Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ನೀರೂರಿಸುವ ಮಸಾಲ ನೀರ್ ದೋಸೆ: 10 ನಿಮಿಷ ಸಾಕಾಗುತ್ತೆ!
ನೀವು ಹಬ್ಬದ ಸಮಯದಲ್ಲಿ ಅಥವಾ ವಿಶೇಷ ದಿನಗಳಲ್ಲಿ ಇಲ್ಲವೆ ಮನೆಯಲ್ಲಿ ಯಾವಾದರು ಸಂಬಂಧಿಕರು ಒಂದು ಉಳಿದಿರುವ ದಿನದಲ್ಲಿ ರುಚಿ ರುಚಿಯಾಗಿ ಸವಿಯಲೆಂದು ನೀರ್ ದೋಸೆ ಮಾಡುತ್ತೀರಿ. ಕರಾವಳಿ, ಮಲೆನಾಡು ಭಾಗದಲ್ಲಿ ಈ ನೀರ್ ದೋಸೆ ಬಹಳ ಫೇಮಸ್. ಮೃದುವಾದ ಪೇಪರ್‌ನಂತೆ ಇರುವ ದೋಸೆಯನ್ನು ಮನೆಯಲ್ಲಿ ಎಲ್ಲರು ಕುಳಿತು ಸವಿಯಲು ಇಷ್ಟಪಡುತ್ತಾರೆ.
ಹಾಗೆ ನೀರ್ ದೋಸೆಯೊಂದಿಗೆ ನೀವು ಯಾವುದೇ ಖಾದ್ಯವನ್ನಾದರು ಸವಿಯಬಹುದು. ರುಚಿಯಲ್ಲಿ ಅದ್ಭುತವಾಗಿರಲಿದೆ. ಮಕ್ಕಳಿಗೂ ಕೂಡ ನೀರ್ ದೋಸೆ ಬಹಳ ರುಚಿ ನೀಡಲಿದೆ. ಹಾಗೆ ಎಲ್ಲರು ಇಷ್ಟಪಟ್ಟು ಸವಿಯುವಂತಹ ತಿಂಡಿ ಇದು ಎನ್ನಬಹುದು. ಆದ್ರೆ ಇದನ್ನು ಮಾಡುವ ಸರಿಯಾದ ವಿಧಾನ ಎಲ್ಲರಿಗೂ ತಿಳಿದಿರೋದಿಲ್ಲ.

ನೀರ್ ದೋಸೆ ಮಾಡಲು ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಅನ್ನೋದು ಹಲವರಲ್ಲಿ ಕಾಡುವ ಸಮಸ್ಯೆ ಎನ್ನಬಹುದು. ಕೆಲವೊಮ್ಮೆ ಹಿಟ್ಟು ದಪ್ಪವಾಗುವುದು, ತೆಳುವಾಗುವು, ಇಲ್ಲವೆ ಕಾವಲಿಗೆ ಹಿಡಿಯುವುದು ನೋಡಬಹುದು. ಇಂತಹ ಕೆಲವು ಸಮಸ್ಯೆಗಳ ಎದುರಿಸಿ ಸುಲಭವಾಗಿ ನೀರ್ ದೋಸೆ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಗಾದ್ರೆ ಸುಲಭವಾಗಿ ಮಸಾಲ ನೀರ್ ದೋಸೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.
ಮಸಾಲ ನೀರ್ ದೋಸೆ ಮಾಡಲು ಬೇಕಾಗುವ ಪದಾರ್ಥಗಳು?
ಅಕ್ಕಿ
ತೆಂಗಿನ ತುರಿ
ಉಪ್ಪು
ಎಣ್ಣೆ
ಮಸಾಲ ನೀರ್ ದೋಸೆ ಮಾಡುವ ಸುಲಭದ ವಿಧಾನವಿದು
ನೀರ್ ದೋಸೆ ಮಾಡಲು ಮೊದಲು ಹಿಟ್ಟು ರೆಡಿ ಮಾಡಿಕೊಳ್ಳಬೇಕು. ಇದಕ್ಕಾಗಿ 6ರಿಂದ 7 ಗಂಟೆ ಮೊದಲು ಅಕ್ಕಿಯನ್ನು ತೊಳೆದು ಒಂದು ಪಾತ್ರೆಗೆ ಹಾಕಿ ನೆನೆಸಿಡಬೇಕು. ಈಗ ಒಂದು ಮಿಕ್ಸಿ ಜಾರ್‌ಗೆ ತುರಿದ ತೆಂಗಿನಕಾಯಿ ಹಾಗೆ ಅಕ್ಕಿಯನ್ನು ಹಾಕಿ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
ಇದೇ ರೀತಿ ಹಿಟ್ಟನ್ನು ರುಬ್ಬಿಕೊಳ್ಳಿ. ನೀರು ಹೆಚ್ಚಾಗಿ ಹಾಕಿಕೊಳ್ಳಿ. ತೆಳುವಾದಷ್ಟು ಉತ್ತಮ. ಹಾಗೆ ಇದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು. ಹಾಗೆ ನಿಮಗೆ ಸ್ವಲ್ಪ ಖಾರ ಖಾರವಾಗಿ ಮಸಾಲೆ ನೀರ್ ದೋಸೆ ಬೇಕಾದರೆ ಇದಕ್ಕೆ ಸ್ವಲ್ಪ ಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಬಳಿಕ ಹಿಟ್ಟನು 15 ನಿಮಿಷ ಬಿಡಿ.
ನೀವು ಹಿಂದಿನ ದಿನವೂ ಸಹ ಈ ಹಿಟ್ಟು ಮಾಡಿಟ್ಟುಕೊಳ್ಳಬಹುದು. ನೀರ್ ದೋಸೆ ಆಗಿರೋದ್ರಿಂದ ತಕ್ಷಣವೇ ಹಿಟ್ಟು ಮಾಡಿ ದೋಸೆ ಮಾಡಬಹುದು. ಈಗ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಅದಕ್ಕೆ ಹಿಟ್ಟನ್ನು ಹಾಕಿಕೊಳ್ಳಬೇಕು. ದೋಸೆ ಸರಿ ಏಳದಿದ್ದರೆ ಈರುಳ್ಳಿ ಹಾಕಿ ಉಜ್ಜಿಕೊಳ್ಳಿ. ಹಾಗೆ ಕಾವಲಿ ಬಹಳ ಬಿಸಿಯಾಗಿ ಮಾಡಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ತೆಳುವಾದ ರುಚಿ ರುಚಿಯ ಮಸಾಲ ನೀರ್ ದೋಸೆ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಮಾಡುವುದು ಬಹಳ ಸುಲಭ ಹಾಗೆ ಎಲ್ಲರಿಗೂ ಇದು ಇಷ್ಟವಾಗುತ್ತೆ.



Click it and Unblock the Notifications