Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಂಡಕ್ಕಿ ದೋಸೆ ಸವಿದು ನೋಡಿದ್ರೆ ದಿನ ಇದನ್ನೇ ತಿನ್ನೋಕೆ ಕೇಳ್ತೀರಿ!! ಮಾಡೋದು ಸುಲಭ!
ನೀವು ದೋಸೆಯಲ್ಲಿ ಎಷ್ಟು ವಿಧವಾಗ ದೋಸೆ ಸವಿದಿದ್ದೀರಾ? ಹೀಗೆ ಕೇಳಿದ್ರೆ ನಿಮಗೆ ಉತ್ತರಿಸೋದು ಕಷ್ಟವಾಗಬಹುದು. ಏಕೆಂದರೆ ದೋಸೆಯಲ್ಲಿ ಹಲವು ಬಗೆಯ ಸ್ವಾದದ ರುಚಿ ನೋಡಿರುತ್ತೀರಿ. ನಿತ್ಯ ಒಂದಲ್ಲಾ ಒಂದು ರೀತಿ ದೋಸೆಯ ಬಗೆ ನಾವು ನೋಡಬಹುದು. ಅದರಲ್ಲೂ ದೋಸೆಗಳಿಗೆಂದೇ ಇರುವ ಹೋಟೆಲ್‌ಗಳಲ್ಲಿ ಹತ್ತಾರು ರೀತಿಯ ದೋಸೆಗಳು ಗ್ರಾಹಕರ ಬಾಯಲ್ಲಿ ನೀರು ತರಿಸುತ್ತವೆ.
ಇನ್ನು ಮನೆಯಲ್ಲಿ ನಾವು ಸಾಮಾನ್ಯವಾಗಿ ಉದ್ದಿನ ದೋಸೆ, ನೀರು ದೋಸೆ, ಮಸಾಲೆ ದೋಸೆ, ಮೆಂತ್ಯ ದೋಸೆ, ಸೆಟ್ ದೋಸೆ, ಹಂಚಿನ ದೋಸೆ, ಬೆಣ್ಣೆ ದೋಸೆ ಸೇರಿ ಇನ್ನೂ ಹಲವು ರೀತಿಯ ದೋಸೆ ನಾವು ಸವಿದಿರುತ್ತೇವೆ. ಈ ಎಲ್ಲಾ ದೋಸೆಗಳು ಬಹಳ ರುಚಿಕರ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ದೋಸೆಗಳಿವೆ.

ಹಾಗೆ ಬೆಳಗ್ಗೆ ತಿಂಡಿಯ ಸಮಯದಲ್ಲಿ ದೋಸೆ ಇದ್ದರೆ ಆ ದಿನ ಬಹಳ ಚೆನ್ನಾಗಿರಲಿದೆ. ಎಲ್ಲರಿಗೂ ದೋಸೆ ಸವಿಯೋಕೆ ಇಷ್ಟವಾಗುತ್ತೆ. ಹಾಗೆ ನೀವು ಹೋಟೆಲ್‌ಗೆ ತೆರಳಿದ್ರೆ ನಿಮಗೆ ಮೊದಲು ನೆನಪಿಗೆ ಬರುವುದು ದೋಸೆ. ದೋಸೆ ದಕ್ಷಿಣ ಭಾರತದಲ್ಲಿ ಪ್ರತಿಯೊಬ್ಬರ ಮನೆಯ ನಿತ್ಯದ ಖಾದ್ಯ ಎನ್ನಬಹುದು. ಇಂತಹ ದೋಸೆಯಲ್ಲಿ ನಾವಿಂದು ವಿಶೇಷವಾಗಿ ಮಾಡಬಹುದಾದ ದೋಸೆ ಕುರಿತಾಗಿ ತಿಳಿದುಕೊಳ್ಳೋಣ.
