ಅದ್ಭುತ ರುಚಿಯ ನಾಟಿ ಶೈಲಿಯ ಮಶ್ರೂಮ್ ಸಾರು ಮಾಡಿ..! ಇಲ್ಲಿದೆ ರೆಸಿಪಿ.!

Posted By:

ನಾವು ಅಂಗಡಿಯಲ್ಲಿ ಸಿಗುವ ಮಶ್ರೂಮ್ ತಂದು ಮಶ್ರೂಮ್ ಬಿರಿಯಾನಿ ಮಾಡಿ ಸವಿದಿರುತ್ತೇವೆ. ಇಲ್ಲವೆ ಈ ಅಣಬೆಯಿಂದ ಗ್ರೇವಿ ಮಾಡಿ ಚಪಾತಿ, ಅನ್ನದ ಜೊತೆ ಸವಿಯುತ್ತೇವೆ. ಮಶ್ರೂಮ್ ಬಿರಿಯಾನಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ವೆಜ್ ಪ್ರಿಯರು ಹಾಗೂ ನಾನ್‌ ವೆಚ್ ಪ್ರಿಯರು ಕೂಡ ಈ ಮಶ್ರೂಮ್ ಬಿರಿಯಾನಿಯನ್ನ ಬಾಯಿ ಚಪ್ಪರಿಸಿ ಸವಿಯುತ್ತಾರೆ.

ಆದ್ರೆ ನಾವಿ ಈ ಮಶ್ರೂಮ್‌ನಲ್ಲಿ ಸಾರು ಮಾಡುವುದು ಬಹಳ ಕಡಿಮೆ. ಏಕೆಂದರೆ ಸಾರು ಮಾಡುವುದಕ್ಕಿಂತ ಅದನ್ನು ಗ್ರೇವಿ, ಕರಿ ಮಾಡುವುದು ಹೆಚ್ಚು ರುಚಿ ನೀಡುವ ವಿಧಾನ. ಆದ್ರೆ ನಾವಿಂದು ಅಣಬೆಯ ಅದ್ಭುತ ರುಚಿಯ ಸಾರು ಮಾಡುವುದು ಹೇಗೆ ಎಂಬುದನ್ನು ನೋಡೋಣ.

How To Make Mashroom Curry Recipe At Home In Kannada

ಮಶ್ರೂಮ್ ಸಾರು ಮಾಡುವುದು ಬಹಳ ಸುಲಭ. ಹಾಗೆ ಬಹಳ ರುಚಿಯೂ ಲೂಡ ಹೌದು. ಏಕೆಂದರೆ ಅಣಬೆಯಿಂದ ಮಾಡಿದ ಪ್ರತಿಯೊಂದು ಖಾದ್ಯವೂ ಕೂಡ ರುಚಿಕರವಾಗಿರುತ್ತೆ. ಹಾಗೆ ಅಣಬೆಯು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ತುಂಬಾನೆ ಉತ್ತಮ.

ಹಾಗಾದ್ರೆ ನಾವಿಂದು ಅಣಬೆಯಿಂದ ಸಾರು ಮಾಡುವುದು ಹೇಗೆ, ನಾಟಿ ಶೈಲಿಯಲ್ಲಿ ಈ ಅಣಬೆ ಸಾರು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಸರಿಯಾದ ವಿಧಾನವೇನು? ಎಷ್ಟು ಸಮಯ ಬೇಕಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಅಣಬೆ ಸಾರು ಮಾಡಲು ಬೇಕಾಗುವ ಪದಾರ್ಥಗಳು

