Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉದ್ದು ಬಳಸದೆ ಮಾಡಿ ಈ ಮೆಂತೆ ದೋಸೆ: ಎಷ್ಟು ಸುಲಭದ ರೆಸಿಪಿ ಗೊತ್ತಾ?
ದೋಸೆ ಸವಿಯೋದು ಅಂದ್ರೆ ಎಲ್ಲರಿಗೂ ಬಹಳ ಇಷ್ಟವಾಗುತ್ತೆ. ಅದ್ರಲ್ಲೂ ವಿವಿಧ ರುಚಿಯ ದೋಸೆಗಳಿಗೆ ಜನರು ಫಿದಾ ಆಗಿರುತ್ತಾರೆ. ಹೋಟೆಲ್‌ಗಳಲ್ಲಿಯೂ ಕೂಡ ಹಲವು ವಿಧವಾದ ದೋಸೆಗಳು ನಿಮ್ಮ ಬಾಯಲ್ಲಿ ನೀರು ತರಿಸುತ್ತವೆ. ಹಲವರು ಫ್ರೀ ಸಮಯದಲ್ಲೆಲ್ಲ ದೋಸೆ ಸವಿಯಲು ಇಷ್ಟಪಡುತ್ತಾರೆ. ಹಾಗೆ ದೋಸೆ ಮಾಡುವ ಕ್ಯಾಂಟೀನ್‌ಗಳ ಹುಡುಕಿಕೊಂಡು ಹೋಗಿ ಸವಿಯುವುದು ಕೂಡ ನೋಡಿದ್ದೇವೆ.
ಇನ್ನು ಮನೆಯಲ್ಲೂ ಕೂಡ ನೀವು ಹಲವು ರೀತಿಯ ದೋಸೆಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಮಸಾಲೆ ದೋಸೆ, ಖಾಲಿ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ರವೆ ದೋಸೆ ಸೇರಿ ಹಲವು ವಿಧವಾದ ದೋಸೆಗಳ ಮಾಡಿ ಸವಿದಿರುತ್ತೀರಿ. ದೋಸೆಗಳ ಮಾಡುವ ವಿಧಾನವೇನು ಎಂಬುದನ್ನು ಕೂಡ ನೀವು ತಿಳಿದಿರುತ್ತೀರಿ.

ದೋಸೆ ಮಾಡಲು ಹಿಂದಿನ ದಿನವೇ ಉದ್ದು, ಅಕ್ಕಿ, ಮೆಂತ್ಯ ನೆನೆಸಿಟ್ಟು. ಹದವಾಗಿ ಹಿಟ್ಟು ಮಾಡಿಕೊಂಡು, ಒಂದು ದಿನ ಬಿಟ್ಟು ಮಾರನೇ ದಿನ ದೋಸೆ ಮಾಡುತ್ತೀರಿ. ಇದೇ ವಿಧಾನದಲ್ಲೇ ಬಹುತೇಕ ದೋಸೆಗಳ ಸವಿಯುತ್ತೀರಿ. ಆದ್ರೆ ಕೆಲವೊಮ್ಮೆ ವಿಭಿನ್ನ ದೋಸೆಗಳ ಮಾಡುವ ವಿಧಾನ ಮಾತ್ರ ಬದಲಾಗಲಿದೆ. ಇಂದು ನಾವು ಸಹ ಇಂತಹ ವಿಭಿನ್ನ ದೋಸೆಯನ್ನು ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಅದ್ರಲ್ಲೂ ನಾವಿಂದು ಸುಲಭವಾಗಿ ಮೆಂತೆ ದೋಸೆ ಮಾಡುವ ಕುರಿತು ತಿಳಿಯೋಣ. ಈ ದೋಸೆ ಮಾಡಲು ಕೇವಲ 2 ವಸ್ತುಗಳಿದ್ದರೆ ಸಾಕಾಗುತ್ತದೆ. ಹಾಗಾದ್ರೆ ಈ ಮೆಂತ್ಯ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೆಂತ್ಯ ದೋಸೆ ಮಾಡಲು ಯಾವೆಲ್ಲಾ ಪದಾರ್ಥ ಬೇಕು?
