Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾಲಿನ ಪುಡಿ ಇದ್ದರೆ ಅದ್ಭುತ ಬರ್ಫಿ ಮಾಡಬಹುದು..! ಹೇಗೆ ನೋಡಿ
ನಾವು ಫ್ರೀ ಆಗಿದ್ದಾಗ ಮನೆಯಲ್ಲಿ ಯಾವುದಾದರು ಸಿಹಿ ಮಾಡುತ್ತೇವೆ. ಸಿಹಿ ಅಂದ್ರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಿಹಿ ಸವಿಯಲು ಎಲ್ಲರಿಗೂ ಇಷ್ಟ. ಆದ್ರೆ ಯಾವ ತಿಂಡಿ ಮಾಡಬೇಕು ಅನ್ನೋದೇ ಪ್ರಮುಖ ಪ್ರಶ್ನೆಯಾಗಿರುತ್ತೆ. ಆದ್ರೆ ಎಲ್ಲರು ಸುಲಭವಾಗಿ ರುಚಿ ರುಚಿಯಾದ ಸಿಹಿ ತಿಂಡಿಯನ್ನು ಮಾಡುವುದು ಹೇಗೆ ಎಂಬುದನ್ನೇ ಎಲ್ಲರು ಯೋಚಿಸುತ್ತಾರೆ.
ಆದ್ರೆ ಯಾವ ತಿಂಡಿ ಮಾಡಬೇಕು? ಸುಲಭವಾಗಿ ಮಾಡಬಹುದಾದ ತಿಂಡಿ ಯಾವುದು ಎಂಬ ಪ್ರಶ್ನೆ ಗೊಂದಲ ತರಿಸಬಹುದು. ಏಕೆಂದರೆ ಹಲವು ತಿಂಡಿಗಳು ಈ ಸಾಲಿನಲ್ಲಿವೆ. ಆಧ್ರೆ ನಾವಿಂದು ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡುವಂತಹ ಹಾಲಿನಿಂದ ಮಾಡುವ ರುಚಿಕರ ಬರ್ಫಿಯ ಕುರಿತು ತಿಳಿದುಕೊಳ್ಳೋಣ.

ಮಿಲ್ಕಿ ಬರ್ಫಿ ಹಾಲನ್ನು ಬಳಸಿ ಮಾಡಬಹುದಾದ ಅತ್ಯಂತ ರುಚಿಕರ ತಿಂಡಿ. ಮನೆಯಲ್ಲಿ ನಾವು ಸುಲಭವಾಗಿ ಮಾಡಬಹುದು. ಇದೇ ವಿಧಾನ ಬಳಸಿಕೊಂಡು ಮಾಡಿರುವ ಹತ್ತಾರು ಬರ್ಫಿಗಳನ್ನು ನಾವು ನೋಡಿರುತ್ತೇವೆ. ಆದ್ರೆ ಮನೆಯಲ್ಲಿ ಹಾಲನ್ನು ಬಳಸಿ ಈ ರೀತಿಯ ಬರ್ಫಿ ಮಾಡಿದರೆ ಮನೆ ಮಂದಿ ಎಲ್ಲ ಕುಳಿತು ಸವಿಯಬಹುದು. ಹಾಗಾದ್ರೆ ಈ ಬರ್ಫಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡು ಸರಿಯಾದ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಲಿನ ಬರ್ಫಿ ಮಾಡಲು ಬೇಕಾಗುವ ಪದಾರ್ಥಗಳಿ
- ಹಾಲಿನ ಪುಡಿ - 2 ಕಪ್
- ಹಾಲು- ಮುಕ್ಕಾಲು ಕಪ್
- ಸಕ್ಕರೆ- 1 ಕಪ್
- ಏಲಕ್ಕಿ ಪುಡಿ
- ಎಣ್ಣೆ
- ತುಪ್ಪ
ಹಾಲಿನ ಬರ್ಫಿ ಮಾಡುವ ವಿಧಾನವೇನು?
ಮೊದಲು ಒಂದು ಪಾನ್‌ಗೆ ಹಾಲಿನ ಪೌಡರ್ ಹಾಕಿಕೊಳ್ಳಿ. ಈಗ ಅದಕ್ಕೆ ಸಕ್ಕರೆ ಸೇರಿಸಿ, ಬಳಿಕ ಮುಕ್ಕಾಲು ಕಪ್ ಗಟ್ಟಿ ಹಾಲು ಹಾಕಿ, ನಂತರ 4 ಚಮಚ ತುಪ್ಪ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಗಂಟು ಇಲ್ಲದಂತೆ ಚೆನ್ನಾಗಿ ತಿರುಗಿಸುತ್ತಾ ಮಿಕ್ಸ್ ಮಾಡಿಕೊಳ್ಳಿ. ಇದು ದೋಸೆ ಹಿಟ್ಟಿನಂತೆ ಬರುತ್ತದೆ.
