ಹಬ್ಬಕ್ಕೆ ಸುಲಭದ ಸಿಹಿ ತಿಂಡಿ ಮಾವಿನಹಣ್ಣಿನ ಕೇಸರಿಬಾತ್..! ಮಾಡೋದು ಹೇಗೆ?

Posted By:

ಹಬ್ಬ ಹರಿದಿನದಲ್ಲಿ ಮನೆಯಲ್ಲಿ ಒಂದು ಸಿಹಿ ತಿಂಡಿ ಮಾಡಿಯೇ ಮಾಡಿರುತ್ತೀರಿ, ಈಗ ಸಂಕ್ರಾಂತಿಗೆ ಪಾಯಸ ಹಾಗೂ ಒಂದು ಸುಲಭದ ಸಿಹಿ ತಿಂಡಿ ಮಾಡಿದರೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಹಬ್ಬದಂದು ಸುಲಭವಾಗಿ ಮಾಡುವಂತಹ ಕೆಲವು ಸಿಹಿ ತಿಂಡಿಗಳಿಗೆ ಭಾರೀ ಡಿಮ್ಯಾಂಡ್ ಇರುತ್ತೆ.

ಕೇಸರಿಬಾತ್, ಹಲ್ವಾ, ಸಿಹಿ ಪಾಯಸ ಮಾಡಿದರೆ ಹಬ್ಬದಂದು ಅತ್ಯುತ್ತಮ ರುಚಿ ಸವಿಯಬಹುದು. ಹಾಗೆ ನಾವಿಂದು ಈ ಕೇಸರಿ ಬಾತ್‌ನಲ್ಲಿ ಹಲವು ಬಗೆಯನ್ನು ಹಲವು ರೀತಿಯ ರುಚಿಯನ್ನು ನಾವು ನೋಡಬಹುದು. ಇಂತಹ ಕೇಸರಿಬಾತ್‌ನ ಹೊಸ ರೀತಿಯ ರುಚಿಯ ಸಿಹಿಯನ್ನು ನಾವಿಂದು ಮಾಡಲು ಮುಂದಾಗಲಿದ್ದೇವೆ.

How To Make Mango Kesaribath Sweet At Home In Kannada

ನಾವಿಂದು ಹೊಸ ರೀತಿಯ ಮಾವಿನ ಹಣ್ಣಿನ ಕೇಸರಿ ಬಾತ್ ಮಾಡುವುದನ್ನು ತಿಳಿದುಕೊಳ್ಳೋಣ. ನೀವು ಮಾವಿನ ಹಣ್ಣಿನಿಂದ ಹಲವು ರೀತಿಯ ಸಿಹಿ ತಿಂಡಿ ಮಾಡಿ ಸವಿದಿರುತ್ತೀರಿ. ಆದ್ರೆ ಈ ರೀತಿ ಅದ್ಭುತ ರುಚಿಯ ಮಾವಿನ ಹಣ್ಣಿನಿಂದ ಮಾಡಲಾದ ಕೇಸರಿಬಾತ್ ಮಾಡಿ ಸವಿದಿದ್ದೀರಾ? ಹೌದು ಈ ರೀತಿಯ ಮಾವಿನ ಹಣ್ಣಿನ ಕೇಸರಿಬಾತ್ ಅತ್ಯದ್ಭುತ ರುಚಿ ಹೊಂದಿರಲಿದೆ.

ಇನ್ನು ಭಾರತದಲ್ಲಿ ಮಾವಿನ ಹಣ್ಣಿನ ಸೀಸನ್ ಇನ್ನೇನು ಆರಂಭವಾಗುತ್ತಿದೆ. ಜನವರಿಯಲ್ಲಿ ಕೆಲವು ಕಡೆಗಳಲ್ಲಿ ಹಣ್ಣುಗಳು ಸಿಗಲು ಆರಂಭಿಸುತ್ತದೆ. ಹಾಗೆ ಆನ್‌ಲೈನ್‌ ಮೂಲಕ ನೀವು ಯಾವ ಸಮಯದಲ್ಲಿ ಬೇಕಾದರೂ ಮಾವಿನ ಹಣ್ಣು ಖರೀದಿಸಬಹುದು. ಎಲ್ಲಾ ಕಾಲದಲ್ಲೂ ಮಾವಿನ ಹಣ್ಣು ಸಿಗುವಂತಹ ಕಾಲವಿದು.

ಹೀಗಾಗಿ ನಾವಿಂದು ಈ ಮಾವಿನ ಹಣ್ಣಿನಿಂದ ಹೇಗೆ ರುಚಿ ರುಚಿಯ ಕೇಸರಿಬಾತ್ ಮಾಡಲಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಮಾವಿನ ಹಣ್ಣಿನ ಈ ಕೇಸರಿ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮಾವಿನ ಹಣ್ಣಿನ ಕೇಸರಿ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?

