ಮ್ಯಾಂಗೋ ಮಿಲ್ಕ್‌ ಹೀಗೆ ಮಾಡಿ ನೋಡಿ, ಹೊರಗಡೆ ಎಲ್ಲಿಯೂ ನಿಮಗೆ ಇಷ್ಟು ರುಚಿಯಾಗಿ ಸಿಗಲ್ಲ

Posted By:

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಾಗಿದೆ, ಇನ್ನು ಎರಡು ತಿಂಗಳು ಮಾವಿನ ಹಣ್ಣಿನದ್ದೇ ಕಾರುಬಾರು, ಈ ಸಮಯದಲ್ಲಿ ದಿನಾ ಒಂದು ಮಿಲ್ಕ್‌ಶೇಕ್ ಕುಡಿಯದಿದ್ದರೆ ಹೇಗೆ, ಅದರಲ್ಲೂ ಬಿಸಿಲು ಬೇರೆ ಮಿಲ್ಕ್‌ಶೇಕ್‌ ಸೂಪರ್.ಇನ್ನು ಮನೆಗೆ ಬರುವಾಗ ಗೆಸ್ಟ್‌ಗೂ ಇದನ್ನೂ ಈ ಬೇಸಿಗೆಯಲ್ಲಿ ಟೀ, ಕಾಫಿ ಬದಲಿಗೆ ಈ ಮಿಲ್ಕ್‌ಶೇಕ್ ಕೊಡಬಹುದು.

ಇದನ್ನು ಮಾಡಲು ಕೂಡ ಹೆಚ್ಚು ಸಾಮಗ್ರಿ ಬೇಕಾಗಿಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ನೋಡೋಣ ಬನ್ನಿ:

Mango milk Shake Recipe

ಬೇಕಾಗುವ ಸಾಮಗ್ರಿ
ಮಾವಿನ ಹಣ್ಣು 2
ಒಂದೂವರೆ ಕಪ್‌ ತಣ್ಣನೆಯ ಹಾಲು
2 ಚಮಚ ಸಕ್ಕರೆ (ಜೇನು, ಮೇಪಲ್ ಸಿರಪ್, ಕೋಕನಟ್‌ ಶುಗರ್, ಬೆಲ್ಲ) (ಐಸ್‌ ಕ್ರೀಮ್ ಹಾಲುವುದಾದರೆ ಇವುಗಳನ್ನು ಬಳಸುವ ಅಗ್ಯತವಿಲ್ಲ)
ಒಂದೂವರೆ ಚಮಚ ವೆನಿಲ್ಲಾ ಎರ್ಕ್‌ಟ್ರಾಕ್ಸ್

ಅಲಂಕಾರಕ್ಕೆ
ಸ್ವಲ್ಪ ನೆಟ್ಸ್‌ ಅಥವಾ ಮಾವಿನ ಹಣ್ಣಿನ ಹರಳು

ಮಾವಿನಹಣ್ಣಿನ ಮಿಲ್ಕ್‌ ಶೇಕ್ ಮಾಡುವಾಗ ಗೋಡಂಬಿ ಅಥವಾ ಬಾದಾಮಿ ಹಾಕಿದರೆ ಟೇಸ್ಟ್‌ ಇನ್ನೂ ಸೂಪರ್ ಆಗಿರುತ್ತದೆ.

ಮಾಡುವ ವಿಧಾನ
ಮಾವಿನ ಹಣ್ಣಿನ ಸಿಪ್ಪೆ ಸುಲಿದು ಕತ್ತರಿಸಿಡಿ.
ಈಗ ಗ್ರೈಂಡರ್‌ಗೆ ಸಿಪ್ಪೆ ಸುಲಿದ ಬಾದಾಮಿ, ಗೋಡಂಬಿ ಹಾಕಿ, ಸ್ವಲ್ಪ ಹಲು ಹಾಕಿ ಗ್ರೈಂಡ್ ಮಾಡಿ, ನುಣ್ಣನೆ ಪೇಸ್ಟ್ ರೀತಿ ಇರಬೇಕು.

ನಂತರ ಮಾವಿನ ತಿರುಳು ಹಾಕಿ ಗ್ರೈಂಡ್ ಮಾಡಿ, ಅದಾದ ಬಳಿಕ ಸ್ವಲ್ಪ ಐಸ್‌ಕ್ರೀಮ್, ಒಂದು ಸ್ಕೂಪ್ ಹಾಕಿ ಗ್ರೈ ಮಾಡಿ, ಅದಾದ ಬಳಿಕ ತಣ್ಣನೆಯ ಹಾಲನ್ನು ಹಾಕಿ ಗ್ರೈಂಡ್ ಮಾಡಿದರೆ ಹಾಲಿನ ಮಿಲ್ಕ್‌ ಶೇಕ್‌ ರೆಡಿ.

