Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮ್ಯಾಂಗೋ ಐಸ್ಕ್ರೀಮ್ ಮಾಡುವುದು ತುಂಬಾ ಸುಲಭ
ಬೇಸಿಗೆಯಲ್ಲಿ ಐಸ್ಕ್ರೀಮ್ ತಿನ್ನಲು ತುಂಬಾನೇ ಖುಷಿಯಾಗುತ್ತೆ ಅಲ್ವಾ, ಅದರಲ್ಲಿಯೂ ಮ್ಯಾಂಗೋ ಐಸ್ಕ್ರೀಮ್ ಎಂದರೆ ಮುಗೀತು, ಮಕ್ಕಳ ಫೇವರೆಟ್, ಈ ಮ್ಯಾಂಗೋ ಐಸ್ಕ್ರೀಮ್ ನೀವೇ ತಯಾರಿಸಬಹುದು, ನೀವೇ ತಯಾರಿಸಿದರೆ ಮಕ್ಕಳಿಗೆ ಧೈರ್ಯವಾಗಿ ಕೊಡಬಹುದು ಕೂಡ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಮ್ಯಾಂಗೋ ಐಸ್ಕ್ರೀಮ್ಗೆ ಬೇಕಾಗುವ ಸಾಮಗ್ರಿಗಳು
2-3 ಮಾವಿನ ಹಣ್ಣು
ಹಾಲಿನ ಪುಡಿ
ಮಿಲ್ಕ್ಮೇಡ್
ವ್ಹಿಪ್ಪಿಂಗ್ ಕ್ರೀಮ್
ಮ್ಯಾಂಗೋ ಐಸ್ಕ್ರೀಮ್ ಮಾಡುವ ವಿಧಾನ
- ನೀವು ಮಾವಿನ ಹಣ್ಣಿನ ಸಿಪ್ಪೆ ಸುಲಿದು ತಿರುಳನ್ನು ಚಿಕ್ಕದಾಗಿ ಕತ್ತರಿಸಿ , ನಂತರ ಕೈಯಿಂದಲೇ ಅದನ್ನು ಪೇಸ್ಟ್ ರೀತಿ ಮಾಡಿ, ಬೇಕಿದ್ದರೆ ಪೇಸ್ಟ್ ರೀತಿಯಲ್ಲಿ ಮಾಡಬಹುದು. ಮಾವಿನಹಣ್ಣಿನ ಪೇಸ್ಟ್ 2 ಕಪ್ ಇರಲಿ.
- ಅದಕ್ಕೆ ಅರ್ಧ ಕಪ್ ಹಾಲಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
- ಹೀಗೆ ಮಿಕ್ಸ್ ಮಾಡುವಾಗ ಅದು ಗಂಟು ಕಟ್ಟಬಾರದು
- ನೀವು ಅರ್ಧ ಕಪ್ ಮಿಲ್ಕ್ಮೇಡ್ ಸೇರಿಸಿ
- ನಂತರ ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಡ್ಜ್ನಲ್ಲಿಡಿ
- ಈಗ ನೀವು ವ್ಹಿಪ್ಪಿಂಗ್ ಕ್ರೀಮ್ (Whipping Cream) ಹಾಕಿ ಚೆನ್ನಾಗಿ ಕದಡಿ, ನೀವು 6-7 ನಿಮಿಷ ಕದಡಬೇಕು. ತುಂಬಾ ಮೃದುವಾದ ಮೇಲೆ ಕದಡಬೇಡಿ.
- ಈಗ ನೀವು ವ್ಹಿಪ್ಪಿಂಗ್ ಕ್ರೀಮ್ ಅನ್ನು ಮಾವಿನಹಣ್ಣಿನ ಮಿಶ್ರಣದ ಜೊತೆಗೆ ಹಾಕಿ.
- ಈಗ ಮೆಲ್ಲನೆ ಮಿಕ್ಸ್ ಮಾಡಿ.
- ಮಿಶ್ರಣ ಕ್ರೀಮ್ ರೀತಿಯಾದಾಗ ಮೆಟಲ್ ಟ್ರೇಗೆ ಹಾಕಿ ಸ್ಪೂನ್ನಲ್ಲಿ ಲೆವಲ್ ಮಾಡಿ. ನಂತರ ಅದನ್ನು ಪ್ಲಾಸ್ಟಿಕ್ ಅಥವಾ ಸಿಲ್ವರ್ ಫಾಯಿಲ್ನಿಂದ ಕವರ್ ಮಾಡಿ ನಾಲ್ಕು ಗಂಟೆ ಇಡಿ.
