Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಕರಿ ರುಚಿಯ ಮಸಾಲೆ ಬಟಾಣಿ ಮನೆಯಲ್ಲೇ ಮಾಡಿ..! 2 ವಸ್ತು ಇದ್ರೆ ಸಾಕು..!!
ನೀವು ಮನೆಯಲ್ಲಿದ್ದಾಗ ಸಂಜೆ ಸಮಯದಲ್ಲಿ ಅಥವಾ ರಜೆ ಇದ್ದಾಗ, ಕಾಫಿ ತಿಂಡಿಯ ಜೊತೆಗೆ ಬಾಯಿ ರುಚಿಗೆಂದು ಸ್ನ್ಯಾಕ್ಸ್ ಸವಿದಿರುತ್ತೀರಿ. ಹಾಗೆ ಸಂಜೆ ಸಮಯದಲ್ಲಿ ಮನೆಯಲ್ಲೇ ಮಾಡಿರುವ ಯಾವುದಾದರು ಸ್ನ್ಯಾಕ್ಸ್ ಇದ್ದರೆ ಆ ದಿನ ಉತ್ತಮವಾಗಿರುತ್ತೆ. ಹಾಗೆ ಯಾರಾದರು ಅತಿಥಿಗಳು ಬಂದಾಗ, ಇಲ್ಲವೆ ಶುಭ ಕಾರ್ಯಗಳಿದ್ದಾಗ, ಟಿವಿ ನೋಡುವಾಗ ಹೀಗೆ ಬೇರೆ ಬೇರೆ ಸಮಯದಲ್ಲಿ ಯಾವುದಾದರು ಖಾದ್ಯ ಸವಿಯಲು ನೀವು ಮುಂದಾಗಬಹುದು.
ಇನ್ನು ಬೇಕರಿ ಅಂಗಡಿಯಿಂದ ಖರೀದಿಸಿ ತರುವಂತಹ ಕಡಲೆಗಳು, ಮಸಾಲೆ ಮಸಾರ್ಥಗಳಿಂದ ಮಾಡಿದ ಬಟಾಣಿ, ಕಡ್ಲೆ, ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಗಂತು ಈ ಮಸಾಲೆ ಪೀನಟ್, ಕರಿದ ಬೇಳೆಯಂತಹ ತಿಂಡಿ ಇಷ್ಟವಾಗೋದು ನೋಡಬಹುದು. ಹಾಗೆ ನಾವಿಂದು ಈ ಹಸಿರು ಬಟಾಣಿಯಲ್ಲಿ ಮಾಡುವಂತಹ ಅದ್ಭುತ ರುಚಿಯ ಮಸಾಲೆ ಬಟಾಣಿಯನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಈ ಹಸಿರು ಬಟಾಣಿಯು ಉಪ್ಪು, ಖಾರ, ಮಸಾಲೆಯೊಂದಿಗೆ ಬೆರೆತು ಅದ್ಭುತವಾದ ರುಚಿ ನೀಡುತ್ತೆ. ಟೈಮ್ ಪಾಸ್‌ಗೆ ಕೈಯಲ್ಲಿ ಈ ಕಡ್ಲೆ ಇದ್ದರೆ ಸಮಯ ಹೋಗೋದು ನಿಮಗೆ ತಿಳಿಯೋದಿಲ್ಲ. ಹಾಗೆ ಈ ಬಟಾಣಿಯು ನಿಮ್ಮ ಆರೋಗ್ಯಕ್ಕೂ ಉತ್ತಮ. ಆದ್ರೆ ಅಂಗಡಿ, ಬೇಕರಿಯಲ್ಲೀಗ ಈ ಮಸಾಲೆ ಬಟಾಣಿಯ ದರ ಕೇಳಿದ್ರೆ ಅಚ್ಚರಿಯಾಗುತ್ತೆ. ಹಾಗಾದ್ರೆ ಈ ಮಸಾಲೆ ಬಟಾಣಿಯನ್ನು ಮನೆಯಲ್ಲಿ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಸಾಲ ಬಟಾಣಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬಟಾಣಿ
- ಉಪ್ಪು
- ಖಾರದ ಪುಡಿ
- ಎಣ್ಣೆ
- ಸೋಡಾ
- ಧನಿಯಾ ಪುಡಿ
- ಜೀರಿಗೆ ಪುಡಿ
ಮಸಾಲ ಬಟಾಣಿ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ಗೆ ಬಟಾಣಿಗಳನ್ನು ಹಾಕಿಕೊಳ್ಳಿ, ನಂತರ ಬಟಾಣಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಅದಕ್ಕೆ ಅರ್ಧ ಸ್ಪೂನ್ ಸೋಡಾ, ಉಪ್ಪು ನೀರು ಹಾಕಿಕೊಂಡು ನೆನೆಯಲು ಬಿಡಬೇಕು. ಒಂದು ರಾತ್ರಿ ಈ ಬಟಾಣಿಯನ್ನು ನೆನೆಯಲು ಬಿಡಬೇಕು. ಹೀಗೆ ನೆನೆಸಿದರೆ ಬಟಾಣಿ ಮೃದುವಾಗಿ ಬರುತ್ತದೆ.
