Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾವಿನಕಾಯಿ ಉಪ್ಪಿನಕಾಯಿ ಮಾಡಿ ನೋಡಿ..! ಒಂಚೂರು ಅನ್ನ ತಟ್ಟೆಯಲ್ಲಿ ಬಿಡಲ್ಲ..!!
ಮಾವಿನ ಕಾಯಿ ಸೀಸನ್ ಆರಂಭಗೊಂಡಿದೆ. ಮಾರುಕಟ್ಟೆಯಲ್ಲಿ ನಿಧಾನವಾಗಿ ಹಣ್ಣುಗಳು ಕಾಣಸಿಗುತ್ತಿವೆ. ಹಾಗೆ ಮಾವಿನ ಕಾಯಿಗಳು ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಮಾವಿನ ಕಾಯಿಯಿಂದ ಮಾಡಬಹುದುದಾದ ಹತ್ತು ಹಲವು ಖಾದ್ಯಗಳ ಕುರಿತಾಗಿ ನಾವು ತಿಳಿದಿದ್ದೇವೆ. ಅದರಲ್ಲೂ ಮಾವಿನಕಾಯಿ ಚಟ್ನಿ, ಉಪ್ಪಿನಕಾಯಿ ಅದ್ಭುತ ರುಚಿ ನೀಡುವಂತಹ ಖಾದ್ಯವಾಗಿವೆ.
ಅದರಲ್ಲೂ ಈ ಮಾವಿನಕಾಯಿಯ ಉಪ್ಪಿನಕಾಯಿಯು ಬಾಯಲ್ಲಿ ನೀರು ತರಿಸಲಿದೆ. ಹುಳಿ ಹುಳಿ ಖಾರವಾಗಿರುವ ಉಪ್ಪಿನಕಾಯಿ ನಿಮ್ಮ ನಾಲಗೆ ರುಚಿ ಹೆಚ್ಚಿಸುವ ಜೊತೆಗೆ ಊಟ ಮತ್ತಷ್ಟು ಸವಿಯಲು ಮುಂದಾಗಲು ಇದು ಕಾರಣವಾಗುತ್ತೆ. ಉಪ್ಪಿನಕಾಯಿ ಇದ್ದರೆ ಊಟ ಬಹಳ ಚೆನ್ನಾಗಿ ಸೇರುತ್ತದೆ. ಹಾಗೆ ಮಾವಿನಕಾಯಿಯ ಉಪ್ಪಿನಕಾಯಿ ಇದ್ದರೆ ಅದ್ಭುತವಾಗಿರುತ್ತೆ.

ಮಾವಿನಕಾಯಿಯನ್ನು ಕತ್ತರಿಸಿ ಉಪ್ಪಿನಲ್ಲಿ ಹಾಕಿಟ್ಟು ಬಳಿಕ ಖಾರ ಹಾಕಿ ಇಟ್ಟರೆ ಊಟದ ಜೊತೆ ಸವಿಯಲು ಬಹಳ ರುಚಿ ನೀಡಲಿದೆ. ಇದು ಮಾರುಕಟ್ಟೆಯಲ್ಲಿ ಸಿಗವಂತಹ ಮಾವಿನಕಾಯಿ ಉಪ್ಪಿಯಕಾಯಿಯಂತೆಯೇ ರುಚಿ ನೀಡಲಿದೆ. ಹಾಗಾದ್ರೆ ಈ ಮಾವಿನಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮಾವಿನಕಾಯಿ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನಕಾಯಿ ಉಪ್ಪಿನಕಾಯಿ ಮಾಡಲು ಬೇಕಾಗುವ ವಸ್ತುಗಳು
ಮಾವಿನಕಾಯಿ
ಖಾರದ ಪುಡಿ
ಉಪ್ಪು
ಎಣ್ಣೆ
ಒಣ ಮೆಣಸು
ಮೆಂತ್ಯ
ಅರಶಿಣ
ಇಂಗು
ಸಾಸಿವೆ
ಬೆಳ್ಳುಳ್ಳಿ
ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನವೇನು?
ಮೊದಲು ಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಕೊಳ್ಳಿ. ಹಾಗೆ ನೀರಿಲ್ಲದಂತೆ ಒಣಗಲು ಬಿಡಿ. ಮೊದಲು ಮೆಂತ್ಯ ಹಾಗೂ ಸಾಸಿವೆಯನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಪೌಡರ್ ಮಾಡಿಕೊಂಡು ಇಟ್ಟುಕೊಳ್ಳಿ. ಈ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಹೆಚ್ಚಿಕೊಂಡಿರುವ ಮಾವಿನಕಾಯಿ ಹಾಕಿಕೊಂಡು ಬಳಿಕ ಇದಕ್ಕೆ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ.
ನಂತರ ಮಿಕ್ಸಿಯಲ್ಲಿ ರುಬ್ಬಿದ್ದ ಸಾಸಿವೆ, ಮೆಂತ್ಯ ಪುಡಿಯಲ್ಲಿ ಅರ್ಧ ಸ್ಪೂನ್ ಹಾಕಿಕೊಳ್ಳಿ. ಹಾಗೆ ಉಪ್ಪು ಮತ್ತು ಅರಶಿಣ ಕೂಡ ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಹಾಕಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಇಂಗು, ಜಜ್ಜಿಕೊಂಡಿರುವ ಬೆಳ್ಳುಳ್ಳಿ ಸಹ ಹಾಕಿಕೊಳ್ಳಿ. ನಂತರ ಇದಕ್ಕೆ ಒಣ ಮೆಣಸು ಕೂಡ ಹಾಕಿ.
ಈ ಒಣ ಮೆಣಸು ಎಣ್ಣೆಯ ಮೇಲೆ ತೇಲುವಷ್ಟು ಎಣ್ಣೆ ಹಾಕಿರಿ. ಒಣ ಮೆಣಸು ಹಾಕಿದ ಬಳಿಕ ಒಲೆ ಆಫ್ ಮಾಡಿಕೊಂಡು ಈ ಒಗ್ಗರಣೆಯನ್ನು ಖಾರ ಹಾಕಿ ಕಲಸಿಕೊಂಡಿದ್ದ ಮಾವಿನಕಾಯಿಯ ಪಾತ್ರೆಗೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ತಟ್ಟೆ ಮುಚ್ಚಿ ಇಡಬೇಕು. ಇಡೀ ಒಂದು ದಿನ ಅಥವಾ ಎರಡು ದಿನವಾದರು ಹಾಗೆ ಇಡಬೇಕು. ಆಗಾಗ ಮಿಕ್ಸ್ ಮಾಡಿಕೊಳ್ಳುತ್ತಾ ಇರಬೇಕು. ಹೀಗೆ ಮಾಡಿದರೆ ಖಾರ ಚೆನ್ನಾಗಿ ಹಿಡಿಯಲಿದೆ, ನಂತರ ನೀವು ಊಟಕ್ಕೆ ಈ ಉಪ್ಪಿನಕಾಯಿ ಸವಿಯಬಹುದು.
ನೀವು ಖಾರ ನೊಡಿ ಹಾಕಿಕೊಂಡು ಸವಿಯಲು ಮುಂದಾಗಿ ಏಕೆಂದರೆ ಹೆಚ್ಚು ಖಾರ ಹಾಕಿದರೆ ಹುಳಿಯ ರುಚಿ ಸಿಗುವುದಿಲ್ಲ, ಬದಲಿಗೆ ಊಟದ ರುಚಿಯೂ ಹಾಳಾಗುತ್ತದೆ.



Click it and Unblock the Notifications