  • ಅಣಬೆ - 1 ಪ್ಯಾಕ್
  • ಅರಶಿನ
  • ಈರುಳ್ಳಿ-2
  • ಕರಿಬೇವು
  • ಕೊತ್ತಂಬರಿ ಸೊಪ್ಪು
  • ಶುಂಠಿ-1 ಇಂಚು
  • ಬೆಳ್ಳುಳ್ಳಿ
  • ದಾಲ್ಚಿನ್ನಿ
  • ಲವಂಗ
  • ಮೆಣಸು
  • ಗಸಗಸೆ - 1/2 ಟೀಸ್ಪೂನ್
  • ಹುರಿಗಡಲೆ
  • ತೆಂಗಿನಕಾಯಿ - 1/2 ಕಪ್
  • ಟೊಮೆಟೊ - 1
  • ಪುದಿನಾ
  • ಉಪ್ಪು
  • ಖಾರದ ಪುಡಿ
  • ಧನಿಯಾ
  • ಎಣ್ಣೆ

ಅಣಬೆ ಸಾರು ಮಾಡುವ ವಿಧಾನವೇನು?

ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎರಡು ಸ್ಪೂನ್ ಎಣ್ಣೆ ಹಾಕಿ. ಬಳಿಕ ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಮೆಣಸು, 1 ಈರುಳ್ಳಿ, ಪುದಿನಾ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಕೊತ್ತಂಬರಿ, ಗಸೆ ಗಸೆ, ಹುರಿಗಡಲೆ, ತೆಂಗಿನಕಾಯಿ ತುರಿ ಸಹ ಹಾಕಿ ಫ್ರೈ ಮಾಡಿಕೊಳ್ಳಿ.

ನಂತರ ಒಂದು ಟಿಮೆಟೋ ಹಾಕಿ, ಉಪ್ಪು ಹಾಕಿ ಫ್ರೈ ಮಾಡಿಕೊಂಡು ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಇದನ್ನು ರುಬ್ಬಿಕೊಳ್ಳಬೇಕು. ಆದ್ರೆ ಅದಕ್ಕೂ ಮೊದಲು ಮಶ್ರೂಮ್ ಅನ್ನು ಕ್ಲೀನ್ ಮಾಡಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ.

ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಹಸಿಮೆಣಸು, ಕರಿಬೇವು, ಈರುಳ್ಳಿ ಹಾಕಿ ಫ್ರೈ ‍ಮಾಡಿ, ಬಳಿಕ ಇದಕ್ಕೆ ಹೆಚ್ಚಿಕೊಂಡಿರುವ ಮಶ್ರೂಮ್ ಹಾಕಿಕೊಳ್ಳಿ. ಇದಕ್ಕೆ ಉಪ್ಪು, ಅರಶಿನ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ತಣ್ಣಗಾಗಲು ಇಟ್ಟಿದ್ದ ಮಸಾಲೆಗಳನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ.

ರುಬ್ಬಿದ ಮಸಾಲೆಯನ್ನು ಕುಕ್ಕರ್‌ಗೆ ಹಾಕಿ ತಿರುಗಿಸಿಕೊಳ್ಳಿ. ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ 2 ನಿಮಿಷ ಹಾಗೆಯೇ ಬಿಡಿ. ಬಳಿಕ ನಿಮಗೆ ಎಷ್ಟು ಬೇಕೋ ಅಷ್ಟು ನೀರು ಹಾಕಿಕೊಳ್ಳಿ. ಗಟ್ಟಿಯಾಗಿದ್ದರೆ ಚೆನ್ನಾಗಿರುತ್ತದೆ. ನೀರು ಹಾಕಿದ ಬಳಿಕ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ.

2 ಸಿಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಸಣ್ಣ ಉರಿಯಲ್ಲಿ ಇಡಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಸದ್ಭುತ ರುಚಿಯ ಮಶ್ರೂಮ್ ಸಾರು ರೆಡಿಯಾಗುತ್ತದೆ. ಇದು ಯಾವುದೇ ಖಾದ್ಯದ ಜೊತೆಗೂ ಸವಿಯಲು ಬೊಂಬಾಟ್ ರುಚಿ ನೀಡಲಿದೆ. ನೀವು ಸಹ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.

[ of 5 - Users]
Story first published: Friday, September 27, 2024, 11:30 [IST]
X
Desktop Bottom Promotion