Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರೀತಿ ತೆಂಗಿನಕಾಯಿ ಮಸಾಲೆ ಚಟ್ನಿ ಮಾಡಿದ್ರೆ ಚಟ್ನಿಯನ್ನೇ ಖಾಲಿ ಮಾಡ್ತಾರೆ..! ವಿಧಾನ ಇಲ್ಲಿದೆ?
ನೀವು ಬೆಳಗ್ಗೆ ತಿಂಡಿಗೆ ಅದ್ಭುತ ರುಚಿಯಲ್ಲಿ ಬಗೆ ಬಗೆಯ ಚಟ್ನಿ ಮಾಡಿ ಸವಿಯುವುದು ನೋಡಬಹುದು. ಬಹುತೇಕ ಎಲ್ಲಾ ತಿಂಡಿಯ ಜೊತೆಗೂ ನೀವು ಚಟ್ನಿ ಮಾಡಿ ಸವಿಯುವುದು ಅಭ್ಯಾಸ ಆಗಿರುತ್ತೆ. ಅದರಲ್ಲೂ ಇಡ್ಲಿ ದೋಸೆಯಂತಹ ಖಾದ್ಯ ಮಾಡಿದಾಗ ಚಟ್ನಿ ಇಲ್ಲ ಅಂದರೆ ಆ ತಿಂಡಿ ಮಾಡಿ ಸವಿಯುವುದರ ಟೇಸ್ಟ್ ಇರುವುದಿಲ್ಲ.
ಆದ್ರೆ ಚಟ್ನಿ ಅಂದ ಕೂಡಲೇ ಹಲವರಿಗೆ ಹುರಿಗಡಲೆ ಚಟ್ನಿ, ತೆಂಗಿನಕಾಯಿ ಚಟ್ನಿ ಸೇರಿ ಸುಲಭವಾಗಿ ಮಾಡುವ ಕೆಡಲೆ ಚಟ್ನಿಗಳ ಮಾಡುವುದು ನೋಡಬಹುದು. ಏಕೆಂದರೆ ಇದರ ರುಚಿಯಲ್ಲಿ ಯಾವ ತಿಂಡಿಯ ಜೊತೆಗಾದರು ಸವಿಯಬಹುದು. ಹಾಗೆ ಮಾಡುವುದು ಕೂಡ ತುಬಾನೆ ಸುಲಭ. ಇನ್ನು ಈ ಚಟ್ನಿಗಳ ಮಾಡುವಾಗ ಕಡಿಮೆ ವಸ್ತಗಳ ನಿಮ್ಮ ಜೊತೆಗಿದ್ದರೆ ಸಾಕಾಗುತ್ತೆ.

ಆದ್ರೆ ನಾವಿಂದು ಬಹಳ ಸುಲಭವಾಗಿ ತೆಂಗಿನಕಾಯಿ ಕೆಂಪು ಚಟ್ನಿ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಕೂಡ ತೆಂಗಿನಕಾಯಿಯ ಚಟ್ನಿ ಮಾಡಿ ಸವಿದಿರುತ್ತೀರಿ. ಆದ್ರೆ ಈ ತೆಂಗಿನಕಾಯಿ ಚಟ್ನಿಯಲ್ಲೂ ಹಲವು ಬಗೆಗಳಿವೆ. ನೀವು ಸುಲಭದ ವಿಧಾನದಲ್ಲಿಯೂ ಮಾಡಬಹುದು ಹಾಗೆ ಅದ್ಭುತ ರುಚಿಯ ಮಸಾಲೆ ಭರಿತ ತೆಂಗಿನಕಾಯಿ ಚಟ್ನಿ ಕೂಡ ಸವಿಯಬಹುದು.
ನಾವಿಂದು ಮಸಾಲೆ ಭರಿತ ತೆಂಗಿನಕಾಯಿ ಕೆಂಪು ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಹಾಗೆ ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ಮಸಾಲೆ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ತೆಂಗಿನ ಕಾಯಿ
- ಕೆಂಪು ಮೆಣಸಿನಕಾಯ
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಹುಣಸೆ ಹಣ್ಣು
- ಹುರಿಕಡಲೆ
- ಕಡ್ಲೆ ಬೇಳೆ
- ಜೀರಿಗೆ
- ಸಾಸಿವೆ
- ಎಣ್ಣೆ
- ಉಪ್ಪು
- ಕರಿ ಬೇವು
ತೆಂಗಿನಕಾಯಿ ಮಸಾಲೆ ಚಟ್ನಿ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಬಿಸಿ ಮಾಡಿ ಬಳಿಕ ಸ್ವಲ್ಪ ಕಡಲೆ ಬೀಜ, ಹುರಿಗಡಲೆ ಹಾಕಿಕೊಂಡು ಹುರಿದುಕೊಳ್ಳಬೇಕು. 3 ನಿಮಿಷಗಳ ಕಾಲ ಫ್ರೈ ಮಾಡಿದ ಬಳಿಕ ಇದಕ್ಕೆ 3 ಹಸಿ ಮೆಣಸು ಕೂಡ ಇದಕ್ಕೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಕರಿಬೇವು ಬೆಳ್ಳುಳ್ಳಿ ಸಹ ಹಾಕಿಕೊಂಡು 1 ನಿಮಿಷ ಹುರಿದುಕೊಳ್ಳಬೇಕು.
ಇದಾದ ಬಳಿಕ ಬಾಣಲೆಗೆ ಸಣ್ಣದಾಗಿ ಹೆಚ್ಚಿಕೊಂಡಿರುವ ತೆಂಗಿನಕಾಯಿ ಪೀಸ್‌ಗಳನ್ನು ಕೂಡ ಹಾಕಿ ಹುರಿದುಕೊಳ್ಳಬೇಕು. ಮೇಲೆ ಕೊತ್ತಂಬರಿ ಕೂಡ ಹಾಕಿ ಒಲೆ ಆಫ್ ಮಾಡಿಕೊಳ್ಳಿ. ನಂತರ ಈ ವಸ್ತು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಇದಕ್ಕೆ ಹುಣಸೆ ಹುಳಿ, ರುಚಿಗೆ ತಕ್ಕಷ್ಟು ಉಪ್ಪು, ಹಾಗೆ ಸ್ವಲ್ಪವೇ ಸ್ವಲ್ಪ ನೀರು ಹಾಕಿ ರುಬ್ಬಬೇಕು.
ಬಹಳ ತೆಳುವಾಗಿ ರುಬ್ಬಿಕೊಳ್ಳಬೇಡಿ. ಇದನ್ನು ಬಹಳ ತರಿತರಿಯಾಗಿಯೂ ರುಬ್ಬಬೇಡಿ. ನಂತರ ಈ ಚಟ್ನಿಯನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ ಈ ಚಟ್ನಿಯೊಂದಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತೆಂಗಿನಕಾಯಿ ಮಸಾಲೆ ಚಟ್ನಿ ರೆಡಿಯಾಗುತ್ತದೆ. ನೀವು ಈ ಚಟ್ನಿಯನ್ನ ಯಾವುದೇ ತಿಂಡಿಯ ಜೊತೆಗೆ ಸವಿಯಬಹುದು.
ನೀವು ಕೂಡ ಈ ರೀತಿ ಚಟ್ನಿ ಮಾಡಿ ಸವಿದು ನೋಡಿ ಹಲವತು ತಿಂಡಿಯ ಬಿಟ್ಟು ಈ ಚಟ್ನಿಯನ್ನು ಮಾತ್ರ ಸವಿಯಲು ಮುಂದಾಗೋದು ನೋಡಬಹುದು.



Click it and Unblock the Notifications