- (ನೀವು ಮೆಟಲ್ ಟ್ರೇಗೆ ಐಸ್ಕ್ರೀಮ್ ಮಿಶ್ರಣ ಹಾಕುವ ಮುನ್ನ ಟ್ರೇಯನ್ನು ಫ್ರಿಡ್ಜ್ನಲ್ಲಿ ಇಟ್ಟಿರಿ)
- ನಾಲ್ಕು ಗಂಟೆಯ ಬಳಿಕ ಹೊರ ತೆಗೆದು ಸೌಟು ಅಥವಾ ಹ್ಯಾಂಡ್ ಮಿಕ್ಸರ್ನಿಂದ ಮತ್ತೊಮ್ಮೆ ಮಿಕ್ಸ್ ಮಾಡಿ ಮತ್ತೆ 8 ಗಂಟೆ ಫ್ರಿಡ್ಜ್ನಲ್ಲಿಡಿ.
- ನಂತರ ಮ್ಯಾಂಗೋ ಐಸ್ಕ್ರೀಮ್ ಹೊರ ತೆಗೆದು 5 ನಿಮಿಷ ಇಟ್ಟು ಸರ್ವ್ ಮಾಡಿ.
ಇತರ ಸಲಹೆ'
ಮ್ಯಾಂಗೋ ಪಲ್ಪಿ (ರೆಡಿಮೇಡ್) ಬಳಸಿ ಮಾಡಬೇಡಿ. ಮ್ಯಾಂಗೋ ಪುರಿ ಡಬ್ಬದಲ್ಲಿ
ಸಿಗುತ್ತೆ ಅದನ್ನು ಬಳಸಬೇಡಿ.
ನೀವು ನಾರು ಕಡಿಮೆ ಇರುವ ಮಾವಿನ ಹಣ್ಣು ಬಳಸಿ, ಇನ್ನು ಮಾವಿನ ಹಣ್ಣು ಅನೇಕ
ಬಗೆಯಲ್ಲಿ ದೊರೆಯುತ್ತದೆ, ನೀವು ಬೇರೆ-ಬೇರೆ ಜಾತಿಯ ಮಾವಿನಹಣ್ಣು ಬಳಸಿದಾಗ ಅದರ
ರುಚಿ ಕೂಡ ಭಿನ್ನವಾಗಿರುತ್ತದೆ.
whipping cream ಖರೀದಿಸಲು ಸಿಗುತ್ತದೆ
ಮಿಲ್ಕ್ಮೇಡ್ ಇಲ್ಲದಿದ್ದರೆ ನೀವು ಸಕ್ಕರೆ ಬಳಸಬಹುದು
ಹಾಲಿನ ಪುಡಿ ಅವಶ್ಯಕ ಇಲ್ಲದಿದ್ದರೆ ಐಸ್ಕ್ರೀಮ್ ಬದಲಿಗೆ ಐಸ್ಕ್ಯಾಂಡಿ
ರೀತಿಯಾಗುವುದು.
- ನೀವು ಈ ಐಸ್ಕ್ರೀಮ್ ಅನ್ನು ತಿಂಗಳವರೆಗೆ ಇಟ್ಟು ಬಳಸಬಹುದು.
- ಇದನ್ನು ಫ್ರೀಝರ್ನಲ್ಲಿ ಇಡಿ, ಇಲ್ಲದಿದ್ದರೆ ನೀರು ನೀರಾಗುವುದು.
ನೀವು ಈ ಮ್ಯಾಂಗೋ ಐಸ್ಕ್ರೀಮ್ ಅನ್ನು ಮಾವಿನಹಣ್ಣು ಕತ್ತರಿಸಿ ಹಾಕಿ ಅದರ ಜೊತೆ ಸರ್ವ್ ಮಾಡಿದರೆ ಇನ್ನೂ ಸ್ಪೆಷಲ್ ಆಗಿರುತ್ತದೆ.



Click it and Unblock the Notifications