ಈಗ ಮಾರನೆ ದಿನ ಬಟಾಣಿಯನ್ನು ತೆಗೆದು ಮತ್ತೆ ಎರಡು ಬಾರು ತೊಳೆದು ಒಂದು ಬಟ್ಟೆಯಲ್ಲಿ ಹಾಕಿ ಒಣಗಿಸಿಕೊಳ್ಳಿ. ನೀರು ಇಲ್ಲದಂತೆ ಚೆನ್ನಾಗಿ ಒಣಗಬೇಕು. ನೀವು ಫ್ಯಾನ್ ಕೆಳಗೆ ಇಟ್ಟು ಒಣಗಿಸಬಹುದು. 15 ನಿಮಿಷ ಒಣಗಿಸಿದ ಬಳಿಕ ಈ ಬಟಾಣಿಯನ್ನು ತೆಗೆದು ಮತ್ತೆ ಪ್ಲೇಟ್‌ಗೆ ಹಾಕಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಸ್ವಲ್ಪ ಬಟಾಣಿಯನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನೀವು ಜ್ಯೂಸ್ ಜರಡಿ ಹಿಡಿಯುವ ದೊಡ್ಡ ಜರಡಿ ಇದ್ದರೆ ಅದರ ಒಳಗೆ ಹಾಕಿ ಎಣ್ಣೆಯಲ್ಲಿ ಹಿಡಿಯಬಹುದು. ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಹೀಗೆ ಎಣ್ಣೆಯಲ್ಲಿ ಫ್ರೈ ಮಾಡುವಾಗ ಸಿಡಿಯುವ ಸಾಧ್ಯತೆ ಇರುತ್ತೆ. ಹೀಗಾಗಿ ಎಚ್ಚರದಿಂದ ಇರಬೇಕು. ಆಗಾಗ ತಿರುಗಿಸುತ್ತಾ ಮೇಲೆ ಎತ್ತಿ ಮತ್ತೆ ಎಣ್ಣೆಯಲ್ಲಿ ಹಾಕುವುದು ಮಾಡುಯತ್ತಿರಬೇಕು.
ಸುಮಾರು 10ರಿಂದ 15 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಅನಂತರ ಈ ಬಟಾಣಿಯನ್ನು ಒಂದು ಬಟ್ಟೆಯ ಮೇಲೆ ಹಾಕಿಕೊಳ್ಳಿ. ಇದು ಎಣ್ಣೆಯನ್ನು ಹೀರಿಕೊಳ್ಳುತ್ತೆ. ಬಟ್ಟೆಯಿಂದ ಒರೆಸಿದರೆ ಎಣ್ಣೆ ಹೀರಿಕೊಳ್ಳುತ್ತೆ. ಈಗ ಬೌಲ್‌ನಲ್ಲಿರುವ ಬಟಾಣಿಗೆ ಉಪ್ಪು, ಖಾರದ ಪುಡಿ, ಚಿಟಿಕೆ ಧನಿಯಾ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯ ಮಸಾಲೆ ಕಡ್ಲೆ ರೆಡಿಯಾಗುತ್ತೆ. ನೀವು ಇದನ್ನು ಗಾಳಿ ಆಡದಂತೆ ಇಟ್ಟರೆ ಹಲವು ದಿನ ಇಟ್ಟು ಸವಿಯಬಹುದು.



Click it and Unblock the Notifications