- ಇಡ್ಲಿ ಅಕ್ಕಿ
- ಮೆಂತ್ಯ
- ಉಪ್ಪು
- ಎಣ್ಣೆ
ಮೆಂತ್ಯ ದೋಸೆ ಮಾಡುವ ವಿಧಾನವೇನು?
ಮೊದಲು ಇಡ್ಲಿ ಅಕ್ಕಿಯನ್ನು ಬೌಲ್ ನಲ್ಲಿ ಹಾಕಿ ತೊಳೆದು ನೆನೆಸಿಡಬೇಕು. ಈಗ ಮೆಂತ್ಯವನ್ನ ಕೂಡ ನೀರಿನಲ್ಲಿ ನೆನೆಸಿಡಬೇಕು. 5 ಗಂಟೆಗಳ ಕಾಲ ನೆನೆಯಲು ಬಿಡಬೇಕು. ಇದಾದ ಬಳಿಕ ಮೆಂತ್ಯವನ್ನು ಮೊದಲು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ರುಬ್ಬಬೇಕು. ನೀರು ಹಾಕಿಕೊಂಡು ತೆಳುವಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಮತ್ತೆ ಮಿಕ್ಸಿ ಜಾರ್‌ಗೆ ಅಕ್ಕಿ ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಮೆಂತ್ಯದ ಹಿಟ್ಟಿನೊಂದಿಗೆ ಸೇರಿಸಿಕೊಳ್ಳಿ.
ಈಗ ಹಿಟ್ಟನ್ನು ಕೈಯಿಂದಲೇ ಚೆನ್ನಾಗಿ ಕಲಸಿಕೊಳ್ಳಬೇಕು. 5 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ರಾತ್ರಿ ಇಡಿ ಹುಳಿ ಬರಲು ಬಿಡಿ. ಮಾರನೆ ದಿನ ಇದು ಸ್ವಲ್ಪ ಗಟ್ಟಿಯಾಗಿರುತ್ತೆ. ಈಗ ಅಗತ್ಯ ಉಪ್ಪು ಹಾಗೂ ನೀರು ಹಾಕಿಕೊಂಡು ಮತ್ತೆ ಚೆನ್ನಾಗಿ ಕಲಸಿಕೊಳ್ಳಬೇಕು.
ದಪ್ಪವಾಗಿರುವ ಕಾರಣ ಸ್ವಲ್ಪ ನೀರು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಈಗ ಒಲೆ ಮೇಲೆ ಕಾವಲಿ ಇಟ್ಟು ಸಾಮಾನ್ಯ ದೋಸೆಯಂತೆಯೇ ಇದನ್ನು ಕೂಡ ಮಾಡಿಕೊಳ್ಳಿ. ಇಷ್ಟಾದರೆ ಮೆಂತ್ಯ ದೋಸೆ ರೆಡಿಯಾಗುತ್ತದೆ. ಕೇವಲ 2 ವಸ್ತುಗಳಿಂದ ಈ ದೋಸೆ ಮಾಡಬಹುದು. ಉದ್ದು ಬಳಸುವ ಅಗತ್ಯವಿಲ್ಲ. ಹಾಗೆ ಸುಲಭವಾಗಿಯೂ ಇದನ್ನು ಮಾಡಿ ಮುಗಿಸಬಹುದು. ರುಚಿ ಕೂಡ ಅದ್ಭುತವಾಗಿರಲಿದೆ. ನೀವು ಕೂಡ ಬ್ರೇಕ್‌ಫಾಸ್ಟ್‌ಗೆ ಈ ದೋಸೆ ಟ್ರೈ ಮಾಡಿ ನೋಡಿ. ಇದರ ಜೊತೆಗೆ ತುಪ್ಪ ಅಥವಾ ಯಾವುದಾದರು ವಸ್ತುವಿನಿಂದ ಮಾಡಲಾದ ಚಟ್ನಿ ಇದ್ದರೆ ರುಚಿ ದುಪ್ಪಟ್ಟಾಗುವುದು ಖಚಿತ. ಹಾಗೆ ಈ ದೋಸೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ.



Click it and Unblock the Notifications