Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗ್ಗೆ ಗಡಿಬಿಡಿಯಲ್ಲಿ ಮಸಾಲೆ ಅವಲಕ್ಕಿ ಮಾಡಿ.! ಸ್ಪೆಷಲ್ ತಿಂಡಿ ರುಚಿ ಟ್ರೈ ಮಾಡಿ!
ಬೆಳಗ್ಗಿನ ಗಡಿಬಿಡಿಯಲ್ಲಿ ಗೃಹಿಣಿಯರಿಗೆ ಯಾವ ತಿಂಡಿ ಮಾಡಬೇಕು ಅನ್ನೋದೆ ದೊಡ್ಡ ಸವಾಲಾಗಿರುತ್ತದೆ. ಎಲ್ಲಾ ವಸ್ತುಗಳು ಕಣ್ಣ ಮುಂದೆ ಇದ್ದರೆ ತಿಂಡಿ ರೆಡಿಯಾಗುತ್ತದೆ. ಆದರೆ ಯಾವ ತಿಂಡಿ ಮಾಡಬೇಕು ಅನ್ನೋದೆ ಪ್ರಶ್ನೆಯಾಗಿ ಬಿಡುತ್ತದೆ. ಏಕೆಂದರೆ ಬೆಳಗ್ಗೆ ಗಡಿಬಿಡಿಯಲ್ಲಿ ಸುಲಭವಾಗಿ, ಬೇಗ ಯಾವ ತಿಂಡಿ ಮಾಡಬಹುದು.
ಸುಲಭವಾಗಿ ಎಲ್ಲರಿಗೂ ರುಚಿ ರುಚಿಯಾಗಿ ಮಾಡುವ ತಿಂಡಿ ಅದರೆ ಮಸಾಲ ಅವಲಕ್ಕಿ. ಕೆಲವರಿಗೆ ಅವಲಕ್ಕಿ ತಿನ್ನುವುದು ಅಂದರೆ ಆಗುವುದಿಲ್ಲ. ಮತ್ತೆ ಕೆಲವರು ಹೋಟೆಲ್‌ಗೆ ತೆರಳಿದ್ದರೂ ಅಲ್ಲಿ ಅವಲಕ್ಕಿ ಉಪ್ಪಿಟ್ಟು ಆರ್ಡರ್ ಮಾಡಿ ಸವಿಯುತ್ತಾರೆ. ಈ ಅವಲಕ್ಕಿಗೆ ಏನೆಲ್ಲಾ ಹಾಕಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಹಾಗಾದ್ರೆ ಎಲ್ಲರಿಗೂ ಇಷ್ಟವಾಗುವಂತೆ ಈ ಮಸಾಲ ಅವಲಕ್ಕಿ ಮಾಡುವುದು ಹೇಗೆ?

ಮಸಾಲೆ ಅವಲಕ್ಕಿ ಮಾಡಿದರೆ ಎಲ್ಲರು ಬಾಯಿ ಚಪ್ಪರಿಸಿ ಸವಿಯುತ್ತಾರೆ. ಹಾಗಾದ್ರೆ ಈ ಮಸಾಲೆ ಅವಲಕ್ಕಿ ಮಾಡುವುದು ಹೇಗೆ ನೋಡೋಣ. ಮಸಾಲೆ ಅವಲಕ್ಕಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ತಿಂಡಿ ಮಾಡುವುದು ಹೇಗೆ? ಮಾಡುವ ಸರಿಯಾದ ಕ್ರಮವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರುಚಿ ರುಚಿಯ ಮಸಾಲೆ ಅವಲಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
- ಪೇಪರ್ ಅವಲಕ್ಕಿ ಅಥವಾ ತೆಳು ಅವಲಕ್ಕಿ
- ಸಕ್ಕರೆ- 3 ಟೀ ಸ್ಪೂನ್
- ಕಡಲೆ ಬೀಜ
- ತೆಂಗಿನಕಾಯಿ
- ಬೆಳ್ಳುಳ್ಳಿ - 1
- ಹುರಿಗಡಲೆ
- ಗೋಡಂಬಿ
- ದ್ರಾಕ್ಷಿ
- ಹಸಿ ಮೆಣಸು
- ಕರಿಬೇವು
- ಜೀರಿಗೆ
- ಇಂಗು
- ಸಾಸಿವೆ
ಮಸಾಲೆ ಅವಲಕ್ಕಿ ಮಾಡುವ ವಿಧಾನ
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಅವಲಕ್ಕಿ ಹಾಕಿ ಹುರಿದುಕೊಳ್ಳಿ. ಉರಿ ಸಣ್ಣದಾಗಿ ಇಟ್ಟುಕೊಳ್ಳಿ. 1 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ. ಬಳಿಕ ಈ ಅವಲಕ್ಕಿ ಪಾತ್ರೆಯಿಂದ ತೆಗೆದು ಮತ್ತೊಂದು ಪಾತ್ರೆಗೆ ಹಾಕಿ. ಮತ್ತೆ ಅದೇ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಡಲೆ ಬೀಜ ಹಾಕಿ ಫ್ರೈ ಮಾಡಿ ತೆಗೆದುಕೊಂಡು ಬದಿಗಿಡಿ.
ಮತ್ತೆ ಅದಕ್ಕೆ ಹುರಿಗಡಲೆ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಈಗ ತೆಂಗಿನಕಾಯಿಯನ್ನು ಸಹ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಬೆಳ್ಳುಳ್ಳಿಯನ್ನು ಸಹ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಗೋಡಂಬಿ, ದ್ರಾಕ್ಷಿ ಸಹ ಹಾಕಿಕೊಂಡು ಮಾಡಬಹುದು. ಇದನ್ನು ಹಾಕದೆಯೂ ಮಾಡಬಹುದು. ಈಗ ಪಾತ್ರೆಗೆ ಸಾಸಿವೆ ಹಾಗೂ ಜೀರಿಗೆ ಮತ್ತು ಇಂಗು, ಹಸಿ ಮೆಣಸು, ಕರಿಬೇವು ಹಾಕಿಕೊಂಡು ಫ್ರೈ ಮಾಡಿ.
2 ನಿಮಿಷ ಫ್ರೈ ಮಾಡಿದ ಬಳಿಕ, ಈ ಮೊದಲು ಫ್ರೈ ಮಾಡಿಕೊಂಡಿರುವ ಎಲ್ಲಾ ಪದಾರ್ಥಗಳನ್ನು ಹಾಕಿಕೊಂಡು ತಿರುಗಿಸಿ. ಈಗ ಅರಶಿನ ಹಾಗೂ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಹುರಿದುಕೊಂಡಿರುವ ಅವಲಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ ನಂತರ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸ್ಪೆಷಲ್ ಮಲಾಸ ಅವಲಕ್ಕಿ ರೆಡಿಯಾಗಿರುತ್ತದೆ. ಇದನ್ನು ಯಾವಾಗ ಬೇಕಾದರು ಮಾಡಬಹುದು. 15ರಿಂದ 20 ದಿನಗಳ ಕಾಲ ಇದನ್ನು ಗಾಳಿಯಾಡದ ಕಡೆ ಇಟ್ಟು ಸವಿಯಬಹುದು.



Click it and Unblock the Notifications