Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
5 ನಿಮಿಷದಲ್ಲಿ ಹೊಸ ರೀತಿಯ ಮೆಂತ್ಯ ಬಾತ್ ಮಾಡೋದು ಹೇಗೆ? ಇದು ಸುಲಭದ ತಿಂಡಿ!
ಬೆಳಗ್ಗೆ ನೀವು ತಿಂಡಿಗೆ ಆರೋಗ್ಯಕರವಾದ ತಿಂಡಿ ಸವಿಯಲು ಬಹಳ ಇಷ್ಟಪಡುವ ಮಂದಿ ಆಗಿದ್ದರೆ ಹೊಸ ರೀತಿ ತಿಂಡಿ ಪ್ರಯತ್ನಿಸಿ. ಅದ್ರಲ್ಲೂ ಬಹಳ ರುಚಿಕರವಾದ ತಿಂಡಿಗಳ ಮಾಡಿ ಸವಿಯಲು ನೀವು ಇಷ್ಟಪಡಬಹುದು. ಸಾಮಾನ್ಯವಾಗಿ ರೈಸ್ ಬಳಸಿ ಮಾಡುವಂತಹ ರುಚಿ ರುಚಿಯ ರೈಸ್‌ಬಾತ್‌ಗಳನ್ನು ನೀವು ಮಾಡಿಯೇ ಮಾಡುತ್ತೀರಿ. ಅದ್ರಲ್ಲೂ ರುಚಿ ರುಚಿಯ ಈ ರೈಸ್ ಬಾತ್‌ನಲ್ಲೂ ಹಲವು ವಿಧಾನಗಳಿವೆ.
ನಾವು ವಿಶೇಷ ರುಚಿಯ ಹಲವು ರೈಸ್ ಬಾತ್ ಮಾಡಿ ಸವಿಯುವ ಮುನ್ನ ಈ ಮೆಂತ್ಯ ಸೊಪ್ಪಿನ ಅದ್ಭುತ ರುಚಿಯ ಮೆಂತ್ಯ ರೈಸ್ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಅದ್ರಲ್ಲು ಸುಲಭವಾಗಿ ನಾವಿಂದು ಮೆಂತ್ಯ ಸೊಪ್ಪಿನ ಈ ರೈಸ್ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಮೆಂತ್ಯ ಸೊಪ್ಪು ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ. ಅದ್ರಲ್ಲೂ ಮಕ್ಕಳಿಗೆ ಮೆಂತ್ಯ ಸೊಪ್ಪು ಬಹಳ ಪ್ರಯೋಜನಕಾರಿಯಾಗಿರಲಿದೆ. ಅವರ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ವಿಟಮಿನ್‌ಗಳನ್ನು, ಒದಗಿಸಲಿದೆ. ಹೀಗಾಗಿ ಮೆಂತ್ಯ ಸೊಪ್ಪಿನ ಚಟ್ನಿ, ಸಾಂಬಾರ್, ಹಾಗೆ ಗ್ರೇವಿ ಮಾಡುವುದು ಸಾಮಾನ್ಯ. ಆದ್ರೆ ನಾವಿಂದು ಈ ರೀತಿಯಾಗಿ ರೈಸ್ ಬಾತ್ ಮಾಡಿ ಸವಿದು ನೋಡೋಣ.
ನಾವಿಲ್ಲಿ ಮೆಂತ್ಯ ಸೊಪ್ಪಿನಿಂದ ಮಾಡುವ ಹೊಸ ರೀತಿಯ ರೈಸ್ ಬಾತ್ ಕುರಿತು ತಿಳಿಯೋಣ, ಈ ರೈಸ್ ಬಾತ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೆಂತ್ಯ ರೈಸ್ ಬಾತ್ ಮಾಡಲು ಬೇಕಾಗುವ ಪದಾರ್ಥಗಳು
- ಮೆಂತ್ಯ ಸೊಪ್ಪು
- ಅನ್ನ
- ದನಿಯ ಕಾಳು
- ಒಣ ಮೆಣಸು
- ಕಡಲೆ ಬೇಳೆ
- ಉದ್ದಿನ ಬೇಳೆ
- ಸಾಸಿವೆ
- ಕರಿಬೇವು
- ಈರುಳ್ಳಿ
- ಟೊಮೆಟೋ
- ಹುಣಸೆ ಹುಳಿ
- ಬೆಲ್ಲ
- ಉಪ್ಪು
- ಎಣ್ಣೆ
ಮೆಂತ್ಯ ರೈಸ್ ಬಾತ್ ಮಾಡುವ ವಿಧಾನವೇನು?
