Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಣ್ಣೆಯಂತೆ ಮೃದು, ಸಕ್ಕರೆಯಂತೆ ಸಿಹಿಯಾದ ಮಂಗಳೂರು ಬನ್ಸ್ ಮಾಡಿ ನೋಡಿ..!
ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿ ಎಣ್ಣೆಯಲ್ಲಿ ಕರಿದ ತಿಂಡಿಯ ಮಾಡಿರುತ್ತೀರಿ. ಅದರಲ್ಲೂ ಮಂಗಳೂರು ಶೈಲಿಯ ಬನ್ಸ್ ಮಾಡಿರುತ್ತೀರಿ. ಹೋಟೆಲ್ನಲ್ಲಿ ನೀವು ಮಂಗಳೂರು ಬನ್ಸ್ ಸವಿದಿರಬಹುದು. ಈ ಬನ್ಸ್ಗೆ ತೆಂಗಿನಕಾಯಿ ಚಟ್ನಿ ಅಥವಾ ಸಾಗು ಇದ್ದರೆ ಅದರ ರುಚಿ ಸಖತ್ ಆಗಿರುತ್ತೆ. ಈ ಬನ್ಸ್ ಎಲ್ಲಾ ವಯಸ್ಸಿನವರು ಇಷ್ಟಪಟ್ಟು ಸವಿಯುತ್ತಾರೆ.
ಆದ್ರೆ ಮೃದುವಾಗಿ ಸಕ್ಕರೆ ರುಚಿಯಲ್ಲಿ ಹೋಟೆಲ್ನಲ್ಲಿ ನೀಡುವಂತಹ ಬನ್ಸ್ ಅನ್ನು ನೀವು ಎಂದಾದರು ಮನೆಯಲ್ಲೇ ಮಾಡಿ ಸವಿದಿದ್ದೀರಾ? ನೀವು ಮನೆಯಲ್ಲಿ ಈ ಬನ್ಸ್ ಮಾಡಿದರೆ ಗಟ್ಟಿಯಾಗಿ, ರುಚಿ ಕೂಡ ಸಪ್ಪೆಯಾಗಿ ಬಂದಿರಬಹುದು. ನೀವು ಹಿಟ್ಟು ಮಾಡಿಕೊಳ್ಳುವಾಗ ಈ ರೀತಿಯ ಮುನ್ನೆಚ್ಚರಿಕೆ ವಹಿಸಿದ್ರೆ ಅದ್ಭುತ ರುಚಿಯ ಮಂಗಳೂರು ಬನ್ಸ್ ಮಾಡಬಹುದು.

ಹಾಗಾದ್ರೆ ನಾವಿಂದು ಈ ಮಂಗಳೂರು ಬನ್ಸ್ ಮಾಡುವ ಕುರಿತು ಇಂದು ತಿಳಿದುಕೊಳ್ಳೋಣ. ಮಂಗಳೂರು ಬನ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಂಗಳೂರು ಬನ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಗೋಧಿ ಹಿಟ್ಟು - 2 ಕಪ್
- ಬಾಳೆಹಣ್ಣು -2
- ಸಕ್ಕರೆ - 1 ಟೀಸ್ಪೂನ್
- ಜೀರಿಗೆ
- ಅಡುಗೆ ಸೋಡಾ - 2 ಪಿಂಚ್
- ಮೊಸರು- ಕಾಲು ಕಪ್
- ಉಪ್ಪು
- ಅಡುಗೆ ಎಣ್ಣೆ
ಮಂಗಳೂರು ಬನ್ಸ್ ಮಾಡುವ ವಿಧಾನವೇನು?