ನಂತರ ಇದನ್ನು ಒಲೆ ಮೇಲೆ ಇಟ್ಟು ಚೆನ್ನಾಗಿ ಕಾಯಿಸಿಕೊಳ್ಳಬೇಕು. ಒಲೆ ಮೇಲೆ ಇಟ್ಟು ಕಲಸಿಕೊಳ್ಳಲು ಆರಂಭಿಸಿದಾಗ ಗಟ್ಟಿಯಾಗಲು ಆರಂಭಿಸುತ್ತದೆ. ಒಟ್ಟು 5ರಿಂದ 6 ನಿಮಿಷ ಬಳಿಕ ಇದು ಗಟ್ಟಿಯಾಗುತ್ತದೆ. ಬಳಿಕ ಇದು ಚಪಾತಿ ಹಿಟ್ಟಿನಂತೆ ಹದವಾದಾಗ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ.
ಸಣ್ಣದಾಗಿ ತೆಗೆದುಕೊಂಡು ಕೈಯಲ್ಲಿ ಉಂಡೆ ಕಟ್ಟಲು ಸಾಧ್ಯವೇ ಎಂಬುದನ್ನು ಪರೀಕ್ಷಿಸಿ. ಉಂಡೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರೆ ಮತ್ತೆ 2 ನಿಮಿಷ ಕಾಯಿಸಿಕೊಳ್ಳಿ. ಹೀಗೆ ಉಂಡೆ ಕಟ್ಟಲು ಬರುವವರೆಗೂ ನೀವು ಕಾಯಿಸಿಕೊಳ್ಳುತ್ತಿರಿ. ಹಿಟ್ಟು ಹದವಾದ ನಂತರ ತಣ್ಣಗಾಗಲು ಇಡಿ. ಈಗ ಹಿಟ್ಟಿಗೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಇಡಿ.
ಈಗ ಬರ್ಫಿ ಮಾಡಲು ಸಿದ್ಧತೆ ಮಾಡಿಕೊಳ್ಳಿ. ಈಗ ಬಟರ್ ಪೇಪರ್ ಅಥವಾ ಸಾಮಾನ್ಯ ಪ್ಲಾಸ್ಟಿಕ್ ತೆಗೆದುಕೊಳ್ಳಿ. ಇದಕ್ಕೆ ತುಪ್ಪ ಅಥವಾ ಎಣ್ಣೆಯನ್ನು ಸವರಿ ಇಟ್ಟುಕೊಳ್ಳಿ. ಇದರ ಮೇಲೆ ಬರ್ಫಿ ಹಿಟ್ಟು ಹಾಕಿ 10 ನಿಮಿಷ ಬಿಡಿ. ನಂತರ ಚೆನ್ನಾಗಿ ನಾದಕೊಳ್ಳಬೇಕು, ಕೈಯಿಂದ ಹದ ಮಾಡುವುದರಿಂದ ಹಿಟ್ಟು ಮೃದುವಾಗಬೇಕು.
ಚಪಾತಿಯ ಮಣೆಯ ಮೇಲೂ ಹದ ಮಾಡಿಕೊಳ್ಳಬಹುದು. ಹಿಟ್ಟು ಮೃದುವಾದ ಬಳಿಕ, ಪ್ಲಾಸ್ಟಿಕ್ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿಕೊಂಡು ಹಿಟ್ಟು ಹಾಕಿ ಚಪಾತಿ ಲಟ್ಟಿಸುವಂತೆ ಲಟ್ಟಿಸಿ, ಆದ್ರೆ ಚಪಾತಿಯಂತೆ ತೆಳುವಾಗಿ ಲಟ್ಟಿಸಬಾರದು ದಪ್ಪವಾಗಿ ಇರಲಿ, ನಿಮಗೆ ಬರ್ಫಿ ಎಷ್ಟು ದಪ್ಪ ಬೇಕೋ ಅಷ್ಟು ದಪ್ಪವಾಗಿ ಲಟ್ಟಿಸಿಕೊಳ್ಳಿ. ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಹಾಲಿನ ಬರ್ಫಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications