Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಣ್ಣೆ ಬಳಸದೆ ಮಸಾಲ ಶೇಂಗಾ ಕಡ್ಲೆ ಮಾಡಿ..! ಸಂಜೆ ವೇಳೆ ಸಖತ್ ಟೇಸ್ಟ್ ನೀಡುತ್ತೆ..!
ಸಂಜೆ ವೇಳೆ ಸ್ನ್ಯಾಕ್ಸ್ ತಿನ್ನೋದು ಹಲವರ ಅಭ್ಯಾಸ ಆಗಿರುತ್ತೆ. ಹೀಗಾಗಿ ಅಂಗಡಿಗಳಲ್ಲಿ, ಬೀದಿ ಬದಿಯ ಅಂಗಡಿಗಳಲ್ಲಿ ಸಂಜೆ ಸಮಯದಲ್ಲಿ ನರು ತುಂಬಿರುತ್ತಾರೆ. ಕರಿದ ತಿಂಡಿಗಳನ್ನ ಟೀ ಕಾಫಿ ಜೊತೆಗೆ ಸವಿಯಲು ಜನರು ಯಾವಾಗಲು ಇಷ್ಟಪಡುತ್ತಿರುತ್ತಾರೆ. ಹಾಗೆ ಸಂಜೆಯ ವೇಳೆ ಚಳಿಗಾಲದಲ್ಲಿ ರುಚಿ ರುಚಿಯಾಗಿ ಏನಾದರು ಸವಿಯುತ್ತಿದ್ದರೆ ಬಹಳ ಚೆನ್ನಾಗಿರುತ್ತದೆ.
ಆದರೆ ಕೆಲವರು ಈ ತಿಂಡಿಗಳನ್ನು ಮನೆಯಲ್ಲಿಯೇ ಮಾಡಿ ಸವಿಯಲು ಮುಂದಾಗುವುದನ್ನು ನಾವು ನೋಡಿರಬಹುದು. ಹಾಗಾದ್ರೆ ಮನೆಯಲ್ಲಿ ಈ ಸ್ನ್ಯಾಕ್ಸ್ ಗಳನ್ನು ಮಾಡುವುದು ಹೇಗೆ? ಅದರಲ್ಲೂ ಎಣ್ಣೆಯನ್ನೇ ಬಳಸದೆ ಈ ಮಸಾಲ ಶೇಂಗಾ ಕಡ್ಲೆ ಮಾಡುವುದು ಹೇಗೆ ಎಂಬುದು ನಿಮಗೆ ಗೊತ್ತಾ?, ಹೌದು ಎಣ್ಣೆ ಬಳಸದೆಯೇ ಅದ್ಭುತ ರುಚಿಯಲ್ಲಿ ಈ ಶೇಂಗಾ ಕಡ್ಲೆಯನ್ನು ಮಸಾಲೆ ಹಾಕಿ ಸವಿಯಬಹುದು.

ಅಷ್ಟಕ್ಕೂ ಇದು ಅತ್ಯಂತ ಸುಲಭದ ಮಾರ್ಗವಾಗಿದೆ. ಈ ಸ್ನ್ಯಾಕ್ಸ್ ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಗೆ ಕೂಡ ಇದು ಇಷ್ಟವಾದ ತಿಂಡಿಯಾಗುತ್ತೆ. ಮನೆಯಲ್ಲೇ ಮಾಡೋದ್ರಿಂದ ಆರೋಗ್ಯದ ಕಾಳಜಿ ವಹಿಸಿದಂತೆಯೂ ಆಗಲಿದೆ. ಹಾಗಾದ್ರೆ ಮನೆಯಲ್ಲಿ ಈ ಶೇಂಗಾ ಮಾಡುವುದು ಹೇಗೆ?, ಮಸಾಲ ಶೇಂಗಾ ಕಡ್ಲೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ನೋಡೋಣ.
ಮಸಾಲೆ ಶೇಂಗಾ ಕಡ್ಲೆ ಮಾಡಲು ಬೇಕಾಗುವ ಪದಾರ್ಥಗಳು
- ಶೇಂಗಾ ಕಡ್ಲೆ
- ಖಾರದ ಪುಡಿ
- ಗರಂ ಮಸಾಲ
- ಉಪ್ಪು
ಮಸಾಲೆ ಶೇಂಗಾ ಕಡ್ಲೆ ಮಾಡುವ ವಿಧಾನವೇನು?
ಒಂದು ಬಾಣಲೆ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಶೇಂಗಾವನ್ನು ಹುರಿದುಕೊಳ್ಳಬೇಕು. ನಿಧಾನವಾಗಿ ಹುರಿದಾಗ ಅದರ ಬಣ್ಣ ಬದಲಾಗುತ್ತದೆ. ಸುಲಭವಾಗಿ ಸಿಪ್ಪೆ ಬರುವಂತೆ ಹುರಿದುಕೊಳ್ಳಿ. ಹೀಗೆ ಶೇಂಗಾ ಹುರಿದು ಇಟ್ಟುಕೊಳ್ಳಿ. ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಅಚ್ಚು ಖಾರದ ಪುಡಿ, ಗರಂ ಮಸಾಲೆ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಸಾಲೆ ಹದವಾಗಿ ಬೆರೆಯುವಂತೆ ಮಾಡಿಕೊಳ್ಳಿ.
ಈಗ ಹುರಿದುಕೊಂಡಿರುವ ಶೇಂಗಾವನ್ನು ತೆಗೆದುಕೊಂಡು ಇದಕ್ಕೆ ಮಿಕ್ಸ್ ಮಾಡಿಕೊಂಡ ಮಸಾಲೆಯನ್ನು ಹಾಕಿ ಚೆನ್ಣಾಗಿ ಕಲಸಿಕೊಳ್ಳಬೇಕು. ಶೇಂಗಾ ಕಡ್ಲೆಗೆ ಚೆನ್ನಾಗಿ ಈ ಮಸಾಲೆಗಳು ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಸಣ್ಣ ಉರಿ ಇಟ್ಟು ಎಲ್ಲಾ ಕಡ್ಲೆಯನ್ನು ಹಾಕಿಕೊಳ್ಳಬೇಕು. ನಿಧಾನವಾಗಿ ತಿರುಗಿಸುತ್ತಾ ಇರಬೇಕು. ಸುಮಾರು 3ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಕರಿಯಬೇಕು.
ನಿಧಾನವಾಗಿ ಕರಿಯುವುದರಿಂದ ಅದರ ಸಿಪ್ಪೆ ಕಿತ್ತು ಹೋಗುವುದಿಲ್ಲ. ಹಾಗೆ ಗರಿಗರಿಯಾಗಿ ಹುರಿದುಕೊಂಡ ಬಳಿಕ ಒಲೆ ಆಪ್ ಮಾಡಿ ಬೌಲ್‌ಗೆ ಹಾಕಿಟ್ಟುಕೊಳ್ಳಿ ಹಾಗೆ ಇದನ್ನು ನೀವು ಸ್ಟೀಕ್ ಡಬ್ಬದಲ್ಲಿ ಹಾಕಿ ಗಾಳಿ ಆಡದಂತೆ ಇಟ್ಟರೆ ತಿಂಗಳ ಕಾಲ ಬೇಕಾದರು ಇಟ್ಟು ಸವಿಯಬಹುದು. ಏಕೆಂದರೆ ಎಣ್ಣೆ ಬಳಸದೆ ಮಾಡುವುದರಿಂದ ಹಾಳಾಗುವುದಿಲ್ಲ. ಹೀಗೆ ನೀವು ಕೂಡ ಮನೆಯಲ್ಲಿ ಈ ರೀತಿಯ ಶೇಂಗಾ ಮಸಾಲೆ ಮಾಡಿ ನೋಡಿ. ಸಂಜೆ ಸಮಯದಲ್ಲಿ ಇದು ಬೆಸ್ಟ್ ಸ್ನ್ಯಾಕ್ಸ್ ಆಗೋದು ಪಕ್ಕ.



Click it and Unblock the Notifications