Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕ್‌ಫಾಸ್ಟ್‌ಗೆ ಮಾಡಿ ರುಚಿ ರುಚಿಯ ಮಸಾಲೆ ರವೆ ಇಡ್ಲಿ..! ಬಹಳ ಸುಲಭದ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ಎಷ್ಟೆಲ್ಲಾ ರೀತಿಯ ಖಾದ್ಯಗಳ ಸವಿಯಲು ನಾವು ಮುಂದಾಗುತ್ತೇವೆ. ಅದ್ರಲ್ಲೂ ಬೆಳಗ್ಗೆ ತಿಂಡಿಗೆ ಅದ್ಭುತ ರುಚಿಯ ಇಡ್ಲಿ ಮಾಡಿ ಸವಿಯುತ್ತೇವೆ. ಅತ್ಯಂತ ಮೃದುವಾಗಿ ಮಾಡುವಂತಹ ಇಡ್ಲಿಯನ್ನು ಎಲ್ಲರು ಇಷ್ಟಪಟ್ಟು ಸವಿಯಲು ಮುಂದಾಗುತ್ತಾರೆ. ಇಡ್ಲಿ ಬಹುತೇಕ ಎಲ್ಲರಿಗೂ ಇಷ್ಟವಾಗುತ್ತೆ. ಕಡಿಮೆ ಎಣ್ಣೆ ಬಳಸಿ ಈ ಖಾದ್ಯ ಮಾಡುವ ಕಾರಣ ಆರೋಗ್ಯಕ್ಕೂ ಒಳ್ಳೆಯದು.
ಸಾಮಾನ್ಯವಾಗಿ ಎಲ್ಲರು ಮನೆಯಲ್ಲಿ ಮೃದು ಇಡ್ಲಿ ಮಾಡುವುದು ತಿಳಿದಿರುತ್ತಾರೆ. ರಾತ್ರಿ ಹೊತ್ತು ಹಿಟ್ಟು ಮಾಡಿಟ್ಟು ಬೆಳಗ್ಗೆ ಅದರಿಂದ ಇಡ್ಲಿ ಮಾಡುತ್ತಾರೆ. ಆದ್ರೆ ಇಡ್ಲಿಯಲ್ಲಿ ಎಷ್ಟೊಂದು ವಿಧಗಳಿವೆ ಅನ್ನೋದನ್ನು ನೀವು ಕೂಡ ಕೇಳಿರುತ್ತೀರಿ. ಒಂದೊಂದು ವಿಧದ ಇಡ್ಲಿಯು ಒಂದೊಂದು ರೀತಿಯ ರುಚಿ ನೀಡುತ್ತದೆ.

ಹಾಗೆ ನಾವಿಂದು ಮಸಾಲೆ ಭರಿತ ರವೆ ಇಡ್ಲಿ ಮಾಡುವ ಕುರಿತು ತಿಳಿದುಕೊಳ್ಳೋಣ. ರವೆ ಇಡ್ಲಿ ಬಹಳ ಸುಲಭವಾಗಿ ಹಾಗೆ ರುಚಿಕರವಾಗಿ ಮಾಡಲಾಗುತ್ತೆ. ನಾವಿಂದು ಮಸಾಲೆ ಯುಕ್ತ ರವೆ ಇಡ್ಲಿ ಮಾಡಿ ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಸವಿಯುವ ಕುರಿತು ತಿಳಿದುಕೊಳ್ಳೋಣ. ಈ ಮಸಾಲೆ ಭರಿತ ರವೆ ಇಡ್ಲಿ ಮಾಡುವುದು ಹೇಗೆ? ಎಂಬುದನ್ನು ನೋಡೋಣ.
ಈ ರವೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ರವೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೀಡಿಯಂ ರವೆ
- ಕರಿಬೇವು
- ಎಣ್ಣೆ
- ಉಪ್ಪು
- ಕಡಲೆ ಬೇಳೆ
- ಉದ್ದಿನ ಬೇಳೆ
- ಜೀರಿಗೆ
- ಸಾಸಿವೆ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಸೋಡಾ
- ಮೊಸರು
ಮಸಾಲೆ ರವೆ ಇಡ್ಲಿ ಮಾಡುವುದು ಹೇಗೆ?
ಮೊದಲು ರವೆಯನ್ನು ಜರಡಿ ಹಿಡಿದು ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಜೀರಿಗೆ, ಸಣ್ಣದಾಗಿ ಕತ್ತರಿಸಿಕೊಂಡಿರುವ ಹಸಿ ಮೆಣಸು ಮತ್ತು ಕರಿಬೇವನ್ನು ಕೂಡ ಇದಕ್ಕೆ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ಉಪ್ಪಿಟ್ಟಿಗೆ ಬಳಸುವಂತ ರವೆಯನ್ನು ಈ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಂಡು ಫ್ರೈ ಮಾಡಿ.
ರವೆಯನ್ನು ಚೆನ್ನಾಗಿ ಅರಳುವಂತೆ ಹುರಿದುಕೊಳ್ಳಿ. 4 ನಿಮಿಷ ಫ್ರೈ ಮಾಡಿದರೆ ಸಾಕು. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿ ಜೊತೆಯಲ್ಲಿ ಫ್ರೈ ಮಾಡಿ. ನಂತರ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಮೊಸರು 1 ಕಪ್ ಹಾಕಿ ಮಿಕ್ಸ್ ಮಾಡಿ. ರವೆ ತೆಗೆದುಕೊಂಡ ಕಪ್‌ನಲ್ಲಿಯೇ ಮೊಸರು ಕೂಡ ಹಾಕಬೇಕು. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಅರ್ಧ ಕಪ್ ನೀರು ಹಾಕಿ ಮಿಕ್ಸ್ ಮಾಡಿ.
ನಂತರ ಇದನ್ನು ಮುಚ್ಚಳ ಮುಚ್ಚಿ ಇಟ್ಟುಬಿಡಿ. ನಂತರ ಈ ಹಿಟ್ಟು ಸ್ವಲ್ಪ ಗಟ್ಟಿಯಾಗಿರುತ್ತೆ. ಈಗ ಒಲೆ ಮೇಲೆ ಇಡ್ಲಿ ಕುಕ್ಕರ್ ಇಟ್ಟುಕೊಳ್ಳಿ. ಇನ್ನು ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ ಹಾಗೂ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ನೀವು ಇಡ್ಲಿ ಕಪ್‌ಗೆ ಎಣ್ಣೆ ಹಚ್ಚಿಕೊಂಡು ಈ ಹಿಟ್ಟನ್ನು ಹಾಕಿಕೊಂಡು ಇಡ್ಲಿ ಕುಕ್ಕರ್ ಅಥವಾ ಪಾತ್ರೆಯಲ್ಲಿ ಇಟ್ಟು ಒಲೆ ಮೇಲೆ ಇಡಿ.
ಇಡ್ಲಿ ಬೇಯಲು 10 ನಿಮಿಷ ಬೇಯಿಸಿದರೆ ಸಾಕಾಗುತ್ತದೆ. ಇದು ಸಂಜೆ ವೇಳೆಯೂ ಸವಿಯಲು ಮೃದುವಾಗಿರುತ್ತದೆ, ಈ ರೀತಿ ಮಸಾಲೆ ರವೆ ಇಡ್ಲಿಯನ್ನು ಒಮ್ಮೆ ನೀವು ಕೂಡ ಮಾಡಿ ನೋಡಿ. ಈ ಇಡ್ಲಿ ಜೊತೆಗೆ ಒಂದು ಚಟ್ನಿ ಇದ್ದರೆ ನಿಮ್ಮ ಮನೆಯಲ್ಲಿ ಬ್ರೇಕ್ ಫಸ್ಟ್ ಎಲ್ಲರ ಇಷ್ಟದ ಖಾದ್ಯ ಆಗುತ್ತೆ.



Click it and Unblock the Notifications