ಇಷ್ಟು ಮಾಡಿದರೆ ಮಿಲ್ಕ್‌ ಶೇಕ್‌ ರೆಡಿ, ಇನ್ನು ನೀವು ಐಸ್‌ಕ್ರೀಮ್ ಸೇರಿಸಿದಿದ್ದರೆ ಸಕ್ಕರೆ, ಜೇನು, ಬೆಲ್ಲ ಹೀಗೆ ಸಿಹಿಗೆ ಇವುಗಳನ್ನು ಸೇರಿಸಬಹುದು.

ಟಿಪ್ಸ್

ಮಾವಿಹಣ್ಣು: ನೀವು ಮಿಲ್ಕ್‌ಶೇಕ್‌ ಮಾಡಲು ತುಂಬಾ ಹಣ್ಣಾದ ಮಾವಿನಹಣ್ಣು ಬಳಸಬೇಕು, ಸ್ವಲ್ಪ ಹಣ್ಣಾದರೆ ಹುಳಿ ಟೇಸ್ಟ್ ಇರುತ್ತದೆ. ಫ್ರೋಝನ್ ಮಾವಿನ ಹಣ್ಣುಗಳನ್ನು ಕೂಡ ಈ ಮಿಲ್ಕ್‌ಶೇಕ್ ಮಾಡಲು ಬಳಸಬಹುದು. ಇನ್ನು ಮಾವಿನಹಣ್ಣಿನಲ್ಲಿ ಹಲವಾರು ಬಗೆಗಳಿವೆ, ತುಂಬಾ ಸಿಹಿ ಇರುವ ಹಣ್ಣುಗಳಿಂದ ಮಾಡಿ.

ಹಾಲು: ನೀವು ಡೈರಿ ಹಾಲನ್ನು ಬಳಸಬಹುದು, ಸೋಯಾ ಮಿಲ್ಕ್‌, ಕೋಕನೆಟ್‌ ಮಿಲ್ಕ್ ಕೂಡ ಬಳಸಬಹುದು. ಹಾಲು ಅಲರ್ಜಿ ಅನ್ನುವವರು ಸ್ವಲ್ಪ ನಟ್ಸ್ ಮತ್ತು ತೆಂಗಿನ ತುರಿ ಗ್ರೈಂಡ್ ಮಾಡಿ ಅದರ ಹಾಲು ತೆಗೆದು ಕೂಡ ಮಿಲ್ಕ್‌ಶೇಕ್ ರೆಡಿ ಮಾಡಬಹುದು.

ಸಿಹಿ
ಇನ್ನು ನೀವು ಸಕ್ಕರೆ ಬಳಸಲು ಇಷ್ಟಪಡಿದಿದ್ದರೆ ಬೆಲ್ಲ ಅಥವಾ ಜೇನು ಸೇರಿಸಬಹುದು. ಡೆಟ್ಸ್‌ ಸಿರಪ್ ಕೂಡ ಬಳಸಬಹುದು. ಸಕ್ಕರೆ ಬಳಸದಿದ್ದರೆ ಒಳ್ಳೆಯದು.
ನಟ್ಸ್: ನಿಮಗೆ ಹೊರಗಡೆ ಖರೀದಿಸುವಾಗ ನಟ್ಸ್ ಬಳಸಲ್ಲ, ಆದರೆ ನೀವು ಮಾಡುವಾಗ ನಟ್ಸ್ ಬಳಸಿ, ರುಚಿ ಸೂಪರ್ ಆಗಿರುತ್ತದೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಐಸ್‌ಕ್ರೀಮ್
ನೀವು ಐಸ್‌ಕ್ರೀಮ್ ಬಳಸುವುದಾದರೆ ಮ್ಯಾಂಗೋ ಐಸ್‌ಕ್ರೀಮ್ ಬಳಸಿದರೆ ಇನ್ನೂ ಒಳ್ಳೆಯದು.

100 ಗ್ರಾಂ ಮಾವಿನಹಣ್ಣಿನಲ್ಲಿರುವ ಪೋಷಕಾಂಶ

ಕ್ಯಾಲೋರಿ 56 kcal
ನೀರು 83 g
ಕೊಬ್ಬಿನಂಶ 0.4 g
ಕಾರ್ಬೋಹೈಡ್ರೇಟ್ಸ್ 12.8 g
ಪ್ರೊಟೀನ್ 0.8 g
ನಾರಿನಂಶ 1.7 g
ಪೊಟಾಷ್ಯಿಯಂ 190 mg
ಕ್ಯಾಲ್ಸಿಯಂ 10 mg
ಮೆಗ್ನಿಷ್ಯಿಯಂ 18 mg
ಕಬ್ಬಿಣಂಶ 1.2 g
ವಿಟಮಿನ್ B1 0.05 g
ವಿಟಮಿನ್ B2 50 μg
ನಿಯಾಸಿನ್ (vitamin B3) 700 μg
ವಿಟಮಿನ್ B6 130 μg
ವಿಟಮಿನ್ C 30 mg
ಫೋಲಿಕ್ ಆಮ್ಲ 31 μg
ವಿಟಮಿನ್ E 1000 μg
ವಿಟಮಿನ್ A 194 μg

[ of 5 - Users]
Story first published: Monday, March 18, 2024, 13:30 [IST]
X
Desktop Bottom Promotion