ವಿಶೇಷವಾಗಿ ದೋಸೆ ಮಾಡುವುದು ಅಂದ್ರೆ ನಾವಿಂದು ಮಂಡಕ್ಕಿಯಿಂದ ಮಾಡುವಂತಹ ಸುಲಭದ ಹಾಗೆ ರುಚಿ ರುಚಿಯ ನೀವೆಂದು ಸವಿದಿರದ ಮಂಡಕ್ಕಿ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಮಂಡಕ್ಕಿ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಂಡಕ್ಕಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
ಅಕ್ಕಿ 1 ಕಪ್
ಉಪ್ಪು
ಬೇಳೆ
ಮಂಡಕ್ಕಿ 3 ಕಪ್
ಎಣ್ಣೆ
ಮಂಡಕ್ಕಿ ದೋಸೆ ಮಾಡುವ ವಿಧಾನವೇನು?
ಅಕ್ಕಿಯನ್ನು ತೊಳೆದು 5ರಿಂದ 6 ಗಂಟೆಗಳ ಕಾಲ ನೆನೆಸಿಡಬೇಕು, ಹಾಗೆ ಮಂಡಕ್ಕಿಯನ್ನು ಕೂಡ ನೀರಿನಲ್ಲಿ ಹಾಕಿ 6 ಗಂಟೆ ನೆನೆಸಿಡಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅಕ್ಕಿ ಹಾಗೂ ಮಂಡಕ್ಕಿಯನ್ನು ಬೇರೆ ಬೇರೆಯಾಗಿ ರುಬ್ಬಿಕೊಳ್ಳಬಹುದು, ಇಲ್ಲವೆ ಮಿಕ್ಸ್ ಮಾಡಿಕೊಂಡು ನುಣ್ಣಗೆ ರುಬ್ಬಿಕೊಂಡು ಒಂದು ದೊಡ್ಡ ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಹಾಗೆ ಮುಚ್ಚಳ ಮುಚ್ಚಿ ಒಂದು ರಾತ್ರಿ ಪೂರ್ತಿ ಬಿಡಬೇಕು. ಇದು ಹುದುಗು ಬಂದ ಬಳಿಕ ಬೆಳಗ್ಗೆ ಇದನ್ನು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಈಗ ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಸೋಡಾ, ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಮಂಡಕ್ಕಿ ದೋಸೆಗೆ ಹಿಟ್ಟು ರೆಡಿಯಾಗುತ್ತದೆ. ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಎಣ್ಣೆ ಹಚ್ಚಿ ಕಾಯಲು ಬಿಡಿ.
ಕಾವಲಿ ಚೆನ್ನಾಗಿ ಕಾದ ಬಳಿಕ ಹಿಟ್ಟನ್ನು ಕಾವಲಿ ಮಧ್ಯಕ್ಕೆ ಹಾಕಿಕೊಂಡು ಹರಡದೆ ದಪ್ಪವಾದ ದೋಸೆ ಮಾಡಿಕೊಳ್ಳಿ. ಈ ಹಿಟ್ಟು ದಪ್ಪವಾಗಿರಲಿ ನೀರಾಗಿ ಮಾಡಿಕೊಳ್ಳಬೇಡಿ. ಈ ದೋಸೆಯನ್ನು ಎರಡೂ ಕಡೆ ಕಾಯಿಸಿಕೊಳ್ಳಬೇಕು. ಇಷ್ಟಾದರೆ ಸವಿಯಲು ದೋಸೆ ರೆಡಿಯಾಗುತ್ತದೆ. ಬೆಳಗ್ಗೆ ಮೃದು ಮೃದುವಾದ ಮಂಡಕ್ಕಿ ದೋಸೆ ಸವಿಯಲು ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ದೋಸೆ ಟ್ರೈ ಮಾಡಿ ನೋಡಿ. ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ.
ಏಕಂದ್ರೆ ಈ ದೋಸೆ ಬಹಳ ಮೃದುವಾಗಿರುತ್ತೆ. ಹಾಗೆ ರುಚಿ ಕೂಡ ಅದ್ಭುತವಾಗಿರುತ್ತೆ. ಇನ್ನು ಈ ದೋಸೆಯೊಂದಿಗೆ ತೆಂಗಿನಕಾಯಿ ಚಟ್ನಿ ಇಲ್ಲವೆ ಹುರಿಗಡಲೆ, ಕಡಲೆ ಬೀಜದ ಚಟ್ನಿ ಮಾಡಿದರೆ ಇದರ ರುಚಿ ದುಪ್ಪಟ್ಟಾಗುತ್ತೆ.



Click it and Unblock the Notifications