Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2 ತಿಂಗಳು ಇಟ್ಟರು ಹಾಳಾಗಲ್ಲ ಈ ಮಾವಿನಕಾಯಿ ತೊಕ್ಕು..! ಮಾಡೋದು ಹೇಗೆ ನೋಡಿ!
ನೀವು ಊಟ ಹಾಗೆ ತಿಂಡಿಯ ಜೊತೆಗೆ ವಿವಿಧ ಬಗೆಯ ತೊಕ್ಕು ಮಾಡಿ ಸವಿದಿರಬಹುದು. ಹಲವು ತರಕಾರಿಗಳಿಂದ ಮಾಡುವ ತೊಕ್ಕು ಊಟಕ್ಕೂ ಹಾಗೂ ತಿಂಡಿಗೂ ಬಹಳ ರುಚಿ ನೀಡಲಿದೆ. ಅದರಲ್ಲೂ ತಿಂಡಿಗೆ ಹೆಚ್ಚು ರುಚಿ ನೀಡುವ ಖಾದ್ಯ ಇದು. ಹೀಗಾಗಿ ಎಲ್ಲರಿಗೂ ತೊಕ್ಕು ಮಾಡಿ ಸವಿಯುವುದು ಅಂದರೆ ಪಂಚಪ್ರಾಣ. ಅದ್ರಲ್ಲೂ ಟೊಮೆಟೋ ತೊಕ್ಕು, ಹುಣಸೆ ಹುಳಿ ತೊಕ್ಕು, ನಲ್ಲಿಕಾಯಿ ತೊಕ್ಕು ಹೆಸರು ಕೇಳಿದರೆ ಬಾಯಲ್ಲಿ ನೀರು ಬರಲಿದೆ.
ಅದರಲ್ಲೂ ಈಗ ಮಾವಿನಕಾಯಿಯ ಸೀಸನ್ ಆರಂಭಗೊಂಡಿದೆ. ಈ ಸಮಯದಲ್ಲಿ ನಾವು ಮಾವಿನಕಾಯಿ ತೊಕ್ಕು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಮಾವಿನಕಾಯಿಯ ಯಾವುದೇ ಖಾದ್ಯದ ಹೆಸರು ಕೇಳಿದರೂ ಕೂಡ ಬಾಯಲ್ಲಿ ನೀರು ಬರಲಿದೆ. ಅದರಲ್ಲೂ ಮಾವಿನ ಕಾಯಿಯ ತೊಕ್ಕು ಅಂದರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ.

ಮಾವಿನಕಾಯಿ ತೊಕ್ಕು ಬೆಳಗ್ಗೆ ತಿಂಡಿಗೆ ಹಾಗೆ ಊಟಕ್ಕೆ ಬಹಳ ರುಚಿ ನೀಡಲಿದೆ. ಇದನ್ನು ಮಾಡೋದು ಕೂಡ ಬಹಳ ಸುಲಭ. ಹಾಗಾದ್ರೆ ಈ ಮಾವಿನಕಾಯಿ ಸೀಸನ್‌ನಲ್ಲಿ ಈ ಮಾವಿನಕಾಯಿ ತೊಕ್ಕು ಮಾಡುವುದು ಹೇಗೆ? ಮಾವಿನಕಾಯಿ ತೊಕ್ಕು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಈ ಕುರಿತು ಲೇಖನದಲ್ಲಿ ತಿಳಿದುಕೊಳ್ಳಿ.
