆ ಸಾಕು ಈ ಸ್ವೀಟ್ ಸಿದ್ದವಾಗುತ್ತೆ: ಒಮ್ಮೆ ಮಾಡಿದ್ರೆ ನಿತ್ಯವೂ ಇದೇ ಸಿಹಿ ಬಯಸೋದು ಖಚಿತ!
ಮನೆಯಲ್ಲಿ ನೀವು ವಿಶೇಷ ರುಚಿಯ ಸಿಹಿ ತಿಂಡಿ ಮಾಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ. ಹಾಗೆ ವಿಭಿನ್ನ ರುಚಿಯಲ್ಲಿ ಸಿಹಿ ತಿಂಡಿಗಳ ಮಾಡುವ ನಿಮ್ಮ ಆಸೆಯಲ್ಲಿ ಹಲವು ರೀತಿಯ ತಿಂಡಿಗಳ ಮಾಡಿರುತ್ತೀರಿ. ಹಬ್ಬಗಳು, ಶುಭ ದಿನದ ಸಮಯದಲ್ಲಿ ಮಾಡುವ ಸಿಹಿ ತಿಂಡಿಗಳು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮನೆಯಲ್ಲಿ ಮಾಡುವ ಎಲ್ಲಾ ತಿಂಡಿಗಳು ಸಹ ಬಹಳ ರುಚಿಕರವಾಗಿರಲಿದೆ.
ಇಂತಹ ರುಚಿ ರುಚಿಯ ಸಿಹಿಗಳ ಬಗೆಯಲ್ಲಿ ನಾವಿಲ್ಲಿ ಹಾಲಿನ ಪುಡ್ಡಿಂಗ್ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಹಾಲಿನ ಪುಡ್ಡಿಂಗ್ ರುಚಿ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯುವ ಮನಸಾಗೋದು ಖಚಿತ. ಅದ್ರಲ್ಲೂ ಬಹಳ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಇದನ್ನು ಮಾಡಬಹುದು. ನಾವಿಂದು ಈ ಹಾಲಿನ ಪುಡ್ಡಿಂಗ್ ಮಾಡುವ ಕುರಿತು ತಿಳಿದುಕೊಳ್ಳೋಣ.

ವಿವಿಧ ಬಗೆಯ ಸಿಹಿ ಸವಿದಿರುವ ನಿಮಗೆ ಈ ಹಾಲಿನ ಪುಡ್ಡಿಂಗ್ ಬಗ್ಗೆ ಗೊತ್ತಾ? ಕೆಲವೇ ವಸ್ತುಗಳ ಬಳಸಿಕೊಂಡು ಈ ಹಾಲಿನಿಂದ ಸ್ವೀಟ್ ಮಾಡಬಹುದು. ರೋಸ್ ಮಿಲ್ಕ್ ಇದ್ದರೆ ಕ್ಷಣದಲ್ಲಿ ಈ ಸಿಹಿ ಸಿದ್ದವಾಗುತ್ತೆ. ಹಾಲಿನ ಪುಡ್ಡಿಂಗ್ ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಲಿನ ಪುಡ್ಡಿಂಗ್ ಮಾಡಲು ಬೇಕಾಗುವ ಪದಾರ್ಥಗಳು
- ಹಾಲು - ಅರ್ಧ ಲೀಟರ್
- ರೋಸ್ ಮಿಲ್ಕ್ - 1/2 ಚಮಚ
- ಅಗರ್-ಚೀನಾ ಗ್ರಾಸ್- 5 ಗ್ರಾಮ್
- ಸಕ್ಕರೆ - 4 ಚಮಚ
- ನೀರು - 1/2 ಕಪ್
- ಸಕ್ಕರೆ- ರುಚಿಗೆ ತಕ್ಕಷ್ಟು
ಹಾಲಿನ ಪುಡ್ಡಿಂಗ್ ಮಾಡುವ ವಿಧಾನವೇನು?
ಮೊದಲು ಚೈನಾ ಗ್ರಾಸ್ ಅಗರ್ ಅಗರ್ ಪುಡಿಯನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪವೇ ಸ್ವಲ್ಪ ನೀರು ಹಾಕಿ ಕರಗಲು ಬಿಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಅರ್ಧ ಲೀಟರ್ ಹಾಲು ಹಾಕಿ ಕುದಿಬರಲು ಬಿಡಿ. ಹಾಲು ಕುದಿಬಂದಾಗ ಇದಕ್ಕೆ ಕಾಲು ಕಪ್ ಸಕ್ಕರೆ ಹಾಕಿಕೊಳ್ಳಿ. ಸಿಹಿಗೆ ಅನುಗುಣವಾಗಿ ಸಕ್ಕರೆ ಹಾಕಿ. ಈಗ ಇನ್ನೊಂದು ಕಡೆ ಒಲೆ ಮೇಲೆ ಚೈನಾ ಗ್ರಾಸ್ ಇಟ್ಟು ಕರಗಲು ಬಿಡಿ. ಸಣ್ಣ ಉರಿಯಲ್ಲಿ ಕರಗಲು ಬಿಡಿ.
ಚೈನಾ ಗ್ರಾಸ್ ಕರಗಿದ ಬಳಿಕ ಅದನ್ನು ಒಲೆ ಮೇಲೆ ಇರುವ ಹಾಲಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. 1 ನಿಮಿಷ ಮಿಕ್ಸ್ ಮಾಡಿದ ಬಳಿಕ ರೋಸ್ ಮಿಲ್ಕ್ ಎಸೆನ್ಸ್ ಹಾಕಿಕೊಳ್ಳಿ. ಅರ್ಧ ಸ್ಪೂನ್ ಸಾಕಾಗುತ್ತದೆ. ಇದಿಲ್ಲದಿದ್ದರೆ ರೋಸ್ ವಾಟರ್ ಹಾಕಿ ಅದಕ್ಕೆ ಫುಡ್ ಕಲರ್ ಹಾಕಿಕೊಳ್ಳಬಹುದು. ಇದೆಲ್ಲಾ ಹಾಕಿದ ಬಳಿಕ ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆಯಿಂದ ಈ ಮಿಶ್ರಣ ತೆಗೆದು ಜರಡಿ ಹಿಡಿದು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಮೇಲಿನ ಗುಳ್ಳೆಗಳು ಇಲ್ಲದಂತೆ ಮಾಡಿ. ಇದನ್ನು ತಣ್ಣಗಾಗಲು ಬಿಡಬೇಕು. ಪೂರ್ಣ ತಣ್ಣಗಾದ ಬಳಿಕ ಇದನ್ನು ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ರೋಸ್ ಮಿಲ್ಕ್ ಪುಡ್ಡಿಂಗ್ ಸಿದ್ದವಾಗುತ್ತೆ. ನೀವು ಸುಲಭವಾಗಿ ಇದನ್ನು ಮಾಡಬಹುದು. ಇದು ಬಹಳ ಮೃದುವಾಗಿ ಹಾಗೆ ರುಚಿ ರುಚಿಯಾಗಿ ಬರುವ ಸಿಹಿ ತಿಂಡಿಯಾಗಿರಲಿದೆ. ನೀವು ಬೇರೆ ಬೇರೆ ಕಲರ್ ಪುಡಿಯನ್ನು ಸಹ ಹಾಕಿ ಮಾಡಿಕೊಳ್ಳಬಹುದು. ನೀವು ಸಹ ಮನೆಯಲ್ಲಿ ಈ ತಿಂಡಿಯನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications