Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಿಷದಲ್ಲಿ ಮಾಡಿ ಮಸಾಲ ಪಲಾವ್..! ಇದಂತು ಬಿರಿಯಾನಿ ಟೇಸ್ಟ್.!
ಹಲವರ ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಪಲಾವ್ ಫಿಕ್ಸ್ ಆಗಿರುತ್ತೆ. ಏಕೆಂದರೆ ಮಾಡುವುದು ತುಂಬಾನೆ ಸುಲಭ ಹಾಗೂ ತರಕಾರಿಗಳ ಹಾಕೋದ್ರಿಂದ ಆರೋಗ್ಯಕ್ಕೂ ಇದು ಉತ್ತಮ ಎಂಬ ಮನೋಭಾವದಲ್ಲಿ ಪಲಾವ್ ಮಾಡಲಾಗುತ್ತದೆ. ಅದ್ರಲ್ಲೂ ಪಲಾವ್ ಎಂದರೆ ಈಗಂತು ಹತ್ತು ಹಲವು ವಿಧದಲ್ಲಿ ಮಾಡಲಾಗುತ್ತದೆ.
ಈಗ ಬಿರಿಯಾನಿ ಶೈಲಿಯಲ್ಲಿ ಪಲಾವ್ ಮಾಡಲಾಗುತ್ತದೆ. ಪಲಾವ್ ಜೊತೆಗೆ ಮೊಸರು ಬಜ್ಜಿ ಇದ್ದರೆ ಆ ತಿಂಡಿಗೆ ಮತ್ತಷ್ಟು ರುಚಿ ಬರುತ್ತದೆ. ಕೆಲವೊಂದು ಹೋಟೆಲ್‌ಗಳಂತೂ ಈ ಪಲಾವ್ ಖಾದ್ಯದಿಂದಲೇ ಫೇಮಸ್ ಆಗಿವೆ. ಮತ್ತೆ ಕೆಲವರು ಈ ಪಲಾವ್ ಸವಿಯಲೆಂದೇ ಹೋಟೆಲ್‌ಗಳಿಗೆ ಭೇಟಿ ನೀಡುತ್ತಾರೆ.
ಇಷ್ಟೊಂದು ವಿಚಾರ ತನ್ನಲ್ಲಿಟ್ಟುಕೊಂಡಿರುವ ಈ ಪಲಾವ್, ಭಾರತೀಯ ಮನೆಯ ಖಾದ್ಯ, ಬೆಳಗ್ಗೆ ತಿಂಡಿಗೆ ಮಧ್ಯಾಹ್ನದ ಲಂಚ್ ಬಾಕ್ಸ್‌ಗೆ ಥಟ್ ಅಂತ ರೆಡಿಯಾಗುವ ಏಕೈಕ ತಿಂಡಿ. ಈ ರೀತಿ ಇದ್ದರೂ ಕೆಲವರಿಗೆ ಪಲಾವ್ ಎಂದರೆ ಆಗುವುದಿಲ್ಲ. ಏಕೆಂದರೆ ಯಾವಾಗಲು ಇಂದೇ ರೀತಿಯ, ಒಂದೇ ರುಚಿಯ ಪಲಾವ್ ಮಾಡಿದರೆ ಎಂತವರಿಗೂ ಬೇಜಾರಾಗುತ್ತದೆ. ಆದ್ರೆ ರುಚಿಯಲ್ಲೂ ಸ್ವಲ್ಪ ಬದಲಾವಣೆ ನೀವು ಮಾಡಿದ್ರೂ ಬಾಯಿ ಚಪ್ಪರಿಸಿ ಸವಿಯುತ್ತಾರೆ.

ಹಾಗಾದ್ರೆ ನಾವಿಂದು ಎಲ್ಲರಿಗೂ ಇಷ್ಟವಾಗುವಂತಹ ಮಸಾಲ ಪಲಾವ್ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಮಸಾಲ ಪಲಾವ್ ಮಾಡಲು ಏನೆಲ್ಲಾ ಬೇಕು? ಮಾಡುವ ವಿಧಾನವೇನು? ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು
ಅನ್ನ - 1 ಬೌಲ್
ಈರುಳ್ಳಿ- 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
ಹಸಿರು ಮೆಣಸಿನಕಾಯಿ - 4
ಹಸಿರು ಬಟಾಣಿ - 1/4 ಕಪ್
ಕ್ಯಾರೆಟ್- 1
ಕ್ಯಾಪ್ಸಿಕಂ - 1/4 ಕಪ್
ಎಲೆಕೋಸು - 1/2 ಕಪ್
ಹೂಕೋಸು - 1/2 ಕಪ್
ಬೀನ್ಸ್ - 1/4 ಕಪ್
ಅರಿಶಿನ ಪುಡಿ - 1/4 ಟೀಸ್ಪೂನ್
ಗರಂ ಮಸಾಲಾ ಪುಡಿ - 1/2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ - 1/2 tbs
ಕೊತ್ತಂಬರಿ ಪುಡಿ - 1 tbs
ಕಸೂರಿ ಮೇಥಿ - 1 tbs
ಟೊಮೆಟೋ - 1
ಪುದೀನ ಎಲೆಗಳು - 1/2 ಕಪ್
ಕೊತ್ತಂಬರಿ ಸೊಪ್ಪು - 1/2 ಕಪ್
ಅಡುಗೆ ಎಣ್ಣೆ
ರುಚಿಗೆ ಉಪ್ಪು
ಮಸಾಲ ಪಲಾವ್ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಈ ಎಣ್ಣೆಗೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸು, ಬಟಾಣಿ, ಕ್ಯಾರೆಟ್, ಎಲೆಕೋಸು, ಹೂಕೋಸು, ಕ್ಯಾಪ್ಸಿಕಂ, ಬೀನ್ಸ್ ಹಾಕಿ ಒಂದು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಫ್ರೈ ಮಾಡುವಾಗ ಇದಕ್ಕೆ ಟೊಮೆಟೋ, ಉಪ್ಪು ಹಾಕಿಕೊಂಡು ಫ್ರೈ ಮಾಡಿ. 1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಅರಶಿಣ ಪುಡಿ, ಗರಂ ಮಸಾಲ, ಖಾರದ ಪುಡಿ, ಧನಿಯಾ ಪುಡಿ, ಕಸೂರಿ ಮೇಥಿ ಹಾಕಿ ನಿಮ್ಮ ಬಳಿ ಪಲಾವ್ ಮಸಾಲ ಇದ್ದರೆ ಹಾಕಿಕೊಳ್ಳಿ. ಇದೆಲ್ಲಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ.
ಬಳಿಕ ಈ ಮಸಾಲೆಗೆ ಮೊದಲೇ ಮಾಡಿಟ್ಟಿರುವ ಅನ್ನವನ್ನು ಹಾಕಿಕೊಳ್ಳಿ. ಉದುರು ಉದುರಾಗಿರುವ ಅನ್ನ ಹಾಕಿ ಮಿಕ್ಸ್ ಮಾಡಿ. ನಿಮಗೆ ಎಷ್ಟು ಅನ್ನ ಬೇಕೋ ಅಷ್ಟು7 ಹಾಕಿಕೊಳ್ಳಿ. ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು, ಪುದಿನ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಂಡು ಒಲೆ ಆಫ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಸಾಲ ಪಲಾವ್ ರೆಡಿಯಾಗಿರುತ್ತದೆ.



Click it and Unblock the Notifications