Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
3 ನಿಮಿಷದೊಳಗೆ ಮಸಾಲ ಒಗ್ಗರಣೆ ಮೊಸರು: ಊಟ ತಿಂಡಿ ಎಲ್ಲದಕ್ಕೂ ಸೈ!
ಮನೆಯಲ್ಲಿ ನೀವು ಹಲವು ರೀತಿ ಖಾದ್ಯಗಳು, ಸಿಹಿಗಳ ಮಾಡಿ ಸವಿಯುವುದು ಕಾಮನ್. ಹಾಗೆ ಮನೆಯಲ್ಲಿ ಯಾವುದಾದರು ಖಾದ್ಯಗಳು ಉಳಿದಾಗಲೂ ಅದರಿಂದ ತಿಂಡಿಗಳ ಮಾಡಿ ಸವಿಯುವುದು ನೋಡಬಹುದು. ಉಳಿದ ಅನ್ನ, ಹಾಲು, ಹಿಟ್ಟುಗಳಿಂದ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುವುದು ಎಲ್ಲರ ಮನೆಯಲ್ಲೂ ಕಾಮನ್.
ಹಾಗೆ ನಾವಿಂದು ಮೊಸರು ಬಳಸಿ ಸುಲಭವಾಗಿ ಮಾಡಬಹುದಾದ ಖಾದ್ಯವೊಂದರ ಕುರಿತು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಮೊಸರು ಉಳಿದರೆ ಅನ್ನು ಅನ್ನೊಂದಿಗೆ ಬಳಸುತ್ತಾರೆ. ಬಹಳ ದಿನವಾದರೆ ಹುಳಿಯಾಗುವ ಕಾರಣ ಎಸೆಯುತ್ತಾರೆ. ಆದ್ರೆ ಈ ಮೊಸರು ಉಳಿದರೆ ಅದನ್ನು ಬಳಸಿ ಒಗ್ಗರಣೆ ಹಾಕಿ ಅದ್ಭುತ ರುಚಿಯ ಖಾದ್ಯ ಮಾಡಬಹುದು.

ಹೌದು ಮೊಸರು ಬಳಸಿ ಊಟಕ್ಕೆ ಚಪಾತಿ ಸವಿಯಲು ಈ ರೀತಿಯಾಗಿ ಒಗ್ಗರಣೆ ಹಾಕಿದ್ದರೆ ಬಹಳ ರುಚಿ ನೀಡಲಿದೆ. ಮೊಸರು ಬಹಳ ರುಚಿ ರುಚಿಯಾಗಿರೋ ಕಾರಣ ಬೇರೆ ಪಲ್ಯ, ಸಾಂಬಾರ್ ಯಾವುದೂ ಊಟಕ್ಕೆ ಬೇಡ ಎನಿಸುತ್ತದೆ. ಹಾಗಾದ್ರೆ ಈ ಒಗ್ಗರಣೆ ಮೊಸರು ಮಾಡುವುದು ಹೇಗೆ? ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿಕೊಂಡು ಈ ಮೊಸರು ಒಗ್ಗರಣೆ ಮಾಡಬಹುದು. ಹಾಗಾದ್ರೆ ಈ ಮೊಸರು ಒಗ್ಗರಣೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಸರು ಒಗ್ಗರಣೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೊಸರು
- ಎಣ್ಣೆ
- ಜೀರಿಗೆ
- ಖಾರದ ಪುಡಿ
- ಧನಿಯಾ ಪುಡಿ
- ಸಾಸಿವೆ
- ಕರಿಬೇವು
- ತೆಂಗಿನಕಾಯಿ
- ಅರಿಶಿನ
- ಜೀರಿಗೆ ಪುಡಿ
- ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಷ್ಟು ಉಪ್ಪು
ಮೊಸರು ಒಗ್ಗರಣೆ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಜೀರಿಗೆ, ಸಾಸಿವೆ ಹಾಕಿಕೊಂಡು ಸಿಡಿಯಲು ಬಿಡಿ. ನಂತರ ಇದಕ್ಕೆ ಇಂಗು, ಕರಿಬೇವು ಹಾಕಿಕೊಂಡು ಬಳಿಕ ಶೇಂಗಾ ಕಡಲೆಯನ್ನು ಹಾಕಿ. ನಂತರ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ 2ರಿಂದ 3 ಸ್ಪೂನ್ ಕೊಬ್ಬರಿ ತುರಿ ಸೇರಿಸಿಕೊಳ್ಳಿ. ಇದರ ಮೇಲೆ ಜೀರಿಗೆ ಪುಡಿ ಹಾಗೂ ಅರಶಿಣ ಪುಡಿ ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಖಾರಕ್ಕಾಗಿ ಖಾರದ ಪುಡಿ, ಧನಿಯಾ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಉರಿ ಸಣ್ಣದಾಗಿ ಇಟ್ಟುಕೊಳ್ಳಿ. ಹಾಗೆ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ.
ಈಗ ಒಂದು ಬೌಲ್‌ನಲ್ಲಿ ಉಳಿದ ಮೊಸರು ಅಥವಾ ಗಟ್ಟಿ ಮೊಸರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತೆಳು ಮಾಡಿಕೊಳ್ಳಿ. ತೆಳು ಮಾಡಿಕೊಂಡ ಬಳಿಕ ಈಗ ಬಾಣಲೆಯಲ್ಲಿರುವ ಮಸಾಲೆಗಳನ್ನು ಈ ಮೊಸರಿನ ಬೌಲ್‌ಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಸಾಲ ಒಗ್ಗರಣೆ ಮೊಸರು ರೆಡಿಯಾಗುತ್ತದೆ. ಮಾಡೋಕೆ 5 ನಿಮಿಷ ಹಿಡಿಯಲಿದೆ ಹಾಗೆ ಎಲ್ಲಾ ಖಾದ್ಯದೊಂದಿಗೂ ಇದು ರುಚಿ ಹೆಚ್ಚಿಸಲಿದೆ.
ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ. ಗಟ್ಟಿ ಮೊಸರಿನಲ್ಲಿ ಇದನ್ನು ಮಾಡಿದ್ರೆ ರುಚಿ ಕೂಡ ಅದ್ಭುತವಾಗಿರಲಿದೆ. ಒಮ್ಮೆ ಇದನ್ನು ಮಾಡಿದ್ರೆ ನಂತರ ಊಟಕ್ಕೆ ಸಾಂಬಾರ್ ಬದಲು ಇದನ್ನೇ ಮಾಡಿ ಸವಿಯೋದು ಖಚಿತ. ದಪ್ಪವಾಗಿ ಮಾಡಿಕೊಂಡರೆ ಚಪಾತಿಯೊಂದಿಗೆ ಕೂಡ ಇದನ್ನು ಹಾಕಿಕೊಂಡು ಸವಿಯಲು ರುಚಿ ನೀಡಲಿದೆ.



Click it and Unblock the Notifications