Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮನೆಯಲ್ಲೇ ಮದುವೆ ಮನೆ ಮೆದು ವಡೆ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ
ಮೆದು ವಡೆ ದಕ್ಷಿಣ ಭಾರತದ ಜನಪ್ರಿಯ ಸ್ನ್ಯಾಕ್ಸ್. ಇದು ತನ್ನ ಅದ್ಭುತ ಟೇಸ್ಟ್ ಮತ್ತು ಸುಲಭ ತಯಾರಿಕೆಯಿಂದ ಎಲ್ಲರ ಅಚ್ಚುಮೆಚ್ಚಿನ ತಿನಿಸಾಗಿದೆ. ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿ, ಡೋನಟ್ ಆಕಾರದಲ್ಲಿರುವ ಈ ವಡೆಯು (medu vada), ಬಿಸಿ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಹೇಳಿ ಮಾಡಿಸಿದ ತಿಂಡಿ. ಇದು ಕೇವಲ ಆಹಾರವಲ್ಲ. ಇದು ದಕ್ಷಿಣ ಭಾರತದ ಆತಿಥ್ಯ (south indian snack) ಮತ್ತು ಸಂಸ್ಕೃತಿಯ ಪ್ರತೀಕ.
ಹೆಸರೇ ಹೇಳುವಂತೆ ಮೆದು ವಡೆಯು ಮೃದು ಆಗಿರುತ್ತದೆ. ಎಂಬ ಇದು ಅದರ ಗುಣಲಕ್ಷಣವನ್ನು ಎತ್ತಿ ತೋರಿಸುತ್ತದೆ. ಉತ್ತಮ ಗುಣಮಟ್ಟದ ಮೆದು ವಡೆಯ ಗುಟ್ಟು, ಅದರ ಹಿಟ್ಟಿನಲ್ಲಿದೆ. ಉದ್ದಿನ ಬೇಳೆಯನ್ನು ಸರಿಯಾಗಿ ರುಬ್ಬಿ, ಅದನ್ನು ಚೆನ್ನಾಗಿ ಬೆರೆಸುವುದರಿಂದ ಹಿಟ್ಟು ಗಾಳಿಯಾಡುತ್ತದೆ. ಇದು ವಡೆಗಳನ್ನು ಮೃದುವಾಗಿ ಮತ್ತು ಹಗುರವಾಗಿ ಮಾಡುತ್ತದೆ.

ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಮತ್ತು ಕಾಳುಮೆಣಸು ಸೇರಿದಂತೆ ಇನ್ನಿತರ ಪದಾರ್ಥಗಳ ಸಮ್ಮಿಲನವು ವಡೆಗೆ ಸ್ಪೆಷಲ್ ಪರಿಮಳ ಮತ್ತು ಟೇಸ್ಟ್ ನೀಡುತ್ತದೆ. ಇದು ಕೇವಲ ಹಿಟ್ಟಿನ ತಿನಿಸಾಗದೆ, ಸ್ವಾದಿಷ್ಟಕರ ಫೀಲ್ ನೀಡುತ್ತದೆ. ನೀವು ಮನೆಯಲ್ಲೇ ಮೆದು ವಡೆ (medu vada recipe) ತಯಾರಿಸಲು ಬೇಕಾದ ಪದಾರ್ಥಗಳು ಮತ್ತು ಸುಲಭ ವಿಧಾನ ಇಲ್ಲಿದೆ.
ಮೆದು ವಡೆ ತಯಾರಿಸಲು ಬೇಕಾಗುವ ಪದಾರ್ಥಗಳು
• ಉದ್ದಿನ ಬೇಳೆ - ಒಂದು ಕಪ್
• ಹಸಿ ಮೆಣಸಿನಕಾಯಿ - ಎರಡು
• ಶುಂಠಿ - ಒಂದು ಇಂಚು
• ಈರುಳ್ಳಿ - ಒಂದು ಅಥವಾ ಎರಡು
• ಕರಿಬೇವಿನ ಎಲೆ - ಸ್ವಲ್ಪ
• ಕೊತ್ತಂಬರಿ ಸೊಪ್ಪು - ಎರಡು ಚಮಚ
• ಕಾಳುಮೆಣಸು - ಅರ್ಧ ಚಮಚ
• ಇಂಗು - ಒಂದು ಚಿಟಿಕೆ
• ಉಪ್ಪು - ರುಚಿಗೆ ತಕ್ಕಷ್ಟು
• ಎಣ್ಣೆ - ಕರಿಯಲು
ಮೆದು ವಡೆ ಮಾಡುವ ಸರಳ ವಿಧಾನ
ಹಂತ 1: ಮೊದಲು ಉದ್ದಿನ ಬೇಳೆಯನ್ನು ನೆನೆಸಿ, ರುಬ್ಬಿಕೊಳ್ಳಿ. ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆಯಿರಿ. ನಾಲ್ಕರಿಂದ ಐದು ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಿ. ನೆನೆಸಿದ ಬೇಳೆಯಿಂದ ನೀರನ್ನು ಸಂಪೂರ್ಣವಾಗಿ ಹಿಂಡಿ ತೆಗೆಯಿರಿ. ಬೇಳೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ, ಹೆಚ್ಚು ನೀರು ಸೇರಿಸದೆ ನಯವಾಗಿ ಮತ್ತು ಉಬ್ಬಿದ ಹಿಟ್ಟಿನಂತೆ ರುಬ್ಬಿಕೊಳ್ಳಿ. ಹಿಟ್ಟು ಗಟ್ಟಿಯಾಗಿರಬೇಕು, ನೀರಾಗಬಾರದು. ಇದು ವಡೆಗಳು ಎಣ್ಣೆ ಹೀರುವುದನ್ನು ತಡೆಯುತ್ತದೆ.
ಹಂತ 2: ಈಗ ಹಿಟ್ಟನ್ನು ತಯಾರಿಸಿ. ರುಬ್ಬಿದ ಹಿಟ್ಟಿಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಕಾಳುಮೆಣಸು, ಇಂಗು, ಈರುಳ್ಳಿ ಮತ್ತು ಉಪ್ಪನ್ನು ಹಾಕಿ. ಈ ಮಿಶ್ರಣವನ್ನು ನಿಮ್ಮ ಕೈಯಿಂದ ಅಥವಾ ದೊಡ್ಡ ಸ್ಪೂನ್‌ನಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಬೆರೆಸಿ. ಹಿಟ್ಟಿಗೆ ಗಾಳಿಯಾಡುವಂತೆ ಮಾಡಿ. ಹಿಟ್ಟು ಹಗುರವಾದರೆ ವಡೆಗಳು ಮೃದುವಾಗಿ ಬರುತ್ತವೆ.

ಹಂತ 3: ನಿಮ್ಮ ಕೈಗಳನ್ನು ಅಥವಾ ಒಂದು ಪ್ಲಾಸ್ಟಿಕ್ ಶೀಟ್ ಒದ್ದೆ ಮಾಡಿಕೊಂಡು, ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಡೋನಟ್ ಆಕಾರಕ್ಕೆ ತನ್ನಿ. ಮಧ್ಯದಲ್ಲಿ ಒಂದು ರಂಧ್ರ ಮಾಡಿ. ಈ ತೂತು ವಡೆಗಳು ಸಮವಾಗಿ ಬೇಯಲು ಸಹಾಯ ಮಾಡುತ್ತದೆ.
ಹಂತ 4: ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಸರಿಯಾಗಿ ಕಾದ ಬಳಿಕ, ವಡೆಗಳನ್ನು ನಿಧಾನವಾಗಿ ಎಣ್ಣೆಗೆ ಹಾಕಿ. ಮಧ್ಯಮ ಉರಿಯಲ್ಲಿ ವಡೆಗಳನ್ನು ಎರಡೂ ಬದಿಗಳಲ್ಲಿ ಗರಿಗರಿಯಾಗಿ ಕರಿಯಿರಿ.
ಹಂತ 5: ಎಣ್ಣೆಯಿಂದ ತೆಗೆದ ವಡೆಗಳನ್ನು ಟಿಶ್ಯೂ ಪೇಪರ್ ಮೇಲೆ ಇಡಿ. ಆಗ ಹೆಚ್ಚುವರಿ ಎಣ್ಣೆ ಹೋಗುತ್ತೆ. ಬಿಸಿಯಾದ ಈ ಮೆದು ವಡೆಗಳನ್ನು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ ಸವಿಯಬಹುದು.



Click it and Unblock the Notifications