Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1 ಬೌಲ್ ಅಕ್ಕಿ ಹಿಟ್ಟಲ್ಲಿ ಗರಿ ಗರಿ ಕೋಡುಬಳೆ ರೆಡಿ..! 10 ನಿಮಿಷದಲ್ಲಿ ತಯಾರಿ!
ಮನೆಯಲ್ಲಿ ಯಾವುದಾದರು ತಿಂಡಿ ಮಾಡಿಟ್ಟರೆ ಸಂಜೆ ವೇಳೆ ಸವಿಯಲು ಅಥವಾ ಅತಿಥಿಗಳು ಯಾರಾದರು ಬಂದರೆ ಇಲ್ಲವೆ ಮನೆಗೆ ಯಾರಾದರು ಪರಿಚಯಸ್ಥರು ಬಂದರೆ ಅವರಿಗೆ ಟೀ-ಕಾಫಿ ಜೊತೆ ಯಾವುದಾದ್ರು ತಿಂಡಿ ನೀಡುತ್ತೇವೆ. ಆದ್ರೆ ಅಂಗಡಿಯಿಂದ ತಂದ ತಿಂಡಿ ಕೊಡುವುದಕ್ಕಿಂತ ನಾವೇ ಮನೆಯಲ್ಲಿ ಮಾಡಿ ಇಟ್ಟರೆ ಆರೋಗ್ಯಕ್ಕೂ ಉತ್ತಮ ಹಣವೂ ಉಳಿತಾಯವಾಗುತ್ತೆ.
ಆದ್ರೆ ಮನೆಯಲ್ಲಿ ಸುಲಭವಾಗಿ ಯಾವ ತಿಂಡಿ ಮಾಡಬಹುದು. ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿ ಮಾಡುವ ತಿಂಡಿ ಅಂದ್ರೆ ಅದು ಕೂಡುಬಳೆ. ಅಂಗಡಿ, ಬೇಕರಿಯಲ್ಲಿ ಕೋಡುಬಳೆ ಈಗ ದುಬಾರಿ ಆಗಿಬಿಟ್ಟಿದೆ. ಯಾಕಂದ್ರೆ ಈಗ ಕೋಡುಬಳೆ ಈಗ ವಿವಿಧ ಪ್ರಕಾರದಲ್ಲಿ ಬರುತ್ತಿದೆ. ಆದರೆ ನೀವು ಅಕ್ಕಿ ಹಿಟ್ಟು ಬಳಸಿ ರುಚಿ ರುಚಿಯ ಕೋಡುಬಳೆ ಮಾಡುವುದು ಗೊತ್ತಿದ್ಯಾ?

ಅಕ್ಕಿ ಹಿಟ್ಟಿನಲ್ಲಿ ಮಸಾಲೆ ಭರಿತ ಕೋಡುಬಳೆ ಮಾಡಬಹುದು. ಇಷ್ಟೊಂದು ರುಚಿಯ ಕೋಡುಬಳೆ ನೀವು ಒಮ್ಮೆ ಸವಿದರೆ ಮತ್ತೆ ಮತ್ತೆ ಮಾಡಲು ಮುಂದಾಗುತ್ತೀರಿ. ಜೊತೆಗೆ ಇದನ್ನು ಮಾಡುವುದು ತುಂಬಾನೆ ಸುಲಭ, ಅಲ್ಲದೆ ಕಡಿಮೆ ವಸ್ತು ಬಳಸಿ ಈ ಅಕ್ಕಿ ಹಿಟ್ಟಿನ ಕೋಡುಬಳೆ ಮಾಡಬಹುದು.