  • ಮಾವಿನ ಹಣ್ಣು 2
  • ಚಿರೋಟಿ ರವೆ- ಅರ್ಧ ಕಪ್
  • ಸಕ್ಕರೆ - ಮುಕ್ಕಾಲು ಕಪ್
  • ಹಾಲು- ಅರ್ಧ ಕಪ್
  • ತುಪ್ಪ
  • ಗೋಡಂಬಿ
  • ಕೇಸರಿ ಬಣ್ಣ
  • ದ್ರಾಕ್ಷಿ
  • ಏಲಕ್ಕಿ
  • ಎಣ್ಣೆ

ಮಾವಿನ ಹಣ್ಣಿನ ಕೇಸರಿ ಬಾತ್ ಮಾಡುವ ವಿಧಾನವೇನು?

ಮಾವಿನ ಹಣ್ಣಿನ ಸಿಪ್ಪೆ ತೆಗೆದು ಕತ್ತರಿಸಿಕೊಂಡು ಅದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. ಇದು ನುಣ್ಣಗೆ ಪೇಸ್ಟ್ ರೀತಿ ಇರಬೇಕು, ನಂತರ ಇದನ್ನು ಪಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.

ಈಗ ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಬಿಸಿಯಾದ ಬಳಿಕ ಇದಕ್ಕೆ ಚಿರೋಟಿ ರವೆಯನ್ನು ಹಾಕಿಕೊಂಡಿ ಮಿಕ್ಸ್ ಮಾಡುತ್ತಾ ಹುರಿದುಕೊಳ್ಳಿ. 5 ನಿಮಿಷ ಚೆನ್ನಾಗಿ ಹುರಿದುಕೊಂಡ ಬಳಿಕ ಇದಕ್ಕೆ ಮುಕ್ಕಾಲು ಕಪ್ ಸಕ್ಕರೆ, ಕೇಸರಿ ಬಣ್ಣ ಹಾಕಿಕೊಂಡು ಮಿಕ್ಸ್ ಮಾಡಬೇಕು. ಈ ರವೆ ಜೊತೆಗೆ ಸಕ್ಕರೆ ಕರಗುವಂತೆ ಬೆರೆಸಬೇಕು. 2 ನಿಮಿಷ ಬೆರೆಸಿದರೆ ಸಾಕು.

ಈಗ 1 ಕಪ್ ಬಿಸಿ ನೀರು ಹಾಕಬೇಕು. ಚೆನ್ನಾಗಿ ಕುದಿಬರುವಾಗ ಈ ಬಿಸಿ ನೀರನ್ನು ಬಾಣಲೆಗೆ ಹಾಕಿಕೊಳ್ಳಬೇಕು. ಹಾಗೆ ಇದಕ್ಕೆ ಅರ್ಧ ಕಪ್ ಕಾಯಿಸಿ ತಣ್ಣಗಾಗಿಸಿದ ಹಾಲನ್ನು ಕೂಡ ಹಾಕಿ ಮಿಕ್ಸ್ ಮಾಡಬೇಕು. ಈಗ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಗಂಟು ಇಲ್ಲದಂತೆ ನುಣ್ಣಗೆ ರವೆ ಕಾಣಿಸಬೇಕು. 3 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಅನಂತರ ಇದಕ್ಕೆ ರುಬ್ಬಿಕೊಂಡಿರುವ ಮಾವಿನ ಹಣ್ಣಿನ ಪೇಸ್ಟ್ ಅನ್ನು ಹಾಕಿ ಬೆರೆಯುವಂತೆ 5 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ಇದು ಗಟ್ಟಿಯಾಗುತ್ತಾ ಬರುತ್ತದೆ. 5 ನಿಮಿಷದ ಬಳಿಕ ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಯನ್ನು ಫ್ರೈ ಮಾಡಿಕೊಂಡು ಈ ಕೇಸರಿ ಬಾತ್‌ಗೆ ಹಾಕಿ ಹಾಗೆ ಏಲಕ್ಕಿಯನ್ನು ಕುಟ್ಟಿ ಇದಕ್ಕೆ ಹಾಕಿಕೊಳ್ಳಿ. ನಂತರ ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಾವಿನ ಹಣ್ಣಿನ ಕೇಸರಿ ಬಾತ್ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.

[ of 5 - Users]
Story first published: Sunday, January 12, 2025, 13:59 [IST]
X
Desktop Bottom Promotion