ಮೊದಲು ಈ ಮೆಂತ್ಯ ಸೊಪ್ಪನ್ನು ಬಿಡಿಸಿಕೊಂಡು ಕಡ್ಡಿಗಳ ಬೇರೆ ಮಾಡಿ ಬರಿ ಎಲೆಯನ್ನು ಮಾತ್ರ ತೆಗೆದಿಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ದನಿಯಾ ಕಾಳು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಎಣ್ಣೆ ಹಾಕದಯೆ ಹಾಗೆಯೇ ಹುರಿದುಕೊಳ್ಳಿ. ಈಗ ಹುರಿದ ಈ ಪದಾರ್ಥಗಳು ತಣ್ಣಗಾಗಲು ಬಿಟ್ಟು ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ.
ಮಿಕ್ಸಿ ಜಾರ್‌ಗೆ ಹಾಕಿ ನೀರು ಹಾಕದೆ ಪುಡಿ ಮಾಡಿಕೊಳ್ಳಿ. ನುಣ್ಣಗೆ ಸಾಂಬಾರ್ ಪುಡಿಯಂತೆ ಇದು ಬರಬೇಕು. ಈಗ ಈ ಬಾಣಲೆಗೆ ಎಣ್ಣೆ ಹಾಕಿಕೊಂಡು ಕಡಲೆ ಬೇಳೆ, ಸಾಸಿವೆ, ಉದ್ದಿನ ಬೇಳೆ, ಕತ್ತರಿಸಿದ ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ಕರಿಬೇವು, ಒಂದು ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ಕತ್ತರಿಸಿಕೊಂಡಿರುವ ಮೆಂತ್ಯ ಸೊಪ್ಪನ್ನು ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಮೆಂತ್ಯ ಸೊಪ್ಪು ಚೆನ್ನಾಗಿ ಬಾಡಿಕೊಂಡ ಬಳಿಕ ಒಂದು ಟೊಮೆಟೋ ಅನ್ನು ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಬೇಕು. ನಂತರ ಉಪ್ಪು, ಅರಶಿಣ ಕೂಡ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈ ಮೆಂತ್ಯ ಸೊಪ್ಪು ಸ್ವಲ್ಪ ಕಹಿ ಬರಬಹುದು ಹೀಗಾಗಿ ಪುಡಿ ಬೆಲ್ಲ ಸಹ ಹಾಕಿ. ಹಾಗೆ ಹುಣಸೆ ಹುಳಿಯನ್ನು ಅದ್ದಿಕೊಂಡು ಅದರ ನೀರು ಸಹ ಹಾಕಿಕೊಂಡು ಚೆನ್ನಾಗಿ ಬೇಯಲು ಬಿಡಿ.
ಅನಂರ ಮೊದಲು ರುಬ್ಬಿಕೊಂಡಿದ್ದ ಮಸಾಲೆಯನ್ನು ಕೂಡ ಇದಕ್ಕೆ ಹಾಕಿಕೊಳ್ಳಿ. ಬಳಿಕ ತೆಂಗಿನ ತುರಿ ಕೂಡ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ 1 ನಿಮಿಷದ ಬಳಿಕ ಮೊದಲು ಮಾಡಿಟ್ಟಿರುವ ಹುಡಿ ಹುಡಿಯಾದ ಅನ್ನವನ್ನು ಸಹ ಇದಕ್ಕೆ ಹಾಕಿ ಒಮ್ಮೆ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೆಂತ್ಯ ರಸ್ ಬಾತ್ ರೆಡಿಯಾಗಲಿದೆ. ನೀವು ಕೂಡ ಇದನ್ನು ಮನೆಯಲ್ಲಿ ಬ್ರೇಕ್ ಫಾಸ್ಟ್‌ಗೆ ಮಾಡಿ ನೋಡಿ.



Click it and Unblock the Notifications