ಹಾಗಾದ್ರೆ ಅಕ್ಕಿ ಹಿಟ್ಟಿನಲ್ಲಿ ಕೋಡುಬಳೆ ಮಾಡುವುದು ಹೇಗೆ? ಕೋಡುಬಳೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಎಷ್ಟು ಸಮಯ ಬೇಕು? ಕೋಡುಬಳೆ ಮಾಡಲು ಹಿಟ್ಟನ್ನು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಕ್ಕಿ ಕೋಡುಬಳೆ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ ಹಿಟ್ಟು - ಎರಡು ಕಪ್
- ಮೈದಾ- ಕಾಲು ಕಪ್
- ರವೆ- ಕಾಲು ಕಪ್
- ತುಪ್ಪ- 2 ಸ್ಪೂನ್
- ಉಪ್ಪು
- ಎಣ್ಣೆ
- ಜೀರಿಗೆ
- ಖಾರದ ಪುಡಿ
ಅಕ್ಕಿ ಕೋಡುಬಳೆ ಮಾಡುವ ವಿಧಾನ
ಮೊದಲು ಒಂದು ಬೌಲ್‌ಗೆ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ ಕಾಲು ಕಪ್ ರವೆ, ಕಾಲು ಕಪ್ ಮೈದಾ ಹಿಟ್ಟು, ಜೀರಿಗೆ, ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನೀರು ಹಾಕದೆ ಇದೆಲ್ಲಾ ವಸ್ತು ಸರಿಯಾಗಿ ಮಿಕ್ಸ್ ಆಗುವಂತೆ ಚೆನ್ನಾಗಿ ಸ್ಪೂನ್ ನಿಂದ ಮಿಕ್ಸ್ ಮಾಡಿ. ಈಗ ಮತ್ತೊಂದು ಬೌಲ್‌ನಲ್ಲಿ ತುಪ್ಪ ತೆಗೆದುಕೊಳ್ಳಿ. ಈ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ.
ತುಪ್ಪ ಬೆಚ್ಚಗಾದ ಬಳಿಕ ಅದನ್ನು ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ. ಬಿಸಿ ಬಿಸಿ ಇರುವಾಗಲೇ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡುತ್ತಾ ಹೋಗಿ. ಈ ರೀತಿ ಹಿಟ್ಟು ಮಾಡಿಕೊಳ್ಳಿ. ಇದು ಚಪಾತಿ ಹಿಟ್ಟಿನಂತೆ ಆಗುವವರೆಗೂ ನೀರು ಹಾಕಿ ಮಿಕ್ಸ್ ಮಾಡಿ ಆದ್ರೆ ಸ್ವಲ್ಪ ಗಟ್ಟಿಯಾಗಿರಲಿ. ಬಳಿಕ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿಡಿ.
ಈಗ 15 ನಿಮಿಷದ ಬಳಿಕ ಹಿಟ್ಟನ್ನು ಉಂಡೆ ಕಟ್ಟಿಕೊಳ್ಳಿ, ದೊಡ್ಡ ಗೋಲಿ ಗಾತ್ರದಲ್ಲಿ ಹಿಟ್ಟು ತೆಗೆದುಕೊಂಡು ಚಪಾತಿ ಮಣೆಯಲ್ಲಿ ಬೆರಳಿನ ಆಕಾರಕ್ಕೆ ಉಜ್ಜಿಕೊಳ್ಳಿ, ಅದರ ಒಂದು ತುದಿಯನ್ನು ಮತ್ತೊಂದು ತುದಿಗೆ ಅಂಟಿಸಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಹಿಟ್ಟು ತೆಗೆದುಕೊಂಡು ಕೋಡುಬಳೆ ಮಾಡಿಕೊಳ್ಳಿ.
ನಂತರ ಒಂದು ಪಾತ್ರೆಯನ್ನ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾದ ಬಳಿಕ ಒಂದೊಂದೆ ಕೋಡುಬಳೆಯನ್ನು ಹಾಕಿ ಕರಿದುಕೊಳ್ಳಿ. ಎಲ್ಲಾ ಕೋಡುಬಳೆ ಒಟ್ಟಿಗೆ ಹಾಕಬೇಡಿ. ಸುಮಾರು 10 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕರಿಯಬೇಕು. ಕೋಡುಬಳೆಯ ಒಳಭಾಗವೂ ಚೆನ್ನಾಗಿ ಬೇಯಬೇಕಾದರೆ ನಿಧಾನವಾಗಿ ಉರಿ ಇಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅಕ್ಕಿ ಹಿಟ್ಟಿನ ಗರಿ ಗರಿಯ ಕೋಡುಬಳೆ ರೆಡಿಯಾಗುತ್ತದೆ. ಮಾಡುವುದು ಸಹ ತುಂಬಾನೆ ಸುಲಭವಾಗಿದೆ. ಜೊತೆಗೆ ಕಡಿಮೆ ವಸ್ತುಗಳು ಇದ್ದರೂ ಸಾಕಾಗುತ್ತದೆ.



Click it and Unblock the Notifications