ಮಾವಿನಕಾಯಿ ತೊಕ್ಕು ಮಾಡಲು ಬೇಕಾಗುವ ಪದಾರ್ಥಗಳು
- ಮಾವಿನ ಕಾಯಿ
- ಒಣ ಮೆಣಸು
- ಸಾಸಿವೆ
- ಎಣ್ಣೆ
- ಉಪ್ಪು
- ಸಾಂಬಾರ್ ಪುಡಿ
- ಇಂಗು
- ಕರಿಬೇವು
ಮಾವಿನಕಾಯಿ ತೊಕ್ಕು ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಈ ಮಾವಿನಕಾಯಿ ತೊಕ್ಕು ಮಾಡಲು ಸ್ವಲ್ಪ ಹೆಚ್ಚಿನ ಎಣ್ಣೆಯನ್ನೇ ಬಳಸಿ. ಬಳಿಕ ಎಣ್ಣೆ ಬಿಸಿಯಾದಾಗ ಇದಕ್ಕೆ ಸಾಸಿವೆ, ಬೆಳ್ಳುಳ್ಳಿ, ಒಣ ಮೆಣಸು, ಕರಿಬೇವು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ತುರಿದುಕೊಂಡಿರುವ ಮಾವಿನಕಾಯಿಯನ್ನು ಹಾಕಬೇಕು. ಈ ಮಾವಿನಕಾಯಿಯ ಸಿಪ್ಪೆ ತೆಗದು ಬಳಿಕ ತುರಿದುಕೊಳ್ಳಬೇಕು.
ಹಾಗೆ ಮಾವಿನಕಾಯಿ ಹಾಕಿ ತಕ್ಷಣ ಇದಕ್ಕೆ 2 ಸ್ಪೂನ್ ಸಾಂಬಾರ್ ಪುಡಿ, ಅರ್ಧ ಚಮಚ ಖಾರದ ಪುಡಿ, ಉಪ್ಪು, ಇಂಗು ಹಾಕಿ ಮಧ್ಯಮ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಬೇಕು. ಈ ಮಸಾಲೆ ಚೆನ್ನಾಗಿ ಮಿಕ್ಸ್ ಆಗಬೇಕು. 5 ನಿಮಿಷದ ಬಳಿಕ ಉರಿ ಸಣ್ಣದಾಗಿ ಮಾಡಿ ಮತ್ತೆ 4 ನಿಮಿಷ ಫ್ರೈ ಮಾಡಲು ಬಿಡಿ.
ಇದಕ್ಕೆ ಖಾರದ ಪುಡಿ ಹಾಕದೆಯೂ ಮಾಡಬಹುದು. ಹಾಗೆ 4 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ನಂತರ ತಣ್ಣಗಾಗಲು ಬಿಟ್ಟು ಯಾವುದಾದರು ಬಾಕ್ಸ್‌ಗೆ ಹಾಕಿಟ್ಟುಕೊಳ್ಳಿ. ನೀವು ಫ್ರಿಡ್ಜ್‌ನಲ್ಲಿ ಇಟ್ಟರೆ ಸುಮಾರು 2 ತಿಂಗಳ ಕಾಲ ಇಟ್ಟು ಸವಿಯಬಹುದು. ನೀವು ಸಹ ಈ ರೀತಿ ಮಾವಿನಕಾಯಿ ತೊಕ್ಕು ಮಾಡಿ ಸವಿದು ನೋಡಿ. ಇದು ಊಟ ಹಾಗೆ ತಿಂಡಿಯ ಜೊತೆಗೆ ಬಹಳ ರುಚಿ ನೀಡಲಿದೆ.
ಮೊದಲು ಮಾವಿನಕಾಯಿ ಪೂರ್ಣ ಹಣ್ಣಾಗಿರಬಾರದು, ಕಾಯಿಯಾಗಿರಬೇಕು. ಹಾಗೆ ನೀರು ಬಳಸದೆಯೇ ಈ ತೊಕ್ಕು ಮಾಡಿ. ಬೇಕಿದ್ದರೆ ಬೆಳ್ಳುಳ್ಳಿ ಹೆಚ್ಚು ಬಳಸಿ. ಇದರ ರುಚಿಗೆ ನೀವು ಊಟ ತಿಂಡಿ ಹೆಚ್ಚಿಗೆ ಸವಿಯಲು ಮುಂದಾಗುತ್ತೀರಿ. ಮಾಡೋದು ಕೂಡ ತುಂಬಾನೆ ಸುಲಭ. ಹಾಗೆ ಮಾವಿನಕಾಯಿಯ ತೊಕ್ಕು 2 ತಿಂಗಳ ಕಾಲ ಇಟ್ಟು ಸವಿಯಬಹುದಾಗಿದೆ. ಹೀಗಾಗಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಾಡಿಟ್ಟುಕೊಳ್ಳಿ.



Click it and Unblock the Notifications