Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾವಿನಕಾಯಿ ಗುಳಂಬ ಮಾಡಿದ್ದೀರಾ? ವಿಭಿನ್ನ ರುಚಿಯ ಖಾದ್ಯವಿದು!
ಮಾವಿನಹಣ್ಣು ಮಾರುಕಟ್ಟೆಯಲ್ಲಿ ಸುವಾಸನೆ ಬೀರುತ್ತಿವೆ. ಹಣ್ಣಿನ ರಾಜ ಎಂಬ ಬಿರುದು ಪಡೆದಿರುವ ಮಾವಿನ ಸೀಸನ್ ಆರಂಭಗೊಂಡಿದೆ. ನಿಧಾನವಾಗಿ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮಾವಿನ ಹಣ್ಣಗಳು, ಕಾಯಿಗಳು ಬಂದಿವೆ. ಅದರಲ್ಲೂ ಮಾವಿನ ಹಲವು ಬಗೆಯ ಖಾದ್ಯಗಳಿಗೆ ಇದು ಸರಿಯಾದ ಸಮಯ. ಹಾಗೆ ಈ ಮಾವಿನಹಣ್ಣಿನಿಂದ ಹಾಗೆ ಕಾಯಿಯಿಂದ ಬಗೆ ಬಗೆಯ ಖಾದ್ಯ ಮಾಡಿ ಸವಿಯಬಹುದು.
ನಾವಿಂದು ವಿಶೇಷವಾಗಿ ಮಾವಿನ ಹಣ್ಣಿನಿಂದ ಮಾಡುವಂತಹ ಅದ್ಭುತ ರುಚಿತ ಗುಳಂಬ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಗುಳಂಬ ಎಂಬುದು ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಮಾಡುವ ವಿಭಿನ್ನ ಖಾದ್ಯ. ಬಹಳ ರುಚಿ ನೀಡುವಂತಹ ಸಿಹಿ ತಿಂಡಿ ಇದಾಗಿದೆ. ಹಲ್ವಾದಂತೆ ಕಾಣಿಸುವ ಈ ಖಾದ್ಯ ಸವಿಯಲು ಬಹಳ ರುಚಿಯಾಗಿರುತ್ತೆ. ಹೆಚ್ಚಾಗಿ ಇದು ಸಿಹಿ ಖಾದ್ಯ ಅನ್ನುವ ಬದಲಾಗಿ ಖಾರ ಅಥವಾ ಹುಳಿಯನ್ನೇ ಹೆಚ್ಚಾಗಿ ಇಷ್ಟಪಡುವರ ಬಾಯಲ್ಲಿ ನೀರು ತರಿಸುವ ಖಾದ್ಯ ಎನ್ನಬಹುದು. ಚಪಾತಿ, ಇಡ್ಲಿ, ದೋಸೆಗೂ ಸಹ ಇದು ಬಹಳ ರುಚಿ ನೀಡಲಿದೆ.

ಮಾವಿನ ಹಣ್ಣಿನ ಈ ಸೀಸನ್‌ನಲ್ಲಿ ವಿಭಿನ್ನ ರುಚಿಯ ಈ ಮಾವಿನ ಗುಳಂಬ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗಾದ್ರೆ ಈ ಗುಳಂಬ ಸಿಹಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥ ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನ ಹಣ್ಣಿನ ಈ ಗುಳಂಬ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮಾವಿನಕಾಯಿ - 2
- ಸಕ್ಕರೆ
- ಅಜ್ವೈನ
- ಜೀರಿಗೆ
- ಮೆಂತ್ಯ
- ಅರಿಶಿನ ಪುಡಿ
- ಖಾರದ ಪುಡಿ
- ರೆಡ್ ಸಾಲ್ಟ್
ಮಾವಿನ ಹಣ್ಣಿನ ಈ ಗುಳಂಬ ಮಾಡುವುದು ಹೇಗೆ?
ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಅದನ್ನು ಕ್ಯಾರೆಟ್ ತುರಿಯಿಂದ ಚೆನ್ನಾಗಿ ತುರಿದುಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಅದರಲ್ಲೆ ಅರ್ಧ ಬೌಲ್ ಸಕ್ಕರೆ ಸಹ ತೆಗೆದುಕೊಂಡು ಮಾವಿನಕಾಯಿಯ ಬೌಲ್‌ಗೆ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕಾಲು ಚಮಚ ಮೆಂತ್ಯೆ, ಒಂದು ಚಮಚ ಜೀರಿಗೆ, ಅಜ್ವೈನ ಹಾಕಿ ಡ್ರೈ ಆಗಿ ಫ್ರೈ ಮಾಡಿ. ನಂತರ ಈ ಪದಾರ್ಥವನ್ನು ತೆಗೆದು ತಣ್ಣಗಾಗಲು ಬಿಟ್ಟು ನಂತರ ಒಂದು ಸಣ್ಣ ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ. ಪುಡಿ ಮಾಡಿದ ವಸ್ತುಗಳನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಮೊದಲು ಮಿಕ್ಸ್ ಮಾಡಿಕೊಂಡಿದ್ದ ಮಾವಿನಕಾಯಿ ಹಾಗೂ ಸಕ್ಕರೆ ಪ್ರಮಾಣವನ್ನು ಈ ಬಾಣಲೆಗೆ ಹಾಕಿಕೊಳ್ಳಬೇಕು. ಹಾಗೆ ಇದಕ್ಕೆ ಕಾಲು ಚಮಚ ಅರಶಿಣ, ಖಾರದ ಪುಡಿ, ಹಾಗೆ ಪಿಂಕ್ ಸಾಲ್ಟ್ ಅಥವಾ ರೆಡ್ ಸಾಲ್ಟ್ ಹಾಕಿಕೊಳ್ಳಿ. ಈಗ ಮಿಕ್ಸಿಯಲ್ಲಿ ಪುಡಿ ಮಾಡಿದ್ದ ಮಸಾಲೆಗಳನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಿಧಾನವಾಗಿ ಮಿಕ್ಸ್ ಮಾಡುತ್ತಾ 3 ನಿಮಿಷ ಬಿಡಿ. ಅದು ಹಲ್ವಾ ರೀತಿಯಲ್ಲಿ ಅಂಟು ಅಂಟಾಗಿ ಬರಬೇಕು. ಸುಮಾರು 5 ನಿಮಿಷದಲ್ಲಿ ಇದು ರೆಡಿಯಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಈ ಮಾವಿನಕಾಯಿ ಗುಳಂಬ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಈ ಮಾವಿನಕಾಯಿಯ ಅದ್ಭುತ ರುಚಿ ನೀಡುವ ಗುಳಂಬ ಮಾಡಿ ನೋಡಿ. ಇದು ಸಿಹಿಯಾಗಿಯೂ ಹುಳಿಯಾಗಿಯೂ ಖಾರ ಖಾರವಾಗಿಯೂ ಬಾಯಿ ರುಚಿ ಹೆಚ್ಚಿಸಲಿದೆ. ನೀವು ಯಾವುದೇ ಬ್ರೇಕ್ ಫಾಸ್ಟ್‌ನೊಂದಿಗೂ ಕೂಡ ಈ ಗುಳಂಬ ಸವಿಯಬಹುದು.



Click it and Unblock the Notifications