ಒಂದು ಬೌಲ್ಗೆ ಅಳತೆ ಕಪ್ನಲ್ಲಿ 2 ಕಪ್ ಗೋಧಿ ಹಿಟ್ಟು ಹಾಕಿಕೊಳ್ಳಿ. ಹಾಗೆ ಇನ್ನೊಂದು ಬೌಲ್ನಲ್ಲಿ ಎರಡು ಪಚ್ಚ ಬಾಳೆ ಹಣ್ಣು ತೆಗೆದುಕೊಂಡು ಅದಕ್ಕೆ 2 ಸ್ಪೂನ್ ಸಕ್ಕರೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಅದು ಚೆನ್ನಾಗಿ ಪುಡಿಯಾಗಿ ನೀರು ನೀರಾಗಬೇಕು. ಈಗ ಇದಕ್ಕೆ ಜೀರಿಗೆ, ಸೋಡಾ, ಉಪ್ಪು, ಮೊಸರು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ 2 ಕಪ್ ಗೋಧಿ ಹಿಟ್ಟು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಬೇಕು. ಹಿಟ್ಟು ನೀರಾಗಬಾರದು, ಗಟ್ಟಿಯಾಗಿ ಉಂಡೆ ಕಟ್ಟಲು ಬರುವಂತೆ ಹದ ಮಾಡಿಕೊಳ್ಳಿ. ಚಪಾತಿ ಹಿಟ್ಟಿನಂತೆ ಹದ ಬಂದರೂ ಸಾಕು. ಕೊನೆಯದಾಗಿ ಈ ಹಿಟ್ಟಿನ ಮೇಲೆ ಒಂದು ಸ್ಪೂನ್ ಎಣ್ಣೆ ಹಾಕಿಕೊಂಡು ಮುಚ್ಚಳ ಮುಚ್ಚಿ ಇಡಬೇಕು. ಈ ಹಿಟ್ಟನ್ನು ರಾತ್ರಿ ಮಾಡಿ ಬೆಳಗ್ಗೆವರೆಗೂ ಹಾಗೆಯೇ ಇಡಬೇಕು.
ಈಗ ಮಾರನೆ ದಿನ ಬೆಳಗ್ಗೆ ಗಟ್ಟಿಯಾಗಿರುವ ಹಿಟ್ಟನ್ನು ಮತ್ತೆ ಕೈಯಿಂದ ಹದ ಮಾಡಿಕೊಳ್ಳಿ. ನಂತರ ಒಂದು ದೊಡ್ಡ ಉಂಡೆ ಕಟ್ಟಿಕೊಳ್ಳಬೇಕು. ಲಾಡುವಿನಂತೆ ಉಂಡೆ ಕಟ್ಟಿ ಚಪಾತಿಯಂತೆ ಲಟ್ಟಿಸಬೇಕು. ಲಟ್ಟಿಸುವಾಗ ಗೋಧಿ ಹಿಟ್ಟು ಹಚ್ಚಿಕೊಂಡು ದಪ್ಪವಾಗಿರುವಂತೆ ಲಟ್ಟಿಸಬೇಕು. ಚಪಾತಿಯಂತೆ ಗಟ್ಟಿಯಾಗಿ ಒತ್ತಿ ಲಟ್ಟಿಸುವುದು ಬೇಡ.
ನಂತರ ಇದನ್ನು ಎಣ್ಣೆ ಬಾಣಲೆ ಇಟ್ಟು ಅದರ ಒಳಗೆ ಹಾಕಬೇಕು. ಒಂದು ಕಡೆ ಮೊದಲು ಬೇಯಲು ಬಿಟ್ಟು ನಂತರ ತಿರುಗಿಸಿ ಹಾಕಿಕೊಂಡು ನಿಮಗೆ ಯಾವ ಹದಕ್ಕೆ ಬೇಕೋ ಆ ಹದಕ್ಕೆ ಕರಿದುಕೊಳ್ಳಿ. ಇಷ್ಟಾದರೆ ಮಂಗಳೂರು ಬನ್ಸ್ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ಶೈಲಿಯಲ್ಲಿ ಮಂಗಳೂರು ಬನ್ಸ್ ಮಾಡಿ ನೋಡಿ. ಇದಕ್ಕೊಂದು ತೆಂಗಿನ ಕಾಯಿ ಚಟ್ನಿ ಇಲ್ಲವೆ ತರಕಾರಿ ಮಿಕ್ಸ್ ಸಾಗು ಮಾಡಿದರೆ ಹೋಟೆಲ್ ರುಚಿಯ ಬನ್ಸ್ ಸವಿದಂತಾಗುತ್ತದೆ.



Click it and Unblock the Notifications