Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಟೀ ಅಂಗಡಿಯ ಮಸಾಲೆ ವಡೆ ಮಾಡೋದು ಹೇಗೆ? ಆ ರುಚಿಗೆ ಹಿಟ್ಟು ಮಾಡುವ ವಿಧಾನ..!
ನೀವು ಸಂಜೆ ಸಮಯದಲ್ಲಿ ಟೀ ಅಂಗಡಿಯಲ್ಲಿ ನೀಡುವಂತಹ ಮಸಾಲ ವಡೆಯನ್ನು ಸವಿದಿರಬಹುದು. ಅದೆಷ್ಟು ರುಚಿಯಾಗಿರುತ್ತೆ ಅಂದ್ರೆ ಮತ್ತ ಮತ್ತೆ ಸವಿಯುವಂತೆ ಮನಸಾಗುತ್ತದೆ. ಕೆಲವೇ ವಸ್ತುಗಳ ಬಳಸಿ, ಕಡಿಮೆ ಸಮಯದಲ್ಲಿ ಅವರು ರುಚಿ ರುಚಿಯ ಗರಿ ಗರಿಯಾದ ವಡೆ ಮಾಡುತ್ತಾರೆ. ಅದರ ರುಚಿಗೆ ಎಂತವರು ಕೂಡ ಎರಡು ಮರು ಹಾಕಿಸಿಕೊಂಡು ಸವಿಯುತ್ತಾರೆ.
ಅದ್ರಲ್ಲೂ ಟೀ ಜೊತೆಗೆ ಈ ಮಸಾಲೆ ವಡೆ ಅದ್ಭುತ ರುಚಿ ನೀಡಲಿದೆ. ಆದ್ರೆ ನಾವು ಮನೆಯಲ್ಲಿ ಈ ವಡೆ ಮಾಡಿದ್ರೆ ಅಷ್ಟೊಂದು ರುಚಿ ನೀಡುವುದಿಲ್ಲ. ಆದ್ರೆ ಅಂಗಡಿಯಲ್ಲಿ ಯಾವ ವಿಧಾನದ ಮೂಲಕ ಅವರು ಹಿಟ್ಟು ರೆಡಿ ಮಾಡಿಕೊಳ್ಳುತ್ತಾರೆ? ಹೇಗೆ ಈ ವಡೆ ಮಾಡುತ್ತಾರೆ ಅನ್ನೋದರ ಮೇಲೆ ಅದರ ರುಚಿ ನಿರ್ಧಾರ ಆಗುತ್ತೆ.

ಹಾಗಾದ್ರೆ ನಾವಿಂದು ಮನೆಯಲ್ಲೇ ರುಚಿಯ ಮಸಾಲೆ ವಡೆ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಮಸಾಲೆ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಇದಕ್ಕೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಟೀ ಅಂಗಡಿಯ ಮಸಾಲೆ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕಡಲೆ ಬೇಳೆ - 250 ಗ್ರಾಂ
- ಜೀರಿಗೆ - 1/2 tbs
- ಗರಂ ಮಸಾಲಾ - 1/2 tbs
- ರುಚಿಗೆ ಉಪ್ಪು
- ಅಡಿಗೆ ಸೋಡಾ
- ಅಕ್ಕಿ ಹಿಟ್ಟು - 1 tbs
- ಈರುಳ್ಳಿ - 1
- ಹಸಿರು ಮೆಣಸಿನಕಾಯಿ - 8
- ಕರಿಬೇವಿನ ಎಲೆಗಳು
- ಕೊತ್ತಂಬರಿ ಸೊಪ್ಪು
- ಸಬ್ಬಸಿಗೆ ಎಲೆಗಳು
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಎಣ್ಣೆ
ಟೀ ಅಂಗಡಿಯ ಮಸಾಲೆ ವಡೆ ಮಾಡುವ ವಿಧಾನವೇನು?
ಮೊದಲು ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು ನೆನೆಸಿಡಬೇಕು. ನಂತರ ನೆನೆಸಿಟ್ಟ ಈ ಬೇಳೆಯನ್ನು 3ರಿಂದ 4 ಗಂಟೆಯ ಬಳಿಕ ಅದನ್ನು ತೆಗೆದು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಬೇಕು. ಸ್ವಲ್ಪ ಸ್ವಲ್ಪ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಒಂದೆರಡು ಸುತ್ತು ರುಬ್ಬಿಕೊಂಡರೆ ಸಾಕು, ಅದು ಇಡಿ ಇಡಿಯಾಗಿರಬೇಕು.
ನಂತರ ಈ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿಕೊಂಡು ಅದಕ್ಕೆ ಜೀರಿಗೆ, ಗರಂ ಮಸಾಲೆ, ಉಪ್ಪು, ಅಡುಗೆ ಸೋಡಾ, ಅಕ್ಕಿ ಹಿಟ್ಟು, ಈರುಳ್ಳಿ, ಹಸಿ ಮೆಣಸು, ಕರಿಬೇವು (ಎಲ್ಲವನ್ನು ಸಣ್ಣದಾಗಿ ಕತ್ತರಿಸಿಕೊಂಡು ಹಾಕಿ) ಕೊತ್ತಂಬರಿ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು ಕೂಡ ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ತರಿತರಿಯಾಗಿ ಇರುವಂತೆ ಈ ಹಿಟ್ಟನ್ನು ಮಿಕ್ಸ್ ಮಾಡಿ. ಮಿಕ್ಸ್ ಮಾಡುವಾಗ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿ, ಅನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ಹದ ಮಾಡಿಕೊಳ್ಳಬೇಕು. ಹಿಟ್ಟು ಪುಡಿ ಆಗಬಾರದು ಹಾಗೆ ನೀರಾಗಬಾರದು ಆ ರೀತಿ ಹದ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ.
ಸಣ್ಣ ಉರಿಯಲ್ಲಿ ಎಣ್ಣೆ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಇದಕ್ಕೆ ಕೈಯಿಂದ ಈ ವಡೆಯನ್ನು ಒತ್ತಿಕೊಂಡು ಎಣ್ಣೆಗೆ ಬಿಡಿ. ಅನಂತರ ಉರಿ ಸ್ವಲ್ಪ ಹೆಚ್ಚಿಸಿಕೊಳ್ಳಿ. ವಡೆ ಎರಡ ಕಡೆ ಚೆನ್ನಾಗಿ ಕರಿಯಬೇಕು. ಇಷ್ಟ ಮಾಡಿದರೆ ನಿಮ್ಮ ಮುಂದೆ ಟೀ ಅಂಗಡಿ ರುಚಿಯ ಮಸಾಲೆ ವಡೆ ರೆಡಿಯಾಗುತ್ತೆ. ನೀವು ಕೂಡ ಒಮ್ಮೆ ಮನೆಯಲ್ಲಿ ಈ ವಿಧಾನದಲ್ಲಿ ವಡೆ ಮಾಡಿ ನೋಡಿ. ಈ ರುಚಿ ಬಂದರೆ ಮತ್ತೆ ಮತ್ತೆ ಮಾಡುತ್ತಿರುತ್ತೀರಿ.



Click it